ನವದೆಹಲಿ: ಕ್ರಿಕೆಟ್ ಎಂದರೆ ಬಹುಪಾಲು ಜನರ ಕಣ್ಣಮುಂದೆ ಕಾಂಚಾಣವೇ ಕಂಡುಬರುತ್ತದೆ. ಆದರೆ ಅದು ಕೇವಲ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ನಂತಹ ಬಲಾಢ್ಯ ರಾಷ್ಟ್ರಗಳ ಕ್ರಿಕೆಟಿಗರಲ್ಲಿ ಮಾತ್ರ ಎನ್ನುವುದು ಸಾಬೀತಾಗಿದೆ. ಒಂದು ಕಡೆ ಕೆಲವು ಕ್ರಿಕೆಟಿಗರು ಐಶಾರಾಮಿ ಜೀವನ ಸಾಗಿಸುತ್ತಿದ್ದರೆ, ಮತ್ತೊಂದು ಕಡೆ ಕ್ರಿಕೆಟ್ ನಂಬಿಕೊಂಡಿರುವ ಕೆಲವು ರಾಷ್ಟ್ರಗಳ ಕ್ರಿಕೆಟಿಗರಿಗೆ ತೊಡಲು ಶೂಗಳಿಗೂ ಗತಿಯಿಲ್ಲದಂತಾಗಿದೆ.
ಒಂದು ಕಾಲದಲ್ಲಿ ಭಾರತ, ಆಸ್ಟ್ರೇಲಿಯಾದಂತಹ ರಾಷ್ಟ್ರಗಳಿಗೆ ಮಣ್ಣು ಮುಕ್ಕಿಸಿದ್ದ ಜಿಂಬಾಬ್ವೆ ತಂಡದ ಆಟಗಾರರಿಗೆ ಇಂದು ಒಂದು ಜೊತೆ ಶೂ ಖರೀದಿಸಲು ಕೂಡ ಕಷ್ಟವಾಗಿದೆ. ಅವರು ಹರಿದ ಶೂಗಳನ್ನು ರಿಪೇರಿ ಮಾಡಿಕೊಂಡು ಆಡುತ್ತಿದ್ದಾರೆ ಎನ್ನುವುದೇ ಶೋಚನೀಯ ಸಂಗತಿ.
-
Time to put the glue away, I got you covered @ryanburl3 💁🏽 https://t.co/FUd7U0w3U7
— PUMA Cricket (@pumacricket) May 23, 2021 " class="align-text-top noRightClick twitterSection" data="
">Time to put the glue away, I got you covered @ryanburl3 💁🏽 https://t.co/FUd7U0w3U7
— PUMA Cricket (@pumacricket) May 23, 2021Time to put the glue away, I got you covered @ryanburl3 💁🏽 https://t.co/FUd7U0w3U7
— PUMA Cricket (@pumacricket) May 23, 2021
ಇತ್ತೀಚೆಗೆ ಜಿಂಬಾಬ್ವೆಯ ರಿಯಾನ್ ಬರ್ಲ್ ತಾವು ಶೂ ರಿಪೇರಿ ಮಾಡುತ್ತಿರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ, "ನಾವು ಪ್ರಾಯೋಜಕರನ್ನು ಪಡೆಯುವ ಯಾವುದೇ ಅವಕಾಶ ಸಿಕ್ಕರೆ, ಪ್ರತಿ ಸರಣಿಯ ನಂತರವೂ ನಮ್ಮ ಹರಿದ ಶೂಗಳನ್ನು ನಾವೇ ಅಂಟಿಸುವ ಅಗತ್ಯ ಇರುವುದಿಲ್ಲ." ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ನೆಟ್ಟಿಗರು ಕೂಡ ಮರುಕ ವ್ಯಕ್ತಪಡಿಸಿದ್ದರು.
ಆದರೆ ಈ ಟ್ವೀಟ್ ಟ್ವಿಟರ್ನಲ್ಲಿ ವೈರಲ್ ಆಗುತ್ತಿದ್ದಂತೆ ಸ್ಪೋರ್ಟ್ ಪರಿಕರಗಳ ತಯಾರಕ ದಿಗ್ಗಜ ಕಂಪನಿಯಾದ ಪ್ಯೂಮಾ ಜಿಂಬಾಬ್ವೆ ಆಟಗಾರರಿಗೆ ನೆರವು ನೀಡಲು ಮುಂದೆ ಬಂದಿದ್ದು, ಶೂ ಸ್ಪಾನ್ಸರ್ ಮಾಡುವ ಭರವಸೆ ನೀಡಿದೆ.
"ಗಮ್ ಅನ್ನು ದೂರವಿಡುವ ಸಮಯ ಬಂದಿದೆ ರಿಯಾನ್ ಬರ್ಲ್, ನಾವು ನಿಮ್ಮ ಆ ಸ್ಥಾನವನ್ನು ತುಂಬಲಿದ್ದೇವೆ" ಎಂದು ಟ್ವೀಟ್ ಮಾಡಿದೆ. ಪ್ಯೂಮಾ ಕ್ರಿಕೆಟ್ ಜಿಂಬಾಬ್ವೆ ಆಟಗಾರನ ನೆರವಿಗೆ ಬರುತ್ತಿದ್ದಂತೆ ವಿಶ್ವದೆಲ್ಲೆಡೆ ಕ್ರಿಕೆಟ್ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಇದನ್ನು ಓದಿ: ನಮ್ಮಿಂದ ಕೊಹ್ಲಿಯನ್ನು ಹಿಂದಿಕ್ಕುವುದು ಅಸಾಧ್ಯ: ವಾರ್ನರ್ ಹೀಗೆ ಹೇಳಿದ್ಯಾಕೆ?