ETV Bharat / sports

ಬಿಸಿಸಿಐ ಕೇಂದ್ರೀಯ ಗುತ್ತಿಗೆ: ರಹಾನೆ, ಪೂಜಾರ B ಗ್ರೇಡ್​ಗೆ, ಪಾಂಡ್ಯ C ಗ್ರೇಡ್​ಗೆ ಹಿಂಬಡ್ತಿ - ಅಜಿಂಕ್ಯ ರಹಾನೆ

ಕಳಪೆ ಫಾರ್ಮ್​ನಲ್ಲಿರುವ ಕಾರಣಕ್ಕೆ ಈಗಾಗಲೆ ರಹಾನೆ ಮತ್ತು ಪೂಜಾರ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಇದೇ ವಾರದಿಂದ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವರು ಅವಕಾಶ ವಂಚಿತರಾಗಿದ್ದಾರೆ. ಇದೀಗ ಕೇಂದ್ರೀಯ ಗುತ್ತಿಗೆಯಿಂದಲೂ ಹಿಂಬಡ್ತಿಗೆ ಒಳಗಾಗಿದ್ದಾರೆ.

Pujara, Rahane, Pandya get demoted in BCCI central contracts
ಬಿಸಿಸಿಐ ಕೇಂದ್ರೀಯ ಗುತ್ತಿಗೆ
author img

By

Published : Mar 2, 2022, 9:23 PM IST

Updated : Mar 2, 2022, 10:48 PM IST

ಮುಂಬೈ: ಭಾರತ ತಂಡದ ಅನುಭವಿ ಬ್ಯಾಟರ್​ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಎ ಗ್ರೇಡ್​ನಿಂದ ಬಿಗೆ ಹಿಂಬಡ್ತಿ ಪಡೆದಿದ್ದಾರೆ. ಇನ್ನು ಭಾರತ ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಎ ಗ್ರೇಡ್​ನಿಂದ ಸಿ ಗ್ರೇಡ್​ಗೆ ಹಿಂಬಡ್ತಿ ಪಡೆದಿದ್ದಾರೆ.

ಕಳಪೆ ಫಾರ್ಮ್​ನಲ್ಲಿರುವ ಕಾರಣಕ್ಕೆ ಈಗಾಗಲೆ ರಹಾನೆ ಮತ್ತು ಪೂಜಾರ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಇದೇ ವಾರದಿಂದ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವಕಾಶ ವಂಚಿತರಾಗಿದ್ದಾರೆ. ಇದೀಗ ಕೇಂದ್ರೀಯ ಗುತ್ತಿಗೆಯಿಂದಲೂ ಹಿಂಬಡ್ತಿಗೆ ಒಳಗಾಗಿದ್ದಾರೆ.

ಇನ್ನು ಭಾರತ ತಂಡದ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ದೂರ ಉಳಿದಿರುವ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಎ ಗ್ರೇಡ್​ನಿಂದ ಸಿ ಗ್ರೇಡ್​​ಗೆ ಕುಸಿತ ಕಂಡಿದ್ದಾರೆ. ಅವರು ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಬೌಲಿಂಗ್ ಮಾಡದಿರುವುದರಿಂದ ಅವರನ್ನು ಆಯ್ಕೆ ಸಮಿತಿ ತಂಡದಿಂದ ಕೈಬಿಟ್ಟಿದೆ. ಭಾರತ ತಂಡಕ್ಕೆ ಮತ್ತೆ ಮರಳಬೇಕಾದರೆ ಅವರು ಬೌಲಿಂಗ್​ನಲ್ಲಿ ಫಿಟ್​ನೆಸ್​ ಸಾಬೀತುಪಡಿಸಬೇಕೆಂದು ತಿಳಿಸಿದೆ.

ತಂಡದಿಂದ ಹೊರಬಿದ್ದ ನೋವಿನಲ್ಲಿ ಕೋಚ್​ ರಾಹುಲ್​ ದ್ರಾವಿಡ್​ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ವಿಕೆಟ್​ ಕೀಪರ್ ವೃದ್ಧಿಮಾನ್​ ಸಹಾ ಕೂಡ ಬಿ ​ನಿಂದ ಸಿ ಗ್ರೇಡ್​ಗೆ ಹಿಂಬಡ್ತಿ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಮಯಾಂಕ್​ ಅಗರ್​ವಾಲ್, ಭುವನೇಶ್ವರ್ ಕುಮಾರ್​, ಉಮೇಶ್ ಯಾದವ್​ ಕೂಡ ಬಿ ನಿಂದ ಸಿ ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ.

ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಎ+ ಗ್ರೇಡ್ ಹೊಂದಿರುವ​ ಆಟಗಾರರು 7 ಕೋಟಿ ರೂ ಪಡೆಯಲಿದ್ದಾರೆ. ಎ,ಬಿ ಮತ್ತು ಸಿ ಗ್ರೇಡ್​ನಲ್ಲಿರುವವರು ಕ್ರಮವಾಗಿ 5, 3 ಮತ್ತು 1 ಕೋಟಿ ರೂ ಪಡೆಯಲಿದ್ದಾರೆ. ಕಳೆದ ಬಾರಿ 28 ಆಟಗಾರರು ಗುತ್ತಿಗೆ ಪಡೆದುಕೊಂಡಿದ್ದರು. ಈ ಬಾರಿ 27 ಆಟಗಾರರಿಗೆ ಮಾತ್ರ ಅವಕಾಶ ಸಿಕ್ಕಿದೆ.

ಈ ವರ್ಷ ಬಡ್ತಿ ಪಡೆದುಕೊಂಡಿರುವ ಏಕೈಕ ಆಟಗಾರನೆಂದರೆ ಮೊಹಮ್ಮದ್​ ಸಿರಾಜ್ ಮಾತ್ರ. ಅವರು ಸಿ ಗ್ರೇಡ್​ನಿಂದ ಬಿ ಗ್ರೇಡ್​ಗೆ ಬಡ್ತಿ ಪಡೆದುಕೊಂಡಿದ್ದಾರೆ.ಕುಲ್ದೀಪ್ ಯಾದವ್​ ಮತ್ತು ನವದೀಪ್ ಸೈನಿ ಗುತ್ತಿಗೆಯಿಂದ ಹೊರಬಿದ್ದರೆ, ಸೂರ್ಯಕುಮಾರ್ ಯಾದವ್​ ಹೊಸದಾಗಿ ಗುತ್ತಿಗೆ ಪಡೆದುಕೊಂಡಿದ್ದಾರೆ.

A+ ಗ್ರೇಡ್​: ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ

A ಗ್ರೇಡ್​: ರವಿಚಂದ್ರನ್ ಅಶ್ವಿನ್​, ಕೆಎಲ್ ರಾಹುಲ್, ರಿಷಭ್ ಪಂತ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ

B ಗ್ರೇಡ್​: ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್​, ಇಶಾಂತ್ ಶರ್ಮಾ

C ಗ್ರೇಡ್​: ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಹಾ, ಮಯಾಂಕ್ ಅಗರ್ವಾಲ್, ಸೂರ್ಯಕುಮಾರ್ ಯಾದವ್​, ದೀಪಕ್ ಚಾಹರ್​, ಭುವನೇಶ್ವರ್ ಕುಮಾರ್​, ಉಮೇಶ್ ಯಾದವ್​, ಶಿಖರ್ ಧವನ್, ವಾಷಿಂಗ್ಟನ್ ಸುಂದರ್​, ಶುಬ್ಮನ್ ಗಿಲ್​, ಹನುಮ ವಿಹಾರ, ಯುಜ್ವೇಂದ್ರ ಚಹಲ್​,

ಇದನ್ನೂ ಓದಿ:ಸಿಎಸ್​ಕೆಗೆ ಆಘಾತ; ಬಹುತೇಕ 2022ರ ಐಪಿಎಲ್​ಗೆ ದೀಪಕ್​ ಚಾಹರ್ ಅಲಭ್ಯ

Last Updated : Mar 2, 2022, 10:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.