ETV Bharat / sports

ಯಂಗ್ ಪ್ಲೇಯರ್ಸ್​ ಅದ್ಭುತ ಪ್ರದರ್ಶನ: ರನ್​ ಹೊಳೆ ಹರಿಸದಿದ್ದರೆ ವಿರಾಟ್​​ ಕೊಹ್ಲಿಗೆ ಗೇಟ್​ಪಾಸ್​!? - ವಿರಾಟ್​ ಕೊಹ್ಲಿ ಬ್ಯಾಟಿಂಗ್​

ರನ್​ಗಳಿಕೆ ಮಾಡಲು ವಿರಾಟ್​ ಕೊಹ್ಲಿ ಪರದಾಡುತ್ತಿದ್ದು, ಇದೀಗ ಮುಂದಿನ ಕೆಲ ಪಂದ್ಯಗಳಲ್ಲಿ ಅವರ ಬ್ಯಾಟ್​ನಿಂದ ರನ್​ ಹರಿದು ಬರದಿದ್ದರೆ ಅವರ ಸ್ಥಾನಕ್ಕೆ ಕುತ್ತು ಬರಲಿದೆ.

Virat Kohli
Virat Kohli
author img

By

Published : Jul 8, 2022, 4:08 PM IST

ಬರ್ಮಿಂಗ್​ಹ್ಯಾಮ್​​(ಇಂಗ್ಲೆಂಡ್​): ಕಳೆದ ಎರಡೂವರೆ ವರ್ಷಗಳಿಂದ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ರನ್​ ಬರ ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇಂಗ್ಲೆಂಡ್​ ವಿರುದ್ಧ ನಡೆದ ಕೊನೆಯ ಟೆಸ್ಟ್​ ಪಂದ್ಯದಲ್ಲೂ ವಿರಾಟ್​ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ. ಹೀಗಾಗಿ, ಇಂಗ್ಲೆಂಡ್​ ವಿರುದ್ಧದ ಟಿ -20 ಹಾಗೂ ಏಕದಿನ ಪಂದ್ಯಗಳಲ್ಲಿ ಅವರು ರನ್​​​ ಹೊಳೆ ಹರಿಸುವ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಜಾಗದಲ್ಲಿ ಸ್ಥಾನ ಪಡೆದ ದೀಪಕ್ ಹೂಡಾ ಉತ್ತಮ ಪ್ರದರ್ಶನ ನೀಡಿದ್ದು, ಆಯ್ಕೆ ಸಮಿತಿ ಅವರ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಮುಂದಿನ ಕೆಲ ಪಂದ್ಯಗಳಲ್ಲಿ ರನ್ ಮಷಿನ್ ಖ್ಯಾತಿಯ ವಿರಾಟ್​ ರನ್​ಗಳಿಕೆ ಮಾಡುವಲ್ಲಿ ವಿಫಲವಾದರೆ ವಿಶ್ರಾಂತಿ ಹೆಸರಿನಲ್ಲಿ ಅವರಿಗೆ ಆಯ್ಕೆ ಸಮಿತಿ ಗೇಟ್ ಪಾಸ್ ನೀಡುವ ಸಾಧ್ಯತೆ ದಟ್ಟವಾಗಿದೆ.

ಕೊಹ್ಲಿ ಸ್ಥಾನಕ್ಕೆ ದೀಪಕ್ ಹೂಡಾ: ಐರ್ಲೆಂಡ್ ವಿರುದ್ಧದ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ದೀಪಕ್ ಹೂಡಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಮುಂಬರುವ ಪಂದ್ಯಗಳಲ್ಲಿ ವಿರಾಟ್​ ಬ್ಯಾಟಿಂಗ್​ನಲ್ಲಿ ಅಬ್ಬರಿಸದಿದ್ದರೆ ಅವರ ಜಾಗಕ್ಕೆ ದೀಪಕ್​ ಹೂಡಾ ಆಯ್ಕೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಉತ್ತಮ ಪ್ರದರ್ಶನ ನೀಡುತ್ತಿರುವ ದೀಪಕ್ ಹೂಡಾ
ಉತ್ತಮ ಪ್ರದರ್ಶನ ನೀಡುತ್ತಿರುವ ದೀಪಕ್ ಹೂಡಾ

ಸಪ್ಟೆಂಬರ್​-ಅಕ್ಟೋಬರ್​ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ -20 ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಟೀಂ ಇಂಡಿಯಾ ಬೆಸ್ಟ್​ ಪ್ಲೇಯಿಂಗ್​ XI ಹುಡುಕಾಟದಲ್ಲಿದೆ. ಹೀಗಾಗಿ, ಹೆಚ್ಚಿನ ಪ್ಲೇಯರ್ಸ್​​ಗೆ ಅವಕಾಶ ನೀಡುತ್ತಿದೆ. ನಿನ್ನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್​ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಆಸರೆಯಾಗುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿರಿ: ಟಿ-20 ವಿಶ್ವಕಪ್​ ಗೆಲ್ಲಲು ಭಾರತ ತನ್ನ 'ಬಿ ತಂಡ' ಕಳುಹಿಸಲಿ: ಗ್ರೇಮ್​ ಸ್ವಾನ್ ಮಾತಿನ ಮರ್ಮವೇನು!?

2022ರ ಐಪಿಎಲ್​​ನಲ್ಲೂ ವಿರಾಟ್​ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಭಾರತ ಟಿ -20 ತಂಡಕ್ಕೆ ಅಲಭ್ಯರಾಗುತ್ತಿರುವ ವಿರಾಟ್​​ ಕೊಹ್ಲಿ, ಇದೀಗ ಉಳಿದಿರುವ ಕೆಲ ಪಂದ್ಯಗಳಲ್ಲಿ ಕಮ್​ಬ್ಯಾಕ್ ಮಾಡಿದ್ದರೆ ಅವರ ಸ್ಥಾನಕ್ಕೆ ಹೊಸ ಪ್ಲೇಯರ್​ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಇನ್ನೂ ವೆಸ್ಟ್​ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೂ ವಿರಾಟ್​ ವಿಶ್ರಾಂತಿ ಪಡೆದುಕೊಂಡಿರುವ ಕಾರಣ, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಕೊನೆಯ ಎರಡು ಟಿ -20 ಪಂದ್ಯಗಳು ವಿರಾಟ್​ಗೆ ನಿರ್ಣಾಯಕವಾಗಿವೆ. ಒಂದು ವೇಳೆ ವೈಫಲ್ಯ ಅನುಭವಿಸಿದರೆ, ಅವರ ಸ್ಥಾನಕ್ಕೆ ಕಂಟಕ ಬರುವ ಸಾಧ್ಯತೆ ಇದೆ.

2ನೇ ಟಿ- 20ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ(ಕ್ಯಾಪ್ಟನ್​), ಇಶಾನ್ ಕಿಶನ್​, ವಿರಾಟ್​ ಕೊಹ್ಲಿ,ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್​, ರಿಷಭ್ ಪಂತ್​(ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್​, ಅಕ್ಸರ್ ಪಟೇಲ್, ರವಿ ಬಿಷ್ಣೋಯ್​, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ,ಆವೇಶ್ ಖಾನ್​, ಹರ್ಷಲ್ ಪಟೇಲ್​, ಉಮ್ರಾನ್ ಮಲಿಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.