ಆಕ್ಲೆಂಡ್ : ಈವರೆಗೆ ಮಹಿಳಾ ವಿಶ್ವಕಪ್‌ನಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಕಂಡಿರುವ ಭಾರತೀಯ ವನಿತೆಯರ ತಂಡ, ಶನಿವಾರ ಬಲಿಷ್ಟ ಆಸ್ಟ್ರೇಲಿಯನ್ನರ ವಿರುದ್ಧ ಸೆಣಸಲಿದೆ. ಸೆಮಿಫೈನಲ್ ಪ್ರವೇಶಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದರಿಂದ, ಮಿಥಾಲಿ ರಾಜ್ ಪಡೆಗೆ ಕಠಿಣ ಸವಾಲಾಗಿದೆ. ಗೆಲುವಿನ ಲಯಕ್ಕೆ ತರುವ ಜವಾಬ್ದಾರಿ ಹೊತ್ತಿಕೊಂಡಿರುವ ಅವರು, ಕೆಲವು ತಂತ್ರಗಾರಿಕೆ ಹೆಣೆಯುವುದು ಅನಿವಾರ್ಯವಾಗಿದೆ.
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಲಯ ಕಳೆದುಕೊಂಡಿದ್ದ ಮಿಥಾಲಿ ರಾಜ್ ಪಡೆಯ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಅದಕ್ಕೂ ಮುನ್ನ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತಂಡ ಗೆದ್ದು ಬೀಗಿತ್ತು. ಈವರೆಗೆ ಎರಡು ಪಂದ್ಯ ಸೋತರೆ, ಎರಡು ಗೆಲುವು ತನ್ನದಾಗಿಸಿಕೊಂಡಿದೆ. ಹಾಗಾಗಿ, ಭಾರತ ತಂಡಕ್ಕೆ ನಾಳೆ ನಡೆಯಲಿರುವ ಪಂದ್ಯವು ಬಹಳ ಮಹತ್ವದ್ದಾಗಿದೆ.
ಭಾರತ ಸೆಮಿಫೈನಲ್‌ಗೆ ಪ್ರವೇಶ ಮಾಡಬೇಕೆಂದರೆ ನಾಳೆ ನಡೆಯಲಿರುವ ಪಂದ್ಯವನ್ನು ಗೆಲ್ಲಲೇಬೇಕಾದ ಅನಿಯಾರ್ವಯತೆ ಇದೆ. ಬ್ಯಾಟಿಂಗ್ ಉತ್ತಮ ಪ್ರದರ್ಶನದ ಹೊರಾಗಿಯೂ ನ್ಯೂಜಿಲೆಂಡ್ ವಿರುದ್ಧ ಸೋತಿತು. ಈ ವಿಶ್ವಕಪ್‌ನಲ್ಲಿ ಕಳೆದ ನಾಲ್ಕೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಎದ್ದು ಕಂಡಿದೆ.
ನಾಳೆ ಅದು ಪುನಾರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ನಾಳೆ ನಾವು ಬ್ಯಾಟಿಂಗ್ನಲ್ಲಿ ಪರಿಪೂರ್ಣ ಪ್ರಾಬಲ್ಯ ಸಾಧಿಸುವ ವಿಶ್ವಾಸ ಹೊಂದಿದ್ದೇವೆ. ಬೌಲರ್‌ಗಳು ಸಹ ಹಿಂದೆ ಬೀಳುವ ಮಾತಿಲ್ಲ. ಅವರು ಸಹ ಎದುರಾಳಿ ತಂಡವನ್ನು ಕಟ್ಟಿ ಹಾಕಲಿದ್ದಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ.
ಆಸ್ಟ್ರೇಲಿಯಾ ತಂಡವು ತಾನು ಆಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಗೆದ್ದುಕೊಂಡು ಶ್ರೇಯಾಂಕದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗಾಗಿ, ನಾಳೆ ನಡೆಯಲಿರುವ ಪಂದ್ಯದಲ್ಲಿ ತನ್ನ ಗೆಲುವಿನ ಮುನ್ನೋಟವನ್ನು ಮುಂದುವರೆಸಲಿದೆಯೇ ಅಥವಾ ಈ ಗೆಲುವಿಗೆ ಟೀಂ ಇಂಡಿಯಾ ತಂಡವು ಕಂಟಕವಾಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಈ ಸಾರಿ ಸೆಮಿಫೈನಲ್ ಪ್ರವೇಶದ ಸನಿಹಕ್ಕೆ ಹೋಗಿದ್ದು, ನಾಳೆ ನಡೆಯಲಿರುವ ಜಿದ್ದಾಜಿದ್ದಿ ಕಾಳಗದಲ್ಲಿ ತಂಡ ಕೆಲವು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಲಿದೆ ಎಂದು ಅಂದಾಜು ಮಾಡಲಾಗಿದೆ.
ತಂಡಗಳು :
ಆಸ್ಟ್ರೇಲಿಯಾ: ಮೆಗ್ ಲ್ಯಾನಿಂಗ್ (ನಾಯಕಿ), ರಾಚೆಲ್ ಹೇನ್ಸ್ (ಉಪ ನಾಯಕಿ), ಡಾರ್ಸಿ ಬ್ರೌನ್, ನಿಕ್ ಕ್ಯಾರಿ, ಆಶ್ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಅಲಿಸ್ಸಾ ಹೀಲಿ, ಜೆಸ್ ಜೊನಾಸ್ಸೆನ್, ಅಲಾನಾ ಕಿಂಗ್, ತಾಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಅಮಂಡಾ-ಜೇಡ್ ವೆಲ್ಲಿಂಗ್ಟನ್.
ಭಾರತ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪ ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (WK), ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್.
ಪಂದ್ಯ ಆರಂಭ: ಬೆಳಗ್ಗೆ 6.30ಕ್ಕೆ