ETV Bharat / sports

IND vs AUS, ODI Series: ವಿಶ್ವಕಪ್​ ತಯಾರಿ, ಟೀಂ ಇಂಡಿಯಾ ಪಾಲಿಗೆ ಮಹತ್ವದ ಸರಣಿ - Hardik Pandya

ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಹೀಗಾಗಿ ನಾಳೆಯಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯು ಟೀಂ ಇಂಡಿಯಾ ಪಾಲಿಗೆ ಪ್ರಮುಖ್ಯತೆ ಪಡೆದಿದೆ.

preview-focus-on-indias-world-cup-preparation-begins-with-odi-series-opener-against-australia
IND vs AUS, ODI Series: ವಿಶ್ವಕಪ್​ ತಯಾರಿ, ಟೀಂ ಇಂಡಿಯಾ ಪಾಲಿಗೆ ಮಹತ್ವದ ಸರಣಿ
author img

By

Published : Mar 16, 2023, 6:29 PM IST

ಮುಂಬೈ (ಮಹಾರಾಷ್ಟ್ರ): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಆರಂಭವಾಗುತ್ತಿದೆ. ಈ ಸರಣಿಯು ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಕೌಶಲ್ಯ ಹಾಗೂ ಟೀಂ ಇಂಡಿಯಾದ ವಿಶ್ವಕಪ್ ಸಿದ್ಧತೆ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ರೋಹಿತ್​ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ಪಾಂಡ್ಯ ಏಕದಿನ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಟಿ20 ತಂಡದ ನಾಯಕರಾಗಿರುವ ಪಾಂಡ್ಯ, ಏಕದಿನಕ್ಕೆ ಉಪನಾಯಕರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು.

ಟೀಂ ಇಂಡಿಯಾ ಇತ್ತೀಚೆಗೆ ಬಾರ್ಡರ್ - ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದಿದೆ. ಈ ಮೂಲಕ ಇದೇ ಎದುರಾಳಿ ತಂಡ ಆಸೀಸ್​ ವಿರುದ್ಧ ಜೂನ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆದಿದೆ. ಇದೀಗ 50 ಓವರ್‌ ಪಂದ್ಯಗಳ ತಯಾರಿಯನ್ನು ಪ್ರಾರಂಭಿಸುವತ್ತ ತಂಡದ ಗಮನ ಹರಿಸುತ್ತಿದೆ. ಯಾಕೆಂದರೆ, ಈ ವರ್ಷದ ಕೊನೆಯಲ್ಲಿ ಭಾರತದಲ್ಲೇ ವಿಶ್ವಕಪ್ ಟೂರ್ನಿ ನಡೆಯಲಿದೆ.

2011ರಲ್ಲಿ ತವರಿನಲ್ಲಿ ಟೂರ್ನಿ ನಡೆದಾಗ ಎಂಎಸ್ ಧೋನಿ ನೇತೃತ್ವದ ತಂಡವು ವಿಶ್ವಕಪ್​ ಟ್ರೋಫಿ ಜಯಸಿತ್ತು. ಇದೀಗ ಮತ್ತೆ ಸ್ವದೇಶದಲ್ಲೇ ವಿಶ್ವಕಪ್​ ನಡೆಯುತ್ತಿರುವುದರಿಂದ ರೋಹಿತ್​ ಶರ್ಮಾ ಮತ್ತು ತಂಡದ ಮೇಲೂ ಇದೇ ರೀತಿಯ ನಿರೀಕ್ಷೆಗಳು ಅಭಿಮಾನಿಗಳಲ್ಲಿ ಇರುತ್ತವೆ. ತವರಿನಲ್ಲಿ ಆಡುವಾಗ ಟೀಂ ಇಂಡಿಯಾ ಯಾವುದೇ ಸ್ವರೂಪದ ಸರಣಿ ಆಡುವಾಗಲೂ ನಿರೀಕ್ಷೆಗಳು ವಿಶೇಷವಾಗಿ ಹೆಚ್ಚಿರುತ್ತವೆ. ಈ ವರ್ಷ ತವರಿನಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡು ಏಕದಿನ ಸರಣಿಗಳನ್ನು ಟೀಂ ಇಂಡಿಯಾ ತನ್ನ ಕೈವಶ ಮಾಡಿಕೊಂಡಿತ್ತು. ಹೀಗಾಗಿ ಹೆಚ್ಚಿನ ಅದ್ಭುತ ಪ್ರದರ್ಶನ ನೀಡಬೇಕೆಂಬ ಆಸೆಯನ್ನು ಅಭಿಮಾನಿಗಳು ಹೊಂದಿದ್ದಾರೆ.

ಕೇವಲ ಆರು ಏಕದಿನ ಪಂದ್ಯಗಳಲ್ಲಿ ಮೂರು ಶತಕಗಳೊಂದಿಗೆ 113.40ರ ಸರಾಸರಿಯಲ್ಲಿ 567 ರನ್ ಬಾರಿಸಿ ಶುಭಮನ್ ಗಿಲ್ ವಿಶ್ವಕಪ್ ವರ್ಷಕ್ಕೆ ಉತ್ತಮ ಆರಂಭ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ರೋಹಿತ್​ ಶರ್ಮಾ ಅನುಪಸ್ಥಿತಿಯು ಈ ಬಲಗೈ ಬ್ಯಾಟರ್‌ ಮೇಲೆ ಹೆಚ್ಚಿನ ನಿರೀಕ್ಷೆ ಹೆಚ್ಚಿಸಿದೆ. ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಕಳೆದ ಆರು ಪಂದ್ಯಗಳಲ್ಲಿ 67.60ರ ಸರಾಸರಿಯಲ್ಲಿ 338 ರನ್ ಗಳಿಸಿದ್ದಾರೆ. ಅವರ ವೃತ್ತಿ ಜೀವನದ 75ನೇ ಶತಕ ಸಿಡಿಸುವ ನಿರೀಕ್ಷೆಯೂ ಇದೆ.

ಟೀಂ ಇಂಡಿಯಾದ ಬೌಲಿಂಗ್​ ವಿಭಾಗದ ಮೇಲೂ ಹೆಚ್ಚಿನ ನಿರೀಕ್ಷೆ ಹೊಂದಲಾಗಿದೆ. ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ನೆಟ್ಸ್‌ನಲ್ಲಿ ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದು, ಇಬ್ಬರು ಲೆಗ್ ಸ್ಪಿನ್ನರ್‌ಗಳು ವಿಕೆಟ್‌ ಕಬಳಿಸುವ ಪ್ರಮುಖ ಅಸ್ತ್ರಗಳಾಗಿದ್ದಾರೆ. ಐದು ಪಂದ್ಯಗಳಲ್ಲಿ 11 ವಿಕೆಟ್‌ಗಳೊಂದಿಗೆ ಕಿತ್ತಿರುವ ಕುಲದೀಪ್ ಅತ್ಯುತ್ತಮ ಸ್ಪಿನ್ನರ್​ ಆಗಿದ್ದರೆ, ವೇಗದ ಬೌಲರ್‌ಗಳಲ್ಲಿ ಮೊಹಮ್ಮದ್ ಸಿರಾಜ್ ಮೇಲೂ ಭರವಸೆ ಇದೆ.

ತಂಡಗಳ ವಿವರ: ಭಾರತ - ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನದ್ಕತ್.

ಆಸ್ಟ್ರೇಲಿಯಾ - ಸ್ಟೀವನ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಆಡಮ್ ಝಂಪಾ.

ಪಂದ್ಯ ಸಮಯ : ಮಧ್ಯಾಹ್ನ 1.30

ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.