ETV Bharat / sports

IPL ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗ್ತಿಲ್ಲ ಪಂಜಾಬ್ ಒಡತಿ ಪ್ರೀತಿ ಜಿಂಟಾ.. ಕಾರಣ?

IPL Auction 2022: ಇಂಡಿಯನ್ ಪ್ರೀಮಿಯರ್ ಲೀಗ್​ಗೋಸ್ಕರ ಇಂದು, ನಾಳೆ ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದಕ್ಕಾಗಿ ಎಲ್ಲ ಫ್ರಾಂಚೈಸಿಗಳು ಈಗಾಗಲೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿವೆ.

Preity Zinta to skip IPL auction
Preity Zinta to skip IPL auction
author img

By

Published : Feb 12, 2022, 2:26 AM IST

ಮಹಾರಾಷ್ಟ್ರ/ಬೆಂಗಳೂರು: ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದಕ್ಕಾಗಿ ಎಲ್ಲ ಫ್ರಾಂಚೈಸಿಗಳು ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿವೆ. ಈ ಸಲದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 10 ಫ್ರಾಂಚೈಸಿಗಳು ಭಾಗಿಯಾಗ್ತಿದ್ದು, ಒಟ್ಟು 227 ಪ್ಲೇಯರ್ಸ್ ಖರೀದಿ ಮಾಡಲಿದ್ದಾರೆ.

ಮೆಗಾ ಹರಾಜು ಪ್ರಕ್ರಿಯಲ್ಲಿ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಕೂಡ ಭಾಗಿಯಾಗಲಿದೆ. ಆದರೆ, ತಂಡದ ಒಡತಿ ಪ್ರೀತಿ ಜಿಂಟಾ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಅವಳಿ ಮಕ್ಕಳ ತಾಯಿಯಾಗಿರುವ ಪ್ರೀತಿ ಜಂಟಾ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿರುವ ಕಾರಣ ಈ ಸಲದ ಹರಾಜು ಪ್ರಕ್ರಿಯೆಯಿಂದ ಹೊರ ಉಳಿಯಲು ನಿರ್ಧರಿಸಿದ್ದಾರೆ.

  • This year I’m going to miss the IPL Auction as I cannot leave my little ones & travel to India.The last couple of days have been hectic discussing d auction & all things cricket with our team.I wanted to reach out to our fans & ask them if they hv any player suggestions.. pic.twitter.com/oIOCqZT3PN

    — Preity G Zinta (@realpreityzinta) February 11, 2022 " class="align-text-top noRightClick twitterSection" data=" ">

ಆದರೆ, ತಂಡಕ್ಕಾಗಿ ಯಾವೆಲ್ಲ ಆಟಗಾರರ ಖರೀದಿ ಮಾಡಬೇಕು ಎಂಬುದರ ಬಗ್ಗೆ ಈಗಾಗಲೇ ಮಾತುಕತೆ ನಡೆಸಿದ್ದಾಗಿ ಪ್ರೀತಿ ತಿಳಿಸಿದ್ದಾರೆ. ಜೊತೆಗೆ ತಂಡಕ್ಕಾಗಿ ಯಾವೆಲ್ಲ ಆಟಗಾರರನ್ನ ಖರೀದಿ ಮಾಡಬೇಕು ಎಂಬುದರ ಬಗ್ಗೆ ನನಗೆ ಸಲಹೆ ನೀಡಿ ಎಂದು ಬಾಲಿವುಡ್ ನಟಿ ತಿಳಿಸಿದ್ದಾರೆ. ಈ ವರ್ಷದ ಐಪಿಎಲ್​ ಹರಾಜು ಪ್ರಕ್ರಿಯೆಯಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ. ಚಿಕ್ಕ ಮಕ್ಕಳನ್ನ ಬಿಟ್ಟು ಪ್ರಯಾಣ ಮಾಡಲು ಸಾಧ್ಯವಿಲ್ಲ. ಕಳೆದೆರಡು ದಿನಗಳಿಂದ ನಮ್ಮ ತಂಡದೊಂದಿಗೆ ಹರಾಜು ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿರಿ: ಮೊಣಕೈ ಗಾಯದಿಂದ ಕಂಗೆಟ್ಟ ಕೇನ್ ವಿಲಿಯಮ್ಸನ್ : 2022ರ ಐಪಿಎಲ್​ಗೆ ಅನುಮಾನ?

ಈ ಸಲದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿರುವ ಪಂಜಾಬ್ ಕಿಂಗ್ಸ್ ಬಳಿ 72 ಕೋಟಿ ರೂ. ಬಾಕಿ ಉಳಿದಿದ್ದು, 21 ಆಟಗಾರರ ಖರೀದಿ ಮಾಡಲಿದೆ. ಈ ಸಲದ ರಿಟೈನ್​ ವೇಳೆ 14 ಕೋಟಿ ರೂ. ನೀಡಿ ಕನ್ನಡಿಗ ಮಯಾಂಕ್​ ಅಗರವಾಲ್​ ಹಾಗೂ 4 ಕೋಟಿ ರೂ. ನೀಡಿ ಹರ್ಷದೀಪ್​ ಸಿಂಗ್​ಗೆ ತಂಡದಲ್ಲಿ ಉಳಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.