ETV Bharat / sports

ಆಸ್ಟ್ರೇಲಿಯನ್ನರು 2ನೇ ಭಾಗದ ಐಪಿಎಲ್​ನಲ್ಲಾಡುವುದು ಈ ಕಾರಣಕ್ಕೆ ಅತ್ಯುತ್ತಮ ನಿರ್ಧಾರ: ಪಾಂಟಿಂಗ್ ಸಮರ್ಥನೆ - Australia cricketers playing IPL

ವಿಶ್ವಕಪ್​ ನಡೆಯುವ ಸ್ಥಳದಲ್ಲಿ ಮತ್ತು ವಿಶ್ವದ ಅತ್ಯುತ್ತಮ ಟಿ-20 ಡೊಮೆಸ್ಟಿಕ್​ ಲೀಗ್​ನಲ್ಲಿ ಆಡುವುದು ವಿಶ್ವಕಪ್​ಗೆ ಸಿದ್ಧತೆಗೆ ಅತ್ಯುತ್ತಮ ವೇದಿಕೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್​ ಮುಖ್ಯ ಕೋಚ್ ಆಗಿರುವ ರಿಕಿ ಪಾಂಟಿಂಗ್ ಹೇಳಿದ್ದಾರೆ.

Ponting backs Aussies to play in rescheduled IPL in UAE
ರಿಕಿ ಪಾಂಟಿಂಗ್
author img

By

Published : Aug 14, 2021, 4:56 PM IST

ಮೆಲ್ಬೋರ್ನ್​: UAEನಲ್ಲಿ ನಡೆಯಲಿರುವ ದ್ವಿತೀಯಾರ್ಧದ ಐಪಿಎಲ್​ನಲ್ಲಿ ಆಡುವುದಕ್ಕೆ ಆಸೀಸ್ ಕ್ರಿಕೆಟಿಗರು ಒಪ್ಪಿಕೊಂಡಿರುವುದನ್ನು ಸಮರ್ಥಿಸಿಕೊಂಡಿರುವ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್, ಇದು ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ತಯಾರಿಗೆ ಅನುಕೂಲ ಕಲ್ಪಿಸಿದೆ ಎಂದು ಹೇಳಿದ್ದಾರೆ.

ಮೊದಲಾರ್ಧದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇದೀಗ ದ್ವಿತೀಯಾರ್ಧದಲ್ಲಿ ಒಟ್ಟು 31 ಪಂದ್ಯಗಳು ಯುಎಇಯ ಮೂರು ಕ್ರೀಡಾಂಗಣದಲ್ಲಿ ನಡೆಯಲಿದೆ. ಯುಎಇನಲ್ಲಿ ಬಿಸಿಸಿಐ ಟೂರ್ನಮೆಂಟ್​ನಲ್ಲಿ ​ಭಾಗವಹಿಸಬಾರದೆಂದು ಮಾಜಿ ಕ್ರಿಕೆಟಿಗರು ಹೇಳಿದ್ದರು. ಆದರೆ, ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗರು ಸೇರಿದಂತೆ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟಿಗರು ಕೂಡ ಮುಂದುವರಿದ ಐಪಿಎಲ್​ ಆಡಲು ಒಪ್ಪಿದ್ದಾರೆ. ಈ ನಿರ್ಧಾರವನ್ನು ಪಾಂಟಿಂಗ್ ಸಮರ್ಥಿಸಿಕೊಂಡಿದ್ದಾರೆ.

Ponting backs Aussies to play in rescheduled IPL in UAE
ಡೇವಿಡ್ ವಾರ್ನರ್​, ಗ್ಲೇನ್ ಮ್ಯಾಕ್ಸ್​ವೆಲ್ , ಸ್ಟೀವ್ ಸ್ಮಿತ್

ಯಾವ ಹುಡುಗರು ಕಳೆದ ಮೂರು ನಾಲ್ಕು ತಿಂಗಳಿನಿಂದ ಕ್ರಿಕೆಟ್​ ಆಡಿದಲ್ಲವೋ, ಅಂತಹವರಿಗೆ ಕಮ್​ ಬ್ಯಾಕ್ ಮಾಡಲು ವಿಶ್ವದರ್ಜೆಯ ಬೌಲರ್​ಗಳ ಎದುರು ಉತ್ತಮ ಗುಣಮಟ್ಟದ ಕ್ರಿಕೆಟ್​ ಆಡುವುದು ಅಗತ್ಯವಾಗಿದೆ ಎಂದು ಪಾಂಟಿಂಗ್ ಆಸ್ಟ್ರೇಲಿಯಾ ಟೆಸ್ಟ್​ ನಾಯಕ ಟಿಮ್ ಪೇನ್​ ಅವರೊಂದಿಗೆ ಸೆನ್​ ರೇಡಿಯೋದಲ್ಲಿ ನಡೆಸಿದ ಸಂವಾದದಲ್ಲಿ ಹೇಳಿದ್ದಾರೆ.

ವಿಶ್ವಕಪ್​ ನಡೆಯುವ ಸ್ಥಳದಲ್ಲಿ ಮತ್ತು ವಿಶ್ವದ ಅತ್ಯುತ್ತಮ ಟಿ-20 ಡೊಮೆಸ್ಟಿಕ್​ ಲೀಗ್​ನಲ್ಲಿ ಆಡುವುದು ವಿಶ್ವಕಪ್ ಸಿದ್ಧತೆಗೆ ಅತ್ಯುತ್ತಮ ವೇದಿಕೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್​ ಮುಖ್ಯ ಕೋಚ್ ಆಗಿರುವ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಇತ್ತೀಚೆಗೆ ಅಂತ್ಯಗೊಂಡ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿದ್ದ ರಿಲೇ ಮೆರಿಡಿತ್​, ಡೇನಿಯಲ್ ಕ್ರಿಶ್ಚಿಯನ್​, ಮೊಯಿಸಸ್​ ಹೆನ್ರಿಕ್ಸ್, ಮಿಚೆಲ್ ಮಾರ್ಷ್​, ಆ್ಯಡಂ ಜಂಪಾ, ಆ್ಯಂಡ್ರ್ಯೂ ಟೈ ಮತ್ತು ಜೋಶ್ ಪಿಲಿಪ್ಪೆ ಐಪಿಎಲ್​ನಲ್ಲಿ ಒಪ್ಪಂದ ಹೊಂದಿದ್ದಾರೆ. ಇವರ ಜೊತೆಗೆ ಸಿಎ ವಾರ್ಷಿಕ ಗುತ್ತಿಗೆಯಲ್ಲಿಲ್ಲದ ನಥನ್ ಕೌಲ್ಟರ್​ ಲೈನ್, ಕ್ರಿಸ್ ಲಿನ್, ಬೆನ್ ಕಟಿಂಗ್ ಕೂಡ ಐಪಿಎಲ್​ ಒಪ್ಪಂದ ಹೊಂದಿದ್ದಾರೆ.

ಇನ್ನು ಆಸ್ಟ್ರೇಲಿಯಾದ ಇತ್ತೀಚಿನ ಸರಣಿಗಳಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್, ಮ್ಯಾಕ್ಸ್​ವೆಲ್, ಸ್ಟೀವ್ ಸ್ಮಿತ್, ಕೇನ್ ರಿಚರ್ಡ್ಸನ್, ಜೇ ರಿಚರ್ಡ್ಸನ್​, ಡೇನಿಯಲ್ ಸ್ಯಾಮ್ಸ್​ ಕೂಡ ಐಪಿಎಲ್​ ಮೂಲಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲಿದ್ದಾರೆ.

ಇದನ್ನು ಓದಿ:ತಂಡದಿಂದ ಕೈಬಿಟ್ಟ ನೋವನ್ನೇ ಇಂಧನವಾಗಿಸಿಕೊಂಡು ಕನ್ನಡಿಗ ಕೆ ಎಲ್‌ ರಾಹುಲ್​ ಭರ್ಜರಿ ಕಮ್​ಬ್ಯಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.