ETV Bharat / sports

DC vs CSK ಕ್ವಾಲಿಫೈಯರ್​​​​​ 1: ಪ್ಲೇ-ಆಫ್​​ ಸಂಪೂರ್ಣವಾಗಿ ಭಿನ್ನ, ನಮ್ಮ ಆಟ ಇದೀಗ ಆರಂಭ ಎಂದ ಪಾಂಟಿಂಗ್ - ಕ್ವಾಲಿಫೈಯರ್​ 1

14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ನಾಳೆ ಡೆಲ್ಲಿ - ಚೆನ್ನೈ ತಂಡ ಮೊದಲ ಕ್ವಾಲಿಫೈಯರ್​​​ ಸ್ಥಾನಕ್ಕಾಗಿ ಸೆಣಸಾಟ ನಡೆಸಲಿದ್ದು, ಮತ್ತಷ್ಟು ಹೊಸ ಯೋಜನೆಗಳೊಂದಿಗೆ ಮೈದಾನಕ್ಕಿಳಿಯಲಿವೆ.

Ponting
Ponting
author img

By

Published : Oct 9, 2021, 7:06 PM IST

ದುಬೈ(ಯುಎಇ): ಇಂಡಿಯನ್​​ ಪ್ರೀಮಿಯರ್ ಲೀಗ್​ನ ಲೀಗ್​ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಇದೀಗ ಕ್ವಾಲಿಫೈಯರ್​​ ಹೋರಾಟ ಆರಂಭಗೊಳ್ಳಲಿದೆ. ಅಂಕಪಟ್ಟಿಯಲ್ಲಿ ಟಾಪ್​​ 4 ತಂಡಗಳು ಪ್ಲೇ - ಆಫ್​ಗೆ ಪ್ರವೇಶ ಪಡೆದುಕೊಂಡಿದ್ದು, ಡೆಲ್ಲಿ-ಸಿಎಸ್​​ಕೆ ಹಾಗೂ ಕೋಲ್ಕತ್ತಾ - ಬೆಂಗಳೂರು ತಂಡ ಸೆಣಸಾಟ ನಡೆಸಲಿವೆ.

ನಿನ್ನೆ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​​ ಕೊನೆಯ ಎಸೆತದಲ್ಲಿ ಸೋಲು ಕಂಡಿರುವ ಹೊರತಾಗಿ ಕೂಡ ಐಪಿಎಲ್​ ಪಾಯಿಂಟ್​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇದೀಗ ಕ್ವಾಲಿಫೈಯರ್​​ 1 ಸ್ಥಾನಕ್ಕಾಗಿ ಚೆನ್ನೈ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ, ನೇರವಾಗಿ ಫೈನಲ್​ಗೆ ಪ್ರವೇಶ ಪಡೆದುಕೊಳ್ಳುವ ತವಕದಲ್ಲಿರುವ ಡೆಲ್ಲಿ, ಇದೀಗ ಹೊಸ ಗೇಮ್​ ಪ್ಲಾನ್​​ನೊಂದಿಗೆ ಕಣಕ್ಕಿಳಿಯಲಿದೆ.

DC vs CSK
ಡೆಲ್ಲಿ ಕ್ಯಾಪ್ಟನ್​ ರಿಷಭ್​, ಚೆನ್ನೈ ನಾಯಕ ಧೋನಿ

ಉಭಯ ತಂಡಗಳ ನಡುವೆ ನಾಳೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಡೆಲ್ಲಿ ತಂಡದ ಕೋಚ್​ ಪಾಂಟಿಂಗ್ ಮಾತನಾಡಿದ್ದಾರೆ. ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ನಾವು ಸೋಲು ಕಂಡಿದ್ದು, ನಮ್ಮಲ್ಲಿ ನಡೆದಿರುವ ತಪ್ಪು ತಿದ್ದಿಕೊಳ್ಳಲು ಉತ್ತಮ ಅವಕಾಶ. ಮುಂದಿನ ಪಂದ್ಯದಲ್ಲಿ ಈ ರೀತಿಯ ತಪ್ಪು ಆಗದಂತೆ ನೋಡಿಕೊಳ್ಳಬೇಕಿದೆ. ಲೀಗ್​ ಹಂತದ ಪಂದ್ಯಗಳಿಗೆ ಹೋಲಿಕೆ ಮಾಡಿದಾಗ ಪ್ಲೇ-ಆಫ್​​ ಸಂಪೂರ್ಣವಾಗಿ ವಿಭಿನ್ನವಾಗಿರಲಿದ್ದು, ನಮ್ಮ ಆಟ ಇದೀಗ ಶುರುವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿರಿ: ವಿರಾಟ್​, ರೋಹಿತ್​ಗಿಂತಲೂ ರಾಹುಲ್​ ಬಳಿ ಹೆಚ್ಚಿನ ಬ್ಯಾಟಿಂಗ್​ ಸಾಮರ್ಥ್ಯ: ಗೌತಮ್​ ಗಂಭೀರ್

ಲೀಗ್​ ಹಂತದವರೆಗೆ ನಾವು ಉತ್ತಮವಾದ ಕ್ರಿಕೆಟ್​ ಆಡಿದ್ದೇವೆ. ಅದರ ಪ್ರತಿಫಲವಾಗಿ ತಂಡ ಮೊದಲ ಸ್ಥಾನದಲ್ಲಿದ್ದು, ತಂಡದ ಪ್ಲೇಯರ್ಸ್​ಗಳಿಂದ ಅತ್ಯದ್ಭುತ ಪ್ರದರ್ಶನ ಮೂಡಿ ಬರುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.