ETV Bharat / sports

ಅಹಮದಾಬಾದ್​ ಪಿಚ್​ ಫೋಟೋ ತೆಗೆದ ಪ್ಯಾಟ್​​ ಕಮಿನ್ಸ್​: ಸಾಕ್ಷ್ಯಕ್ಕಾಗಿ ಚಿತ್ರ ತೆಗೆದರಾ ಆಸೀಸ್​ ನಾಯಕ?

author img

By ETV Bharat Karnataka Team

Published : Nov 18, 2023, 6:56 PM IST

Ahmedabad pitch: ಮೈದಾನಕ್ಕೆ ಬಂದು ಪಿಚ್​ ವೀಕ್ಷಿಸಿದ ಪ್ಯಾಟ್​​ ಕಮಿನ್ಸ್​ ಮೊಬೈಲ್​ನಲ್ಲಿ ಫೋಟೋ ಕ್ಲಿಕ್ಕಿಸಿದ್ದಾರೆ. ಕಮಿನ್ಸ್​ ಪಿಚ್​ನ ಫೋಟೋ ತೆಗೆಯುತ್ತಿರುವುದು ಸಾಮಾಜಿಕ ಜಾತಲಾಣದಲ್ಲಿ ವೈರಲ್​ ಆಗುತ್ತಿದೆ.

Pat Cummins
Pat Cummins

ಅಹಮದಾಬಾದ್ (ಗುಜರಾತ್​): ವಿಶ್ವಕಪ್​ ಪಂದ್ಯಗಳಲ್ಲಿ ಭಾರತ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಈ ಗೆಲುವಿನ ಹಿಂದೆ ಆಟಗಾರರ ಶ್ರಮ, ಅವರ ಆಟ ಎಲ್ಲರಿಗೂ ಕಾಣುತ್ತದೆ. ಆದರೆ ಕೆಲವರು ತಂಡದ ಗೆಲುವಿಗಾಗಿ ಪಿಚ್​ಗಳನ್ನು ತಮಗೆ ಬೇಕಾದಂತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಗಳನ್ನು ಮಾಡಿದ್ದಾರೆ. ಇದಲ್ಲದೇ ಭಾರತದ ಆಟಗಾರರಿಗೆ ಬೇರೆಯೇ ಬಾಲ್​ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಈ ಎಲ್ಲ ಆರೋಪಗಳ ಬಗ್ಗೆ ಆಟಗಾರರು ತಲೆಕೆಡಿಸಿಕೊಳ್ಳುವುದಿಲ್ಲ. ಸೆಮೀಸ್​ ಪಂದ್ಯದ ವೇಳೆಯೂ ಪಿಚ್​ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು, ಆದರೆ, ಈ ಬಗ್ಗೆ ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್​ ಸ್ಪಷ್ಟನೆ ನೀಡಿದ್ದರು. ಭಾರತ ಉತ್ತಮವಾಗಿ ಆಡಿ ಗೆದ್ದಿದೆ. ಪಿಚ್​ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದ್ದರು.

ಈಗ ಫೈನಲ್​ ಪಂದ್ಯಕ್ಕೂ ಒಂದು ದಿನ ಮೊದಲು ಮೈದಾನಕ್ಕೆ ಬಂದಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​​ ಕಮಿನ್ಸ್ ತಮ್ಮ ಮೊಬೈಲ್​ನಲ್ಲಿ ಪಿಚ್​ನ ಫೋಟೋ ಕ್ಲಿಕ್ಕಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ನಾಳೆ ಪಂದ್ಯದ ವೇಳೆ ಪಿಚ್​ ಬದಲಾಗಿದ್ದಲ್ಲಿ ಸಾಕ್ಷಿಗಾಗಿ ಫೋಟೋ ತೆಗೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಜಾನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಿನ್ಸ್​​​, "ಎದುರಾಳಿಯಿಂದ ಬರುವ ಪ್ರತಿಯೊಂದು ಬಾಲ್​ ಎದುರಿಸಲು ಸಿದ್ಧರಾಗಿದ್ದೇವೆ. ನಮ್ಮ ಬಳಿಯೂ ಅಗತ್ಯ ಯೋಜನೆಗಳಿವೆ. ಅವುಗಳನ್ನು ನಾಳೆ ಮೈದಾನದಲ್ಲಿ ಪ್ರಯೋಗಿಸಿ ಯಶಸ್ಸು ಕಾಣಲು ಚಿಂತಿಸುತ್ತೇವೆ" ಎಂದು ವಿಶ್ವಾಸದಲ್ಲೇ ಉತ್ತರಿಸಿದ್ದರು.

ಐಸಿಸಿ ಅಧಿಕಾರಿಗಳಿಂದ ಪಿಚ್​ ಪರೀಕ್ಷೆ: ವಿಶ್ವಕಪ್​ನ ಪ್ರತಿ ಪಂದ್ಯಗಳ ಮೈದಾನ ಮತ್ತು ಪಿಚ್​ಗಳನ್ನು ಐಸಿಸಿಯ ಅಧಿಕಾರಿಗಳು ವೀಕ್ಷಿಸುತ್ತಾರೆ. ಪಂದ್ಯದ ನಂತರ ತಂಡಗಳ ಪ್ರದರ್ಶನದ ಆಧಾರದ ಮೇಲೆ ಪಿಚ್​ ಮತ್ತು ಮೈದಾನಕ್ಕೆ ಅಧಿಕಾರಿಗಳು ಅಂಕವನ್ನು ನೀಡುತ್ತಾರೆ. ಐಸಿಸಿ ಈ ಎಲ್ಲಾ ಕ್ರಮಗಳನ್ನು ಅನುಸರಿಸುತ್ತಿದ್ದರೂ, ಬಿಸಿಸಿಐಯ ಹಸ್ತಕ್ಷೇಪದ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಭಾರತದ ಪಿಚ್ ಆಯ್ಕೆಯಲ್ಲಿ ಬಿಸಿಸಿಐ ಮಧ್ಯಪ್ರವೇಶಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

2003ರ ವಿಶ್ವಕಪ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡ ಫೈನಲ್​ನಲ್ಲಿ ಮುಖಾಮುಖಿ ಆಗಿತ್ತು. ಅಂದು ಭಾರತ ಸೋಲನುಭವಿಸಿತ್ತು. 20 ವರ್ಷದ ನಂತರ ಒಂದೇ ವೇದಿಕೆಯಲ್ಲಿ ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ. 2003ರ ವಿಶ್ವಕಪ್​ ಫೈನಲ್​ ಮುಖಾಮುಖಿಯ ಸಮಯದಲ್ಲಿ ಭಾರತ 8 ಪಂದ್ಯ ಗೆದ್ದಿತ್ತು ಮತ್ತು ಆಸ್ಟ್ರೇಲಿಯಾ 10 ಪಂದ್ಯಗಳನ್ನು ಗೆದ್ದಿತ್ತು. 2023ರಲ್ಲಿ ಈ ಅಂಕಿ - ಅಂಶ ತದ್ವಿರುದ್ಧ ಆಗಿದೆ.

ಇದನ್ನೂ ಓದಿ: ವಿರಾಟ್ ಶ್ರೇಷ್ಠ ಕ್ರಿಕೆಟರ್, ರೋಹಿತ್ ವಿಶ್ವಕಪ್ ಬೆಸ್ಟ್ ಪ್ಲೇಯರ್: ದಿಗ್ಗಜ ಗುಂಡಪ್ಪ ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.