ದುಬೈ: 2023ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಪ್ಯಾಟ್ ಕಮಿನ್ಸ್ ಐಪಿಎಲ್ ಇತಿಹಾಸದಲ್ಲಿ ದಾಖಲೆಗೆ ಬಿಕರಿ ಆದ ಆಟಗಾರರಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ನಡುವೆ ನಡೆದ ಪೈಪೋಟಿಯಲ್ಲಿ 20.50 ಕೋಟಿಗೆ ಬಿಕರಿಯಾದರು. 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ ಮಿನಿ ಹರಾಜು ದುಬೈನ ಕೋಲಾ ಅರೆನಾದಲ್ಲಿ ನಡೆಯುತ್ತಿದೆ.
-
THE BIGGEST IPL BID EVER 😱
— IndianPremierLeague (@IPL) December 19, 2023 " class="align-text-top noRightClick twitterSection" data="
HISTORY CREATED here at the #IPLAuction
Australia's World Cup winning captain Pat Cummins is SOLD to @SunRisers for a HISTORIC INR 20.5 Crore 💰💰💰💰#IPL pic.twitter.com/bpHJjfKwED
">THE BIGGEST IPL BID EVER 😱
— IndianPremierLeague (@IPL) December 19, 2023
HISTORY CREATED here at the #IPLAuction
Australia's World Cup winning captain Pat Cummins is SOLD to @SunRisers for a HISTORIC INR 20.5 Crore 💰💰💰💰#IPL pic.twitter.com/bpHJjfKwEDTHE BIGGEST IPL BID EVER 😱
— IndianPremierLeague (@IPL) December 19, 2023
HISTORY CREATED here at the #IPLAuction
Australia's World Cup winning captain Pat Cummins is SOLD to @SunRisers for a HISTORIC INR 20.5 Crore 💰💰💰💰#IPL pic.twitter.com/bpHJjfKwED
2 ಕೋಟಿ ಮೂಲ ಬೆಲೆಯೊಂದಿಗೆ ಕಮ್ಮಿನ್ಸ್ ಬಿಡ್ಡಿಂಗ್ ವಾರ್ಗೆ ಮುಂಬೈ ಇಂಡಿಯನ್ಸ್ (ಎಂಐ) ಇಳಿಯಿತು. ನಂತರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪೈಪೋಟಿ ಏರ್ಪಟ್ಟಿತು. ಮುಂಬೈ ಹಿಂದೆ ಸರಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿಯಿತು. ಆದರೆ ಆರ್ಸಿಬಿಯ ಜೊತೆ ದೊಡ್ಡ ಹೋರಾಟ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್. ಆರ್ಸಿಬಿ ಕೈಯಲ್ಲಿ 23 ಕೋಟಿ ಇದ್ದರೆ, ಹೈದರಾಬಾದ್ ಬಳಿ 25 ಕೋಟಿ ಇತ್ತು.
ಹಣದ ಮಿತಿಯ ಅರಿವಿದ್ದರೂ ಉಭಯ ತಂಡಗಳು 'ನೀ ಕೊಡೆ ನಾ ಬಿಡೆ' ಎಂಬಂತೆ ಬಿಡ್ ಮಾಡಲು ಆರಂಭಿಸಿದರು. 10 ಕೋಟಿ ದಾಟಿ 20 ಕೋಟಿಗೆ ತಲುಪಿತು. ತಂಡಗಳ ಬಳಿ ಇದ್ದ ಒಟ್ಟು ಮೊತ್ತದ ಹತ್ತಿರ ಬಿಡ್ ಮೊತ್ತ ಬಂದರೂ ಇಬ್ಬರೂ ಸತತ ಪೈಪೋಟಿ ನಡೆಸಿದರು. ಬಿಡ್ಡಿಂಗ್ 20ಕೋಟಿ ದಾಟುತ್ತಿದ್ದಂತೆ ಉಳಿದ ತಂಡಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. 20.50 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಖರೀದಿಸಿತು.
-
𝑻𝒉𝒊𝒔 𝒍𝒊𝒕𝒕𝒍𝒆 PAT 𝒐𝒇 𝒍𝒊𝒇𝒆 𝒊𝒔 𝒄𝒂𝒍𝒍𝒆𝒅 𝑯𝒂𝒑𝒑𝒊𝒏𝒆𝒔𝒔 🧡
— SunRisers Hyderabad (@SunRisers) December 19, 2023 " class="align-text-top noRightClick twitterSection" data="
Welcome, Cummins! 🫡#HereWeGOrange pic.twitter.com/qSLh5nDbLM
">𝑻𝒉𝒊𝒔 𝒍𝒊𝒕𝒕𝒍𝒆 PAT 𝒐𝒇 𝒍𝒊𝒇𝒆 𝒊𝒔 𝒄𝒂𝒍𝒍𝒆𝒅 𝑯𝒂𝒑𝒑𝒊𝒏𝒆𝒔𝒔 🧡
— SunRisers Hyderabad (@SunRisers) December 19, 2023
Welcome, Cummins! 🫡#HereWeGOrange pic.twitter.com/qSLh5nDbLM𝑻𝒉𝒊𝒔 𝒍𝒊𝒕𝒕𝒍𝒆 PAT 𝒐𝒇 𝒍𝒊𝒇𝒆 𝒊𝒔 𝒄𝒂𝒍𝒍𝒆𝒅 𝑯𝒂𝒑𝒑𝒊𝒏𝒆𝒔𝒔 🧡
— SunRisers Hyderabad (@SunRisers) December 19, 2023
Welcome, Cummins! 🫡#HereWeGOrange pic.twitter.com/qSLh5nDbLM
ಐತಿಹಾಸಿಕ ಖರೀದಿ: ಈವರೆಗಿನ ಮೆಗಾ ಹರಾಜು ಮತ್ತು ಮಿನಿ ಹರಾಜಿನಲ್ಲಿ ಇದು ದೊಡ್ಡ ಬೆಲೆಯಾಗಿದೆ. ಈ ಮೊದಲು ಸ್ಯಾಮ್ ಕುರನ್ 18.50 ಕೋಟಿ ರೂ.ಗಳ ಬೆಲೆಗೆ ಬಿಕರಿ ಆಗಿದ್ದು ದಾಖಲೆಯಾಗಿತ್ತು. ಈ ವರ್ಷ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ವರ್ಷದ ಮಧ್ಯಂತರದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ನವೆಂಬರ್ನಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿದ್ದರು.
ಈ ವರೆಗೂ ಹೆಚ್ಚಿ ಮೊತ್ತಕ್ಕೆ ಬಿಕರಿ ಆದ ಆಟಗಾರರು: ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕುರನ್ ಅವರನ್ನು ಪಂಜಾಬ್ ಕಿಂಗ್ಸ್ - ₹18.5 ಕೋಟಿಗೆ ಖರೀದಿಸಿದ್ದು ಐಪಿಎಲ್ ಹರಾಜು ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ದುಬಾರಿ ಮೊತ್ತ ಎನಿಸಿಕೊಂಡಿದ್ದರು. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ನಂತರದ ಸ್ಥಾನದಲ್ಲಿದ್ದಾರೆ. ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ - ₹ 17.50 ಕೋಟಿಗೆ ಖರೀದಿಸಿತ್ತು. ಉಳಿದಂತೆ ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ - ₹ 16.25 ಕೋಟಿ, ಕ್ರಿಸ್ ಮೋರಿಸ್ ರಾಜಸ್ಥಾನ್ ರಾಯಲ್ಸ್ - ₹ 16.25 ಕೋಟಿ, ಯುವರಾಜ್ ಸಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು - ₹ 16 ಕೋಟಿ.
ಇದನ್ನೂ ಓದಿ: ಐಪಿಎಲ್ ಹರಾಜು: ದಾಖಲೆಯ ಮೊತ್ತಕ್ಕೆ ಹೈದರಾಬಾದ್ ತಂಡಕ್ಕೆ ಬಿಕರಿಯಾದ ಪ್ಯಾಟ್ ಕಮಿನ್ಸ್