ಇಸ್ಲಾಮಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಯಾಸಿರ್ ಶಾ ವಿರುದ್ಧ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಬಾಲಕಿಗೆ ಯಾಸಿರ್ ಶಾ ಮತ್ತು ಆತನ ಸ್ನೇಹಿತ ಫರ್ಹಾನ್ ಸೇರಿ ಗನ್ ತೋರಿಸಿ ಅತ್ಯಾಚಾರ ಎಸಗಿದ್ದಾರೆ.
ಜೊತೆಗೆ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರ ಪರಿಣಾಮ ಕೆಟ್ಟದಾಗಿರುತ್ತದೆ ಯಾಸಿರ್ ಎಚ್ಚರಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಇಸ್ಲಾಮಾಬಾದ್ನ ಶಾಲಿಮಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾಸಿರ್ ಮತ್ತು ಆತನ ಗೆಳೆಯ ಫರಾನ್ ಗನ್ ತೋರಿಸಿ ಅತ್ಯಾಚಾರ ಮಾಡಿದರು. ಇದನ್ನು ವಿಡಿಯೋ ಮಾಡಿಕೊಂಡು ಕಿರುಕುಳ ನೀಡಿದ್ದಾರೆ. ಇದರ ಬಗ್ಗೆ ವಾಟ್ಸ್ ಆ್ಯಪ್ನಲ್ಲಿ ಯಾಸಿರ್ ಕೇಳಿದಕ್ಕೆ ತಾವೂ ಚಿಕ್ಕ ವಯಸ್ಸಿನ ಹುಡುಗಿಯರನ್ನು ಇಷ್ಟಪಡುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಅಥವಾ ಯಾವುದೇ ಅಧಿಕಾರಿಗಳ ಮುಂದೆ ಈ ಘಟನೆ ಬಗ್ಗೆ ತಿಳಿಸಿದರೆ ಪರಿಣಾಮ ಸರಿಯಿರಲ್ಲ. ನಾನು ತುಂಬಾ ಪ್ರಭಾವಿ ವ್ಯಕ್ತಿ, ನನಗೆ ತುಂಬಾ ದೊಡ್ಡ ಅಧಿಕಾರಿಗಳ ಪರಿಚಯವಿದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಬಾಲಕಿ ಪೊಲೀಸರನ್ನು ಸಂಪರ್ಕಿಸಿದ ನಂತರ ಯಾಸಿರ್ ಕರೆ ಮಾಡಿ, ಒಂದು ಪ್ಲಾಟ್ ಖರೀದಿಸಿ ಕೊಡುವುದಾಗಿ ಮತ್ತು ಮುಂದಿನ 18 ವರ್ಷಗಳ ಕಾಲ ನನ್ನ ಎಲ್ಲ ವೆಚ್ಚವನ್ನು ಭರಿಸುವುದಾಗಿ ಹೇಳಿದರು ಎಂದು ಪೊಲೀಸರ ಮುಂದೆ ಬಾಲಕಿ ಹೇಳಿದ್ದಾರೆ. ಸದ್ಯ ಯಾಸಿರ್ ಶಾ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಯುವತಿಯ ವೈದ್ಯಕೀಯ ಪರೀಕ್ಷೆ ನಂತರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ನಾಯಕನಾಗಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡ ಜೋ ರೂಟ್