ಕರಾಚಿ: ವೆಸ್ಟ್ ಇಂಡೀಸ್ ತಂಡದಲ್ಲಿ ಐವರಿಗೆ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡ ಬೆನ್ನಲ್ಲೇ ಶನಿವಾರದಿಂದ ನಡೆಯಬೇಕಿದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ಎರಡೂ ಕ್ರಿಕೆಟ್ ಮಂಡಳಿಯ ಒಪ್ಪಿಗೆ ಮೇರೆಗೆ ಮುಂದಿನ ವರ್ಷ ಜೂನ್ಗೆ ಮುಂದೂಡಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೋವಿಡ್ 19 ಪ್ರೋಟೋಕಾಲ್ ಅನ್ವಯ ಗುರುವಾರ ಎರಡೂ ತಂಡದ 15 ಆಟಗಾರರು ಮತ್ತು 6 ಬೆಂಬಲ ಸಿಬ್ಬಂದಿಗಳಿಗೆ ನೆಗೆಟಿವ್ ಬಂದಿದ್ದರಿಂದ ಕೊನೆಯ ಟಿ-20 ಪಂದ್ಯವನ್ನ ವೇಳಾಪಟ್ಟಿಯಂತೆ ಆಯೋಜಿಸಲಾಯಿತು. ಆದರೆ, ತಂಡದ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಏಕದಿನ ಸರಣಿಯನ್ನಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಶನಿವಾರದಿಂದ ನಡೆಯಬೇಕಿದ್ದ ಏಕದಿನ ಸರಣಿ ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
-
🚨 JUST IN: The ODI leg of West Indies' tour of Pakistan has been postponed.
— ICC (@ICC) December 16, 2021 " class="align-text-top noRightClick twitterSection" data="
Details 👇 #PAKvWI https://t.co/KieSYGY5kE
">🚨 JUST IN: The ODI leg of West Indies' tour of Pakistan has been postponed.
— ICC (@ICC) December 16, 2021
Details 👇 #PAKvWI https://t.co/KieSYGY5kE🚨 JUST IN: The ODI leg of West Indies' tour of Pakistan has been postponed.
— ICC (@ICC) December 16, 2021
Details 👇 #PAKvWI https://t.co/KieSYGY5kE
ಎರಡೂ ತಂಡಗಳ ಆಟಗಾರರ ಯೋಗಕ್ಷೇಮ ಮತ್ತು ವೆಸ್ಟ್ ಇಂಡೀಸ್ ತಂಡದಲ್ಲಿ ಆಟಗಾರರ ಕೊರತೆ ಇರುವುದನ್ನು ಪರಿಗಣನೆಗೆ ತೆಗೆದುಕೊಂಡು ಪಿಸಿಬಿ ಮತ್ತಯ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗಳೂ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಭಾಗವಾಗಿದ್ದ 3 ಪಂದ್ಯಗಳ ಏಕದಿನ ಸರಣಿಯನ್ನು 2022 ಜೂನ್ಗೆ ಮುಂದೂಡಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿವೆ.
ಡಿಸೆಂಬರ್ 12ರಂದು ನಡೆಸಿದ್ದ ಆರ್ಟಿ - ಪಿಸಿಆರ್ ಪರೀಕ್ಷೆಯಲ್ಲಿ ಶೆಲ್ಡಾನ್ ಕಾಟ್ರೆಲ್, ರಾಸ್ಟನ್ ಚೇಸ್, ಕೈಲ್ ಮೇಯರ್ಸ್ ಹಾಗೂ ಇಬ್ಬರು ಸಿಬ್ಬಂದಿಗಳಿಗೆ ಪಾಸಿಟಿವ್ ದೃಡಪಟ್ಟಿತ್ತು.
ಇದನ್ನೂ ಓದಿ: ವಿಲಿಯರ್ಸ್, ಗ್ರೇಮ್ ಸ್ಮಿತ್ ವಿರುದ್ಧ ಜನಾಂಗೀಯ ತಾರತಮ್ಯದ ಆರೋಪ