ಮೆಲ್ಬೋರ್ನ್(ಆಸ್ಟ್ರೇಲಿಯಾ): ಪಾಕಿಸ್ತಾನದ ರಕ್ಕಸ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಇಂಗ್ಲೆಂಡ್ ದಾಂಡಿಗರು ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದರು. 2019 ರ ಏಕದಿನ ವಿಶ್ವಕಪ್ ಗೆದ್ದಿದ್ದ ತಂಡ ಐಸಿಸಿಯ ಇನ್ನೊಂದು ವಿಶ್ವ ಕಪ್ ಅನ್ನು ಮುಡಿಗೇರಿಸಿಕೊಂಡಿದೆ. ವಿಶ್ವ ಕ್ರಿಕೆಟ್ಗೆ ತಾನು ಕಿಂಗ್ ಯಾಕೆ ಎಂಬುದನ್ನು ಇಂಗ್ಲೆಂಡ್ ತೋರಿಸಿಕೊಟ್ಟಿದೆ. ಆಂಗ್ಲರ ವಿರುದ್ಧ ಸೋತ ಪಾಕಿಸ್ತಾನ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿಕೊಳ್ಳಬೇಕಾಯಿತು.
ಮೊದಲು ಬ್ಯಾಟ್ ಮಾಡಿ ಪಾಕಿಸ್ತಾನ ನೀಡಿದ 137 ರನ್ಗಳ ಸಾಧಾರಣ ಮೊತ್ತವನ್ನು ಬೆನ್ಸ್ಟೋಕ್ಸ್ರ ಹೋರಾಟದ ಅರ್ಧಶತಕದಿಂದ ಇಂಗ್ಲೆಂಡ್ 19 ಓವರ್ಗಳಲ್ಲಿ ಮುಟ್ಟಿತು. ಪಾಕಿಸ್ತಾನದ ವೇಗದ ದಾಳಿಯನ್ನು ತಡೆದು ಕೆಚ್ಚೆದೆಯ ಬ್ಯಾಟ್ ಬೀಸಿದ ಸ್ಟೋಕ್ಸ್ 2019 ರ ಫೈನಲ್ ಪಂದ್ಯವನ್ನು ಮರುಕಳಿಸುವಂತೆ ಆಟವಾಡಿದರು.
-
A Ben Stokes special at the MCG! 😍
— ICC (@ICC) November 13, 2022 " class="align-text-top noRightClick twitterSection" data="
England take a special title home 🏆#PAKvENG | #T20WorldCupFinal | 📝 https://t.co/HdpneOrKoo pic.twitter.com/BOIrCSwlyn
">A Ben Stokes special at the MCG! 😍
— ICC (@ICC) November 13, 2022
England take a special title home 🏆#PAKvENG | #T20WorldCupFinal | 📝 https://t.co/HdpneOrKoo pic.twitter.com/BOIrCSwlynA Ben Stokes special at the MCG! 😍
— ICC (@ICC) November 13, 2022
England take a special title home 🏆#PAKvENG | #T20WorldCupFinal | 📝 https://t.co/HdpneOrKoo pic.twitter.com/BOIrCSwlyn
ಬಿಗಿ ದಾಳಿಗೆ ಬೆದರದ ಆಂಗ್ಲರು: ಪಾಕಿಸ್ತಾನ ತಂಡದ ಶಕ್ತಿಯೇ ಅದರ ಬೌಲಿಂಗ್. ಗಂಟೆಗೆ 150 ರ ವೇಗದಲ್ಲಿ ದಾಳಿ ಮಾಡುವ ಪಾಕ್ ಬೌಲರ್ಗಳು ಇಂಗ್ಲೆಂಡ್ ತಂಡವನ್ನು ಕೆಲಹೊತ್ತು ಕಾಡಿದರು. ಶಾಹೀನ್ ಆಫ್ರಿದಿ, ನಸೀಮ್ ಶಾ, ಹ್ಯಾರೀಸ್ ರೌಫ್ ಮೊಹಮದ್ ವಾಸಿಮ್ ಜೂನಿಯರ್ ವೇಗ ಆಂಗ್ಲರನ್ನು ತಬ್ಬಿಬ್ಬುಗೊಳಿಸಿತು.
ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ಆಫ್ರಿದಿ ಆರಂಭದಲ್ಲೇ ಪೆಟ್ಟು ನೀಡಿದರು. ಕಳೆದ ಪಂದ್ಯದ ಹೀರೋ ಅಲೆಕ್ಸ್ ಹೇಲ್ಸ್ 1 ರನ್ಗೆ ಕ್ಲೀನ್ ಬೌಲ್ಡ್ ಆದರು. ನಾಯಕ ಜೋಸ್ ಬಟ್ಲರ್ 26, ಫಿಲಿಪ್ ಸಾಲ್ಟ್ 10 ಹ್ಯಾರಿ ಬ್ರೂಕ್ಸ್ 20, ಮೊಯೀನ್ ಅಲಿ 19 ರನ್ ಗಳಿಸಿದರು.
ಬೆನ್ ಸ್ಟೋಕ್ಸ್ ಏಕಾಂಗಿ ಹೋರಾಟ: ಇಂಗ್ಲೆಂಡ್ ತಂಡ ಟೂರ್ನಿಯಲ್ಲಿ ತನ್ನ ಖ್ಯಾತಿಗೆ ತಕ್ಕಂತೆ ಇನ್ನೂ ಆಟವಾಡಿಲ್ಲ ಎಂದು ಸೆಮಿಫೈನಲ್ಗೂ ಮೊದಲು ತಂಡದ ತಾರಾ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹೇಳಿಕೆ ನೀಡಿದ್ದರು. ಬಳಿಕ ಸೆಮಿಫೈನಲ್ನಲ್ಲಿ ಭಾರತವನ್ನು ವಿಕೆಟ್ ನಷ್ಟವಿಲ್ಲದೇ ಬಗ್ಗುಬಡಿದು ಫೈನಲ್ ತಲುಪಿದ ಹೇಳಿಕೆ ನಿಜವಾಯಿತು.
-
Player of the #T20WorldCupFinal 💪
— ICC (@ICC) November 13, 2022 " class="align-text-top noRightClick twitterSection" data="
13 wickets at an average of 11.38 in the tournament 🤩
Sam Curran is the Player of the Tournament for his stellar performances 😍#T20WorldCup pic.twitter.com/LD2xHaA5UL
">Player of the #T20WorldCupFinal 💪
— ICC (@ICC) November 13, 2022
13 wickets at an average of 11.38 in the tournament 🤩
Sam Curran is the Player of the Tournament for his stellar performances 😍#T20WorldCup pic.twitter.com/LD2xHaA5ULPlayer of the #T20WorldCupFinal 💪
— ICC (@ICC) November 13, 2022
13 wickets at an average of 11.38 in the tournament 🤩
Sam Curran is the Player of the Tournament for his stellar performances 😍#T20WorldCup pic.twitter.com/LD2xHaA5UL
ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೇಳಿಕೆಗೆ ತಕ್ಕ ಆಟವಾಡಿದ ಸ್ಟೋಕ್ಸ್ 5 ಬೌಂಡರಿ 1 ಸಿಕ್ಸರ್ ಸಮೇತ ಹೋರಾಟ ನಡೆಸಿ ಔಟಾಗದೇ 52 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 2016 ರಲ್ಲಿ ಫೈನಲ್ ತಲುಪಿದ್ದ ಇಂಗ್ಲೆಂಡ್ಗೆ ಇದೇ ಬೆನ್ ಸ್ಟೋಕ್ಸ್ ಬೌಲಿಂಗ್ ಮಾರಕವಾಗಿತ್ತು. ವೆಸ್ಟ್ ಇಂಡೀಸ್ ಬ್ಯಾಟರ್ ಬ್ರಾಥ್ವೇಟ್ ಸ್ಟೋಕ್ಸ್ಗೆ ಸತತ ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿ ಕೆರೆಬಿಯನ್ ತಂಡವನ್ನು ಚಾಂಪಿಯನ್ ಮಾಡಿದ್ದರು.
ಅಂದಿನ ಸೋಲಿಗೆ ಕಾರಣವಾಗಿದ್ದ ಸ್ಟೋಕ್ಸ್ ಇಂದಿನ ಫೈನಲ್ ಪಂದ್ಯದಲ್ಲಿ ಏಕಾಂಗಿಯಾಗಿ ಬ್ಯಾಟ್ ಮಾಡಿ ಪಂದ್ಯ ಗೆಲ್ಲಿಸಿಕೊಟ್ಟರು. ಇಂಗ್ಲೆಂಡ್ ಒಂದು ಓವರ್ ಬಾಕಿ ಇರುವಂತೆಯೇ 5 ವಿಕೆಟ್ಗೆ 138 ರನ್ ಗಳಿಸಿ ಜಯಭೇರಿ ಬಾರಿಸಿತು.
2 ನೇ ಬಾರಿಗೆ ಇಂಗ್ಲೆಂಡ್ ಚಾಂಪಿಯನ್: 2010 ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಇಂಗ್ಲೆಂಡ್ 2ನೇ ಬಾರಿಗೆ ಚಾಂಪಿಯನ್ ಆಯಿತು. ಅಂದು ಆಸ್ಟ್ರೇಲಿಯಾವನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದ ಆಂಗ್ಲರು, ಈ ಬಾರಿ ಪಾಕಿಸ್ತಾನಕ್ಕೆ ಡಿಚ್ಚಿ ಹೊಡೆದರು.
ಸ್ಯಾಮ್ ಕರ್ರನ್ ಸರಣಿಶ್ರೇಷ್ಠ ಆಟಗಾರ: ಇಂಗ್ಲೆಂಡ್ ಪರವಾಗಿ ವಿಶ್ವಕಪ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಸ್ಯಾಮ್ ಕರ್ರನ್ ಫೈನಲ್ ಪಂದ್ಯದ ಶ್ರೇಷ್ಠ ಪ್ರದರ್ಶನ ಪ್ರಶಸ್ತಿ ಮತ್ತು ವಿಶ್ವಕಪ್ನ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಬಾಚಿಕೊಂಡರು. ಸ್ಯಾಮ್ 13 ವಿಕೆಟ್ ಕಬಳಿಸಿದ್ದಾರೆ.
ಪಾಕ್ಗೆ ಹಿನ್ನಡೆಯಾದ ಆಫ್ರಿದಿ ಗಾಯ: ಪಂದ್ಯದ ವೇಳೆ ಬಾಲ್ ಹಿಡಿಯುವಾಗ ಕಾಲಿನ ಗಾಯಕ್ಕೆ ತುತ್ತಾದ ಪಾಕಿಸ್ತಾನದ ಸ್ಟಾರ್ ಬೌಲರ್ ಶಾಹೀನ್ ಆಫ್ರಿದಿ ಹೊರನಡೆದಿದ್ದು ತಂಡಕ್ಕೆ ಭಾರಿ ಹಿನ್ನಡೆ ಉಂಟು ಮಾಡಿತು. 2 ಓವರ್ ಬೌಲಿಂಗ್ ಮಾಡಿದ್ದ ಶಾಹೀನ್ ಗಾಯದ ಮಧ್ಯೆಯೂ ಬೌಲ್ ಮಾಡಲು ಆಗಮಿಸಿ ಬಳಿಕ ನೋವು ತಡೆಯಲಾಗದೇ ಮೈದಾನದಿಂದ ಹೊರನಡೆದರು. ಇದನ್ನೇ ಬಳಸಿಕೊಂಡ ಇಂಗ್ಲೆಂಡ್ ಅರೆಕಾಲಿಕ ಬೌಲರ್ ಇಫ್ತಿಕಾರ್ ಓವರ್ನಲ್ಲಿ ರನ್ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಓದಿ: ಟಿ20 ವಿಶ್ವಕಪ್ ಫೈನಲ್: ಟಾಸ್ ಗೆದ್ದು ಪಾಕಿಸ್ತಾನಕ್ಕೆ ಬ್ಯಾಟಿಂಗ್ ಆಹ್ವಾನಿಸಿದ ಇಂಗ್ಲೆಂಡ್