ETV Bharat / sports

ಪಾಕ್​​ನಲ್ಲಿ ರಾಜಕೀಯ ಕೋಲಾಹಲ: ಪಾಕ್​​-ಆಸೀಸ್ ಏಕದಿನ, ಟಿ20 ಸರಣಿ ಲಾಹೋರ್​​ಗೆ ಶಿಫ್ಟ್‌ - ಪಾಕ್​​ ಆಸ್ಟ್ರೇಲಿಯಾ ಸರಣಿ

29 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ತಂಡ ಇದೀಗ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಿದೆ. ಇದರ ಮಧ್ಯೆ ಪಾಕ್​ನಲ್ಲಿ ರಾಜಕೀಯ ಉದ್ವಿಗ್ನತೆ ಉಂಟಾಗಿರುವ ಕಾರಣ ಉಭಯ ತಂಡಗಳ ನಡುವಿನ ಕ್ರಿಕೆಟ್ ಟೂರ್ನಿ ಬೇರೆ ಕಡೆ ಶಿಫ್ಟ್​ ಆಗಿದೆ.

Pakistan vs Australia
Pakistan vs Australia
author img

By

Published : Mar 18, 2022, 5:31 PM IST

ಲಾಹೋರ್​(ಪಾಕಿಸ್ತಾನ): 29 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡು ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಿದೆ. ಇದರ ಮಧ್ಯೆ ಪಾಕಿಸ್ತಾನದಲ್ಲಿ ರಾಜಕೀಯ ತೀವ್ರ ಕೋಲಾಹಲ ಉದ್ಭವವಾಗಿದ್ದು, ಉಭಯ ತಂಡಗಳ ನಡುವಿನ ಏಕದಿನ ಮತ್ತು ಟಿ20 ಕ್ರಿಕೆಟ್​ ಸರಣಿಯನ್ನು ಲಾಹೋರ್​ಗೆ ಸ್ಥಳಾಂತರ ಮಾಡಲಾಗಿದೆ.

ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್​​​-ಇ-ಇನ್ಸಾಫ್​ ಪಕ್ಷದ 24 ಸದಸ್ಯರು ಪ್ರಧಾನಿ ಇಮ್ರಾನ್ ಖಾನ್​ ವಿರುದ್ಧ ತಿರುಗಿಬಿದ್ದಿದ್ದು, ಪಿಎಂ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ತೀವ್ರ ರಾಜಕೀಯ ಕೋಲಾಹಲ ಉಂಟಾಗಿದೆ. ಇಸ್ಲಾಮಾಬಾದ್​​ನಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆಯುವ ಸಾಧ್ಯತೆ ಇರುವ ಕಾರಣ ರಾವಲ್ಪಿಂಡಿಯಿಂದ ಲಾಹೋರ್​ಗೆ ಇದೀಗ ಕ್ರಿಕೆಟ್ ಸರಣಿ ಶಿಫ್ಟ್ ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಶೇಖ್​ ರಶೀದ್​ ಅಹ್ಮದ್​ ತಿಳಿಸಿದ್ದಾರೆ.

ಮಾರ್ಚ್​​ 29ರಿಂದ ರಾವಲ್ಪಿಂಡಿಯಲ್ಲಿ ಪಾಕ್​​-ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟಿ20 ಪಂದ್ಯ ಆರಂಭಗೊಳ್ಳಬೇಕಾಗಿತ್ತು. ಆದರೆ, ಇದೀಗ ಲಾಹೋರ್​ಗೆ ಶಿಫ್ಟ್​ ಮಾಡಲಾಗುತ್ತಿದ್ದು, ಲಾಹೋರ್​​ನ ಗಡಾಫಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ.

ತಂಡಗಳಿಗೆ ಯಾವುದೇ ಬೆದರಿಕೆ ಇಲ್ಲ. ಆದರೆ, ರಾವಲ್ಪಿಂಡಿಗೆ ಇಸ್ಲಾಮಾಬಾದ್​ ಸಮೀಪವಿರುವ ಕಾರಣ ಸರ್ಕಾರದ ಪರ ಮತ್ತು ವಿರೋಧಿ ಪ್ರತಿಭಟನೆ ನಡೆಯುವ ಸಾಧ್ಯತೆ ಇವೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್‌: ಒಂದೇ ಇನ್ನಿಂಗ್ಸ್​​​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಬಗ್ಗೆ ಗೊತ್ತೇ?

1998ರಲ್ಲಿ ಆಸ್ಟ್ರೇಲಿಯಾ ತಂಡ ಪಾಕ್​ ಪ್ರವಾಸ ಕೈಗೊಂಡಿತ್ತು. ಆದರೆ, 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ನಡೆದ ಬಳಿಕ ಯಾವುದೇ ತಂಡಗಳು ಇಲ್ಲಿಗೆ ಪ್ರಯಾಣ ಕೈಗೊಂಡಿರಲಿಲ್ಲ. ಆದರೆ, ಕಳೆದ ಕೆಲ ವರ್ಷಗಳಿಂದ ಜಿಂಬಾಬ್ವೆ, ಶ್ರೀಲಂಕಾ, ವೆಸ್ಟ್​ ಇಂಡೀಸ್​, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇಲ್ಲಿಗೆ ತೆರಳಿ ಕ್ರಿಕೆಟ್​ ಸರಣಿಗಳಲ್ಲಿ ಭಾಗಿಯಾಗಿದ್ದವು. ಕಳೆದ ಕೆಲ ತಿಂಗಳ ಹಿಂದೆ ಇಲ್ಲಿಗೆ ಪ್ರಯಾಣ ಕೈಗೊಂಡಿದ್ದ ನ್ಯೂಜಿಲ್ಯಾಂಡ್​ ಭದ್ರತೆ ಕಾರಣ ನೀಡಿ, ವಾಪಸ್ ಆಗಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಕೂಡ ಇಲ್ಲಿಗೆ ತೆರಳುವ ನಿರ್ಧಾರದಿಂದ ಹಿಂದೆ ಸರಿದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.