ETV Bharat / sports

'ಟಿ20 ವಿಶ್ವಕಪ್​​ನಲ್ಲಿ ಪಾಕ್​​​ ನಾಕೌಟ್​ ಹಂತದಲ್ಲೇ ಹೊರಬೀಳಬಹುದು': ಶೋಯೆಬ್‌ ಅಖ್ತರ್ - ಈಟಿವಿ ಭಾರತ ಕರ್ನಾಟಕ

ಟಿ20 ವಿಶ್ವಕಪ್​​ಗೋಸ್ಕರ ಪಾಕ್​ ತಂಡ ಪ್ರಕಟಗೊಂಡಿದೆ. ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

T20 World Cup
T20 World Cup
author img

By

Published : Sep 16, 2022, 11:58 AM IST

ಕರಾಚಿ(ಇಸ್ಲಾಮಾಬಾದ್​): ಐಸಿಸಿ ಟಿ20 ವಿಶ್ವಕಪ್​ ಟೂರ್ನಮೆಂಟ್​​ಗೋಸ್ಕರ ಪಾಕ್​ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ಈ ವಿಚಾರವಾಗಿ ಅನೇಕ ಟೀಕೆ-ಟಿಪ್ಪಣಿಗಳು ವ್ಯಕ್ತವಾಗ್ತಿವೆ. ಇದೇ ವಿಚಾರವನ್ನಿಟ್ಟುಕೊಂಡು ಪಾಕ್​ ತಂಡದ ಮಾಜಿ ವೇಗಿ​ ಶೋಯೆಬ್ ಅಖ್ತರ್​ ಮಾತನಾಡಿದ್ದು, ತಂಡದ ಆಯ್ಕೆಯ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್​​​ನಲ್ಲಿ ಪಾಕ್​​ ನಾಕೌಟ್​ ಹಂತದಲ್ಲೇ ಹೊರ ಬೀಳಬಹುದು ಎಂದಿರುವ ಅವರು​, ತಂಡದ ಆಯ್ಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪಾಕ್​​ ಮಧ್ಯಮ ಕ್ರಮಾಂಕ ಬಲಿಷ್ಠವಾಗಿಲ್ಲ ಎಂದು ಟೀಕಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಏಷ್ಯಾ ಕಪ್​​ನಲ್ಲಿ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳು ಹೇಳಿಕೊಳ್ಳುವಂತಹ ಬ್ಯಾಟಿಂಗ್​ ತೋರಿಸಿಲ್ಲ. ಹೀಗಾಗಿ, ಟೂರ್ನಿಯಲ್ಲಿ ನಾಕೌಟ್ ಹಂತದಲ್ಲೇ ತಂಡ ಹೊರಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: 'ಚೀಫ್​​ ಸೆಲೆಕ್ಟರ್​​​​​​​​ ಕೀ ಚೀಪ್​​ ಸೆಲೆಕ್ಷನ್​​...' ವಿಶ್ವಕಪ್​​​ಗೆ ಪಾಕ್​ ತಂಡದ ಆಯ್ಕೆ ಬಗ್ಗೆ ಅಮೀರ್​ ವ್ಯಂಗ್ಯ

ಆಸ್ಟ್ರೇಲಿಯಾ ನೆಲದಲ್ಲಿ ಫಖರ್ ಜಮಾನ್​ ಇನ್ನಿಂಗ್ಸ್​ ಆರಂಭಿಸಬೇಕೆಂದು ಈ ಹಿಂದಿನಿಂದಲೂ ನಾನು ಹೇಳುತ್ತಿದ್ದೇನೆ. ಆದರೆ, 15 ಸದಸ್ಯರ ತಂಡದಲ್ಲಿ ಆ ಪ್ಲೇಯರ್​ಗೆ ಸ್ಥಾನ ನೀಡಿಲ್ಲ. ಇದು ಪಾಕ್ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದಿದ್ದಾರೆ. ಇನ್ನು, ತಂಡದಲ್ಲಿ ಮೊಹಮ್ಮದ್ ಯೂಸೂಫ್​​ಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಆತ ತಂಡಕ್ಕೋಸ್ಕರ ಒತ್ತಡದ ಸಂದರ್ಭದಲ್ಲಿ ಬ್ಯಾಟ್​ ಬೀಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ತಂಡದ ಆಯ್ಕೆ ವಿಚಾರವಾಗಿ ಈಗಾಗಲೇ ಮೊಹಮ್ಮದ್ ಅಮೀರ್ ಮಾತನಾಡಿ, ಮಧ್ಯಮ ಕ್ರಮಾಂಕದ ಬಗ್ಗೆ ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲೇ ಶೋಯೆಬ್ ಅಖ್ತರ್ ಕೂಡ ತಮ್ಮ ಯೂಟ್ಯೂಬ್​ ಚಾನೆಲ್​​ನಲ್ಲಿ ಇದೇ ವಿಷಯವಾಗಿ ಕಿಡಿ ಕಾರಿದ್ದಾರೆ.

ಪಾಕ್​ ಕ್ರಿಕೆಟ್ ತಂಡ ಹೀಗಿದೆ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನ್​​ ಮಸೂದ್ ಮತ್ತು ಉಸ್ಮಾನ್ ಖಾದಿ

ಮೀಸಲು ಆಟಗಾರರು: ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್ ಮತ್ತು ಶಹನವಾಜ್ ದಹಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.