ಮುಂಬೈ: ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಕೋವಿಡ್ 19 ಸಾಂಕ್ರಾಮಿಕದ ಕಾರಣ ರದ್ದುಗೊಳಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬುಧವಾರ ಘೋಷಿಸಿದೆ. ಆದರೆ, ಮುಂದಿನ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಬಹುದು ಎನ್ನಲಾಗುತ್ತಿದೆ.
ವೇಳಾಪಟ್ಟಿಯ ಪ್ರಕಾರ ಕಳೆದ ವರ್ಷವೇ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಕೀಯ ವೈಷಮ್ಯಗಳಿರುವುದರಿಂದ ಅಲ್ಲಿಗೆ ತೆರಳಲು ಅವಕಾಶವಿಲ್ಲ. ಅಲ್ಲದೇ ಪಾಕಿಸ್ತಾನದಲ್ಲಿ ಕೊರೊನಾ ಏರಿಕೆ ಕಾರಣ ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗಿತ್ತು.
ಈ ವರ್ಷವೂ ಕೊರೊನಾದಿಂದಲೇ ಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಿ ರದ್ದಾಗಿದೆ. ಇದರಿಂದ ಮುಂದಿನ ಏಷ್ಯಾಕಪ್ ಅನ್ನು ತಮ್ಮ ದೇಶದಲ್ಲೇ ನಡೆಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಯಸುತ್ತಿದೆ. ಒಂದು ವೇಳೆ, ಅಲ್ಲೇ ಟೂರ್ನಮೆಂಟ್ ಜರುಗಿದರೆ ದಾಯಾದಿ ದೇಶಕ್ಕೆ ಟೀಮ್ ಇಂಡಿಯಾ ಹೋಗುತ್ತದೆಯೇ ಎಂದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
2018ರಲ್ಲಿ ಕೊನೆಯಾದಾಗಿ ಏಷ್ಯಾಕಪ್ ನಡೆದಿತ್ತು. ನಂತರ 2020ಕ್ಕೆ ಟೂರ್ನಿ ನಿಗದಿಯಾಗಿತ್ತು. ಇದೀಗ 2022ರ ಆವೃತ್ತಿ ಪಾಕಿಸ್ತಾನದಲ್ಲಿ 2023ರ ಆವೃತ್ತಿ ಪಾಕಿಸ್ತಾನದಲ್ಲಿ ನಡೆಯಬಹುದು ಎನ್ನಲಾಗುತ್ತಿದೆ.
ಇದನ್ನು ಓದಿ:ಕೊರೊನಾರ್ಭಟಕ್ಕೆ ಈ ವರ್ಷವೂ ಏಷ್ಯಾ ಕಪ್ ರದ್ದು