ಇಸ್ಲಾಮಾಬಾದ್ (ಪಾಕಿಸ್ತಾನ): ಈ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಪ್ರಾರಂಭವಾಗುವ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ದೇಶದ ಭಾಗವಹಿಸುವಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಪಾಕಿಸ್ತಾನ ಸರ್ಕಾರವು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ - ಜರ್ದಾರಿ ನೇತೃತ್ವದ ಉನ್ನತ ಸಮಿತಿಯನ್ನು ರಚಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭಾರತಕ್ಕೆ ರಾಷ್ಟ್ರೀಯ ತಂಡವನ್ನು ಕಳುಹಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಮಿತಿಯನ್ನು ರಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸಲು ಪಾಕಿಸ್ತಾನದ ಕ್ರಿಕೆಟ್ ಆಡಳಿತ ಮಂಡಳಿ ಅನುಮತಿ ಕೋರಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಐಸಿಸಿ ವಿಶ್ವಕಪ್ನ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸರ್ಕಾರಕ್ಕೆ ಮನವಿ ಪತ್ರವನ್ನು ಬರೆದಿತ್ತು. ಅದರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕೆ ಸಮಸ್ಯೆಗಳಿರುವುದರಿಂದ ಸರ್ಕಾರ ಅನುಮತಿಯ ನಂತರವೇ ತಂಡವನ್ನು ವಿಶ್ವಕಪ್ಗೆ ಭಾರತಕ್ಕೆ ಕಳಿಸುವುದಾಗಿ ಹೇಳಲಾಗಿತ್ತು.
-
Pakistan high-level committee to decide on team's participation in Cricket World Cup 2023
— ANI Digital (@ani_digital) July 8, 2023 " class="align-text-top noRightClick twitterSection" data="
Read @ANI Story | https://t.co/NejPmBpwnO#ICCWorldCup2023 #ICC #IndiaVsPakistan #PakistanCricketTeam #PCB #PakistanGovernment pic.twitter.com/Qb9tkcEMbY
">Pakistan high-level committee to decide on team's participation in Cricket World Cup 2023
— ANI Digital (@ani_digital) July 8, 2023
Read @ANI Story | https://t.co/NejPmBpwnO#ICCWorldCup2023 #ICC #IndiaVsPakistan #PakistanCricketTeam #PCB #PakistanGovernment pic.twitter.com/Qb9tkcEMbYPakistan high-level committee to decide on team's participation in Cricket World Cup 2023
— ANI Digital (@ani_digital) July 8, 2023
Read @ANI Story | https://t.co/NejPmBpwnO#ICCWorldCup2023 #ICC #IndiaVsPakistan #PakistanCricketTeam #PCB #PakistanGovernment pic.twitter.com/Qb9tkcEMbY
ಬಿಲಾವಲ್ ಅವರಲ್ಲದೇ, ಸಮಿತಿಯು ಆಂತರಿಕ ಸಚಿವ ರಾಣಾ ಸನಾವುಲ್ಲಾ, ಕಾನೂನು ಸಚಿವ ಅಜಮ್ ನಜೀರ್ ತರಾರ್, ವಾರ್ತಾ ಸಚಿವ ಮರಿಯುಮ್ ಔರಂಗಜೇಬ್, ಅಂತರ - ಪ್ರಾಂತೀಯ ಸಮನ್ವಯ ಸಚಿವ ಎಹ್ಸಾನ್-ಉರ್-ರೆಹಮಾನ್ ಮಜಾರಿ, ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದೇಶಾಂಗ ಕಾರ್ಯದರ್ಶಿಯನ್ನು ಒಳಗೊಂಡಿದೆ.
ಜೂನ್ 27 ರಂದು ಐಸಿಸಿ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 6 ರಂದು ಪಾಕಿಸ್ತಾನ ಕ್ವಾಲಿಫೈಯರ್ 1 (ಶ್ರೀಲಂಕಾ) ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ ಮತ್ತು ಅಕ್ಟೋಬರ್ 15 ರಂದು ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ.
ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಿ ಭಾರತ ಸರ್ಕಾರವು ಅನುಮತಿ ನಿರಾಕರಿಸಿದ ನಂತರ ಈ ಆಗಸ್ಟ್ 31 ರಿಂದ ಪ್ರಾರಂಭವಾಗುವ ಏಷ್ಯಾ ಕಪ್ 2023 ಗಾಗಿ ಭಾರತೀಯ ಆಟಗಾರರು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ. ಇದು ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಒತ್ತಾಯಿಸಿದೆ, ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಮತ್ತು ಉಳಿದವು ಶ್ರೀಲಂಕಾದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳವು ಆಗಸ್ಟ್ 31 ರಿಂದ ಸೆಪ್ಟೆಂಬರ್ 17, 2023 ರವರೆಗೆ 13 ರೋಚಕ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಏಷ್ಯಾಕಪ್ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನವು ಹತ್ತು ವರ್ಷಗಳಿಂದ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಲ್ಲಿ ಪರಸ್ಪರರ ವಿರುದ್ಧ ಆಡಿಲ್ಲ ಮತ್ತು ಐಸಿಸಿ ಮತ್ತು ಎಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ.
ಪಾಕಿಸ್ತಾನದಲ್ಲಿ ಶೆಹಬಾಜ್ ಷರೀಫ್ ಸರ್ಕಾರದ ಪ್ರಸ್ತುತ ಅವಧಿಯು ಆಗಸ್ಟ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಈಗ ಶೆಹಬಾಜ್ ಷರೀಫ್ ಸರ್ಕಾರ ನೀಡಿದ ನಿಲುವನ್ನು ನೂತನವಾಗಿ ಆಯ್ಕೆ ಆದ ಸರ್ಕಾರ ಒಪ್ಪುತ್ತದಾ ಅಥವಾ ಮತ್ತೆ ಬೇರೆ ಖ್ಯಾತೆ ತೆಗೆಯುತ್ತದಾ ಎಂಬುದು ಪ್ರಶ್ನೆಯಾಗಿದೆ.
ಇದನ್ನೂ ಓದಿ: ICC World Cup: ವಿಶ್ವಕಪ್ ಭಾರತದ ವಿರುದ್ಧ ಮಾತ್ರ ಆಡುತ್ತಿಲ್ಲ, ಎಲ್ಲ ಪಂದ್ಯದ ಗೆಲುವೂ ಮುಖ್ಯ: ಬಾಬರ್ ಅಜಮ್