ಕರಾಚಿ (ಪಾಕಿಸ್ತಾನ): ಏಕದಿನ ವಿಶ್ವಕಪ್‌ಗೆ ಎರಡು ವಾರ ಮಾತ್ರ ಬಾಕಿ ಇದೆ. ಹೀಗಿರುವಾಗ ಪಾಕಿಸ್ತಾನ ತಂಡದ ಆಟಗಾರರಿಗೆ ಇನ್ನೂ ವೀಸಾ ಸಿಕ್ಕಿಲ್ಲ ಎಂದು ವರದಿಯಾಗಿದೆ. ಇದರಿಂದ ದುಬೈಗೆ ತೆರಳಿ ಅಲ್ಲಿ ಅಭ್ಯಾಸ ಶಿಬಿರವನ್ನು ಮಾಡಿವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಯೋಜನೆ ರದ್ದಾಗಿದೆ. ವಿಶ್ವಕಪ್ಗೂ ಮುನ್ನ ಇದರಿಂದ ಪಾಕಿಸ್ತಾನ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಈ ಹಿಂದೆ ಪಿಸಿಬಿ ಹಂಚಿಕೊಂಡಿದ್ದ ಮಾಹಿತಿ ಪ್ರಕಾರ ಸಪ್ಟೆಂಬರ್ 25 ರಂದು ಪಾಕಿಸ್ತಾನ ತಂಡ ಭಾರತಕ್ಕೆ ಬರಬೇಕಿದೆ. ಆದರೆ ವೀಸಾ ಸಮಸ್ಯೆಯಿಂದ ಈ ದಿನಾಂಕದಲ್ಲೂ ಏರುಪೇರಾಗುವ ಸಾಧ್ಯತೆ ಇದೆ. ಎಲ್ಲಾ ತಂಡಗಳಿಗೆ ಸಪ್ಟೆಂಬರ್ 29 ರಂದು ಅಭ್ಯಾಸ ಪಂದ್ಯಗಳು ಆರಂಭವಾಗಲಿವೆ. ಭಾರತಕ್ಕೆ ಬರುವ ಉಳಿದ 9 ತಂಡಗಳಿಗೆ ಈಗಾಗಲೇ ವೀಸಾಗಳನ್ನು ಅನುಮೋದಿಸಲಾಗಿದೆ. ಆದರೆ ನೆರೆಯ ಪಾಕ್ನ ಅಜಮ್ ನೇತೃತ್ವದ ಕ್ರಿಕೆಟ್ ತಂಡಕ್ಕೆ ಭಾರತ ಸರ್ಕಾರದಿಂದ ಇನ್ನೂ ವೀಸಾ ಸಿಕ್ಕಿಲ್ಲ.
-
Pakistan are the only team yet to receive the Visas from the 9 teams traveling to India. Visa set to arrive on time for them before Wednesday. (Espncricinfo). pic.twitter.com/AK2z0pBPfr
— Mufaddal Vohra (@mufaddal_vohra) September 23, 2023 " class="align-text-top noRightClick twitterSection" data="
">Pakistan are the only team yet to receive the Visas from the 9 teams traveling to India. Visa set to arrive on time for them before Wednesday. (Espncricinfo). pic.twitter.com/AK2z0pBPfr
— Mufaddal Vohra (@mufaddal_vohra) September 23, 2023Pakistan are the only team yet to receive the Visas from the 9 teams traveling to India. Visa set to arrive on time for them before Wednesday. (Espncricinfo). pic.twitter.com/AK2z0pBPfr
— Mufaddal Vohra (@mufaddal_vohra) September 23, 2023
ವರದಿ ಒಂದರ ಪ್ರಕಾರ, ಪಾಕಿಸ್ತಾನ ಮ್ಯಾನೇಜ್‌ಮೆಂಟ್ ತಮ್ಮ ಎಲ್ಲಾ ಆಟಗಾರರನ್ನು ವಿಶ್ವಕಪ್ ಪೂರ್ವ ಅಭ್ಯಾಸ ಶಿಬಿರಕ್ಕಾಗಿ ದುಬೈಗೆ ಹೋಗಲು ಪ್ಲಾನ್ ಮಾಡಿತ್ತು. ಅಲ್ಲಿಂದ ಅವರೆಲ್ಲರೂ ನೇರವಾಗಿ ಹೈದರಾಬಾದ್‌ನಲ್ಲಿ ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಬೇಕಿತ್ತು. ಇದಕ್ಕಾಗಿ ಬಾಬರ್ ಅಜಮ್ ಅಂಡ್ ಟೀಂ ಯುಎಇಗೆ ಹೋಗಿ ಅಲ್ಲಿ ಕೆಲವು ದಿನಗಳವನ್ನು ಕಳೆದು ಭಾರತಕ್ಕೆ ಬರಬೇಕಿತ್ತು. ಆದರೆ ಈ ಅವರ ಪ್ಲಾನ್ ವಿಫಲವಾಗಿದೆ. ಏಕೆಂದರೆ ಭಾರತಕ್ಕೆ ಬರಲು ಪಾಕಿಸ್ತಾನ ತಂಡಕ್ಕೆ ಇನ್ನೂ ವೀಸಾ ನೀಡಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ವಾರದ ಹಿಂದೆಯೇ ವೀಸಾಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಇದಕ್ಕೆ ಭಾರತ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ.
-
Pakistan’s Chief Selector Inzamam-ul-Haq shares insights on the selected squad for #CWC23 👇https://t.co/kGZM2qMQ9N
— ICC (@ICC) September 22, 2023 " class="align-text-top noRightClick twitterSection" data="
">Pakistan’s Chief Selector Inzamam-ul-Haq shares insights on the selected squad for #CWC23 👇https://t.co/kGZM2qMQ9N
— ICC (@ICC) September 22, 2023Pakistan’s Chief Selector Inzamam-ul-Haq shares insights on the selected squad for #CWC23 👇https://t.co/kGZM2qMQ9N
— ICC (@ICC) September 22, 2023
ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ನಸೀಮ್ ಶಾ ಗಾಯಗೊಂಡಿರುವ ಕಾರಣ ತಂಡದ ಭಾಗವಾಗಿಲ್ಲ. ಅವರ ಬದಲಿಗೆ ಹಸನ್ ಅಲಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ತಂಡವನ್ನು ಘೋಷಿಸುವಾಗ, ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಇಂಜಮಾಮ್-ಉಲ್-ಹಕ್, ನಸೀಮ್‌ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಲಾಗಿದೆ ಮತ್ತು ಅವರು ಚೇತರಿಸಿಕೊಳ್ಳಲು ಮೂರು-ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಹೀಗಾಗಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ. ವಿಶ್ವಕಪ್‌ಗೆ ಇದು ಅತ್ಯಂತ ಪರಿಪೂರ್ಣ ತಂಡವಾಗಿದೆ ಎಂದು ಅವರು ಹೇಳಿದರು.
-
Babar Azam will lead a strong 15-player squad for Pakistan at #CWC23 🏆
— ICC Cricket World Cup (@cricketworldcup) September 23, 2023 " class="align-text-top noRightClick twitterSection" data="
Details ➡️ https://t.co/yThbpLWCuV pic.twitter.com/rO0jABwP6u
">Babar Azam will lead a strong 15-player squad for Pakistan at #CWC23 🏆
— ICC Cricket World Cup (@cricketworldcup) September 23, 2023
Details ➡️ https://t.co/yThbpLWCuV pic.twitter.com/rO0jABwP6uBabar Azam will lead a strong 15-player squad for Pakistan at #CWC23 🏆
— ICC Cricket World Cup (@cricketworldcup) September 23, 2023
Details ➡️ https://t.co/yThbpLWCuV pic.twitter.com/rO0jABwP6u
ವಿಶ್ವಕಪ್‌ನಲ್ಲಿ ಆಡುವ ಪಾಕಿಸ್ತಾನ ತಂಡ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ಸಲ್ಮಾನ್ ಅಲಿ ಅಗಾ, ಸೌದ್ ಶಕೀಲ್, ಶಾಹೀನ್ ಶಾ ಆಫ್ರಿದಿ ಮತ್ತು ಉಸಾಮಾ ಮಿರ್
ಇದನ್ನೂ ಓದಿ: ಆಸ್ಟ್ರೇಲಿಯಾ ಮಣಿಸಿ ಅಗ್ರಸ್ಥಾನಕ್ಕೇರಿದ ಭಾರತ.. ಮೂರು ಮಾದರಿ ಕ್ರಿಕೆಟ್ನಲ್ಲೂ ಟೀಂ ಇಂಡಿಯಾ ನಂ.1