ಕರಾಚಿ : ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ರನ್ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಪಾಕಿಸ್ತಾನ ಆರಂಭಿಕ ಬ್ಯಾಟರ್ ಅಬೀದ್ ಅಲಿ ಕುವೈದ್ ಎ ಟ್ರೋಫಿಯ ಪಂದ್ಯದಲ್ಲಿ ಆಡುವಾಗ ಎದೆನೋವು ಕಾಣಿಸಿದ ಹಿನ್ನೆಲೆ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೂರ್ನಮೆಂಟ್ನಲ್ಲಿ ಅಬೀದ್ ಸೆಂಟ್ರಲ್ ಪಂಜಾಬ್ ತಂಡದಲ್ಲಿ ಆಡುತ್ತಿದ್ದರು. ಸೋಮವಾರ ಪಂದ್ಯದ ನಡುವೆ ಎರಡು ಬಾರಿ ಎದೆ ನೋವು ಎಂದು ತಿಳಿಸಿದ ನಂತರ ಟೀಂ ಮ್ಯಾನೇಜರ್ ಆಶ್ರಪ್ ಅಲಿ ವೈದ್ಯಕೀಯ ಪರೀಕ್ಷೆಗೆ ದಾಖಲಿಸಲು ನಿರ್ಧರಿಸಿದರು. ಪ್ರಸ್ತುತ ಅಬೀದ್ ವೈದ್ಯರ ವೀಕ್ಷಣೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗ ಪಾಕಿಸ್ತಾನ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ವೇಳೆ ಅಬೀದ್ 3 ಇನ್ನಿಂಗ್ಸ್ಗಳಲ್ಲಿ 263 ರನ್ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 9000 ರನ್ ಪೂರೈಸಿದ್ದಾರೆ. ಪಾಕಿಸ್ತಾನ ಪರ 16 ಪಂದ್ಯಗಳಿಂದ 1180 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಹರಿಣಗಳಿಗೆ ಆಘಾತ: ಭಾರತ ಟೆಸ್ಟ್ ಸರಣಿಯಿಂದ ಎನ್ರಿಚ್ ನಾರ್ಕಿಯಾ ಔಟ್