ETV Bharat / sports

ಪಾಕಿಸ್ತಾನ ಬೌಲರ್​ಗಳಿಗೆ ಆತನ ಮಾರ್ಗದರ್ಶನದ ಅಗತ್ಯವಿದೆ : ವಾಸಿಮ್ ಅಕ್ರಮ್ - ಮೊಹಮ್ಮದ್ ಅಮೀರ್ ನಿವೃತ್ತಿ

ಅಮೀರ್​ ಪಾಕಿಸ್ತಾನ​ ಪರ 36 ಟೆಸ್ಟ್​ ಪಂದ್ಯಗಳಿಂದ 119 ವಿಕೆಟ್, 61 ಏಕದಿನ ಪಂದ್ಯಗಳಿಂದ 81 ಹಾಗೂ 50 ಟಿ20 ಪಂದ್ಯಗಳಿಂದ 59 ವಿಕೆಟ್ ಪಡೆದಿದ್ದರು..

ವಾಸಿಮ್ ಅಕ್ರಮ್
ವಾಸಿಮ್ ಅಕ್ರಮ್
author img

By

Published : May 30, 2021, 5:13 PM IST

ಕರಾಚಿ : ಪಾಕಿಸ್ತಾನ ಯುವ ಬೌಲರ್​ಗಳಿಗೆ ಎಡಗೈ ವೇಗದ ಬೌಲರ್​ ಮೊಹಮ್ಮದ್ ಅಮೀರ್​ ಅವರ ಮಾರ್ಗದರ್ಶನದ ಅಗತ್ಯವಿದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್ ಹೇಳಿದ್ದಾರೆ. ಅಲ್ಲದೆ ಅವರ ನಿವೃತ್ತಿಯನ್ನು ಕೂಡ ಗೌರವಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

"ಅವರು(ಅಮೀರ್) ಪಾಕಿಸ್ತಾನ ತಂಡದಲ್ಲಿರಬೇಕಿತ್ತು ಎಂದು ನಾನು ಈಗಲೂ ಭಾವಿಸುತ್ತೇನೆ. ಏಕೆಂದರೆ, ಮುಂದಿನ ಎರಡು ವರ್ಷಗಳಲ್ಲಿ ನಾವು 3 ವೈಟ್​ಬಾಲ್ ವಿಶ್ವಕಪ್​ಗಳನ್ನು ಹೊಂದಿದ್ದೇವೆ.

ನೀವು ತಂಡದಲ್ಲಿ ಸಾಕಷ್ಟು ಬೌಲರ್​ಗಳನ್ನು ಹೊಂದಿದ್ದರೆ, ಯುವ ಬೌಲರ್​ಗಳಿಗೆ ಮಾರ್ಗದರ್ಶನ ನೀಡಲು ಮತ್ತು ಒತ್ತಡದ ಸನ್ನಿವೇಶಗಳಲ್ಲಿ ಅವರೊಂದಿಗೆ ಮಾತನಾಡಲು ಒಬ್ಬ ಹಿರಿಯ ಬೌಲರ್​ನ ಅಗತ್ಯವಿರುತ್ತದೆ ಎಂದು ನಾನು ಬಹಳ ಸಮಯದಿಂದ ಹೇಳುತ್ತಲೇ ಬರುತ್ತಿದ್ದೇನೆ" ಎಂದು ಅಕ್ರಮ್ ಕ್ರಿಕೆಟ್​ ಪಾಕಿಸ್ತಾನದ ವೆಬ್​ಸೈಟ್​ಗೆ ಹೇಳಿದ್ದಾರೆ.

ಮೊಹಮ್ಮದ್ ಅಮೀರ್
ಮೊಹಮ್ಮದ್ ಅಮೀರ್

ನಾನು ಯುವ ಬೌಲರ್​ ಆಗಿದ್ದಾಗ ಇಮ್ರಾನ್ ಖಾನ್​ರು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ನಾನು ಪ್ರತಿಯೊಂದು ಎಸೆತಕ್ಕೂ ಅವರ ಸಲಹೆ ಕೇಳುತ್ತಿದ್ದೆ.

ಸೀನಿಯರ್ ಬೌಲರ್​ ಏನಾದರೂ ಹೇಳಿದಾಗ, ಅದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಾಗಾಗಿ, ಅಮೀರ್​ ತಂಡಕ್ಕೆ ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ಅಕ್ರಮ್ ಹೇಳಿದ್ದಾರೆ.

11 ವರ್ಷಗಳ ಅನುಭವ ಹೊಂದಿದ್ದ 29 ವರ್ಷದ ಮೊಹಮ್ಮದ್ ಅಮೀರ್ ಡಿಸೆಂಬರ್​ 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.

ಅಮೀರ್​ ಪಾಕಿಸ್ತಾನ​ ಪರ 36 ಟೆಸ್ಟ್​ ಪಂದ್ಯಗಳಿಂದ 119 ವಿಕೆಟ್, 61 ಏಕದಿನ ಪಂದ್ಯಗಳಿಂದ 81 ಹಾಗೂ 50 ಟಿ20 ಪಂದ್ಯಗಳಿಂದ 59 ವಿಕೆಟ್ ಪಡೆದಿದ್ದರು.

ಇದನ್ನು ಓದಿ:ಭಾರತ ವಿರುದ್ಧದ WTC ಫೈನಲ್ ನನಗೆ ವಿಶ್ವಕಪ್ ಫೈನಲ್​ ಇದ್ದಂತೆ : ನೀಲ್ ವ್ಯಾಗ್ನರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.