ಕೊಲಂಬೊ(ಶ್ರೀಲಂಕಾ): ಟೀಂ ಇಂಡಿಯಾ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರು ಲಂಕಾದಲ್ಲಿ ಇತರೆ ಸದಸ್ಯರೊಂದಿಗೆ ಸೇರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಆದ್ರೆ, ಕೇಕ್ ಕತ್ತರಿಸುವುದಕ್ಕೂ ಮೊದಲು 21 ವರ್ಷದ ಆಟಗಾರ, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ವಿಶೇಷ ಸಂದೇಶ ರವಾನೆ ಮಾಡಿದ್ದಾರೆ.
ಈ ಕುರಿತ ವಿಡಿಯೋ ತುಣುಕನ್ನು ಭಾರತೀಯ ಕ್ರಿಕೆಟ್ ಮಂಡಳಿ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
-
2⃣ Birthdays 🎂 🎂
— BCCI (@BCCI) July 7, 2021 " class="align-text-top noRightClick twitterSection" data="
1⃣ Celebration 🥳
1⃣ Heartfelt message from @devdpd07 to @msdhoni 🤗 #TeamIndia pic.twitter.com/h0epKPj3Yq
">2⃣ Birthdays 🎂 🎂
— BCCI (@BCCI) July 7, 2021
1⃣ Celebration 🥳
1⃣ Heartfelt message from @devdpd07 to @msdhoni 🤗 #TeamIndia pic.twitter.com/h0epKPj3Yq2⃣ Birthdays 🎂 🎂
— BCCI (@BCCI) July 7, 2021
1⃣ Celebration 🥳
1⃣ Heartfelt message from @devdpd07 to @msdhoni 🤗 #TeamIndia pic.twitter.com/h0epKPj3Yq
ಪಡಿಕ್ಕಲ್ ಸಂದೇಶವೇನು?
ಕೇಕ್ ಕತ್ತರಿಸುವುದಕ್ಕೂ ಮೊದಲು ಇಡೀ ತಂಡದ ಪರವಾಗಿ ಮಹಿ ಭಾಯ್ಗೆ ತಂಡದ ಪರವಾಗಿ ವಿಶ್ ಮಾಡಲು ಬಯಸುತ್ತೇನೆ. ನಮಗೆಲ್ಲರಿಗೂ ಅವರು ಸ್ಫೂರ್ತಿಯಾಗಿದ್ದಾರೆ. ಅವರೊಂದಿಗೆ ಹುಟ್ಟುಹಬ್ಬ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಿಮಗೆ ಜನ್ಮ ದಿನದ ಶುಭಾಶಯಗಳು ಎಂದಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 40ನೇ ವಸಂತಕ್ಕೆ ಕಾಲಿಟ್ಟಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಸದ್ಯ ಐಪಿಎಲ್ನಲ್ಲಿ ಭಾಗಿಯಾಗುತ್ತಿರುವ ಅವರಿಗೆ ಅನೇಕರು ಶುಭಾಶಯ ತಿಳಿಸಿದ್ದಾರೆ. ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಜುಲೈ 13ರಿಂದ ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನಾಡಲಿದೆ.
ದೇವದತ್ ಪಡಿಕ್ಕಲ್ ಇದೇ ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದು, ಈಗಾಗಲೇ ರಾಯಲ್ ಚಾಲೆಂಜರ್ಸ್ ಹಾಗೂ ರಣಜಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇದನ್ನೂ ಓದಿರಿ: ಐಸಿಸಿ ಟಿ-20 ಶ್ರೇಯಾಂಕ: 5ನೇ ಸ್ಥಾನದಲ್ಲಿ ಕೊಹ್ಲಿ, 6ಕ್ಕೆ ಜಿಗಿದ ರಾಹುಲ್