ನವದೆಹಲಿ: ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಭಾರತದ ದಂತಕತೆ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಶತಕ ಸಿಡಿಸಿ ಇಂದಿಗೆ 31 ವರ್ಷಗಳು ತುಂಬಿವೆ. ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ನಲ್ಲಿ ಮಾಸ್ಟರ್ ಬ್ಲಾಸ್ಟರ್ ಬಲಿಷ್ಠ ಇಂಗ್ಲೆಂಡ್ ಎದುರು ಅಬ್ಬರದ ಬ್ಯಾಟಿಂಗ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕದ ಅಭಿಯಾನಕ್ಕೆ ನಾಂದಿ ಹಾಡಿದ್ದರು.
1989 ರಲ್ಲಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ತಮ್ಮ 17 ವರ್ಷ 112 ದಿನಗಳಲ್ಲಿ ಮೊದಲನೇ ಶತಕ ಸಿಡಿಸಿದ್ದರು. ಈ ಮೂಲಕ ದೀರ್ಘ ಮಾದರಿ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ವಿಶ್ವದ 3ನೇ ಕಿರಿಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಅಂದು ಸಚಿನ್ 189 ಎಸೆತಗಳಲ್ಲಿ ಅಜೇಯ 119 ರನ್ಗಳಿಸಿದ್ದರು.
ಇವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ಜನಕರ ವಿರುದ್ಧ ಸೋಲುವ ಪಂದ್ಯವನ್ನು ಡ್ರಾ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಸಚಿನ್ ತೆಂಡೂಲ್ಕರ್ ಅವರ ಅದ್ಭುತ ಬ್ಯಾಟಿಂಗ್ ಅವರಿಗೆ ಚೊಚ್ಚಲ ಪಂದ್ಯ ಶ್ರೇಷ್ಠ ಪ್ರಶಸ್ತಿ ತಂದುಕೊಟ್ಟಿದ್ದಲ್ಲದೇ, ಕ್ರಿಕೆಟ್ ಜಗತ್ತಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು.
ಆ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ 519 ರನ್ಗಳಿಸಿತ್ತು. ನಾಯಕ ಗ್ರಹಾಂ ಗೂಚ್(116), ಮೈಕ್ ಅಥರ್ಟನ್(131) ಮತ್ತು ರಾಬಿನ್ ಸ್ಮಿತ್(121) ಶತಕ ಸಿಡಿಸಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ಭಾರತ 432 ರನ್ಗಳಿಗೆ ಆಲೌಟ್ ಆಗಿತ್ತು. ನಾಯಕ ಮೊಹಮ್ಮದ್ ಅಜರುದ್ದೀನ್ 179, ಸಂಜಯ್ ಮಂಜ್ರೇಕರ್ 93 ಮತ್ತು ಸಚಿನ್ 68 ರನ್ಗಳಿಸಿದ್ದರು.
-
This day in 1990, a 17-year-old Sachin Tendulkar smashed his maiden Test ton – a 119* against England in Manchester 🌟
— ICC (@ICC) August 14, 2021 " class="align-text-top noRightClick twitterSection" data="
Which is your favourite century from the Master Blaster? pic.twitter.com/oAgSpZgJaN
">This day in 1990, a 17-year-old Sachin Tendulkar smashed his maiden Test ton – a 119* against England in Manchester 🌟
— ICC (@ICC) August 14, 2021
Which is your favourite century from the Master Blaster? pic.twitter.com/oAgSpZgJaNThis day in 1990, a 17-year-old Sachin Tendulkar smashed his maiden Test ton – a 119* against England in Manchester 🌟
— ICC (@ICC) August 14, 2021
Which is your favourite century from the Master Blaster? pic.twitter.com/oAgSpZgJaN
ಇದನ್ನು ಓದಿ:70 ವರ್ಷದ ಟೆಸ್ಟ್ ಇತಿಹಾಸದಲ್ಲಿ 5 ವಿಕೆಟ್ ಕಿತ್ತು ವಿಶೇಷ ಸಾಧನೆ ಮಾಡಿದ ಆ್ಯಂಡರ್ಸನ್!
87 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ 320/4 ರನ್ಗಳಿಸಿ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿ, ಭಾರತಕ್ಕೆ 408 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಅಲನ್ ಲ್ಯಾಂಬ್ (109) ಶತಕ ಸಿಡಿಸಿ ಅಬ್ಬರಿಸಿದ್ದರು.
408 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 109ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಮಾಸ್ಟರ್ ಬ್ಲಾಸ್ಟರ್ 189 ಎಸೆತಗಳಲ್ಲಿ 17 ಬೌಂಡರಿ ಸಹಿತ ಅಜೇಯ 119 ರನ್ಗಳಿಸಿ ತಮ್ಮ ಚೊಚ್ಚಲ ಶತಕ ಪೂರೈಸಿದರು. ಜೊತೆಗೆ ಮನೋಜ್ ಪ್ರಭಾಕರ್ ಜೊತೆಗೆ 7ನೇ ವಿಕೆಟ್ ಜೊತೆಯಾಟದಲ್ಲಿ 160 ರನ್ ಸೇರಿಸಿ ಪಂದ್ಯವನ್ನು ಡ್ರಾಗೊಳ್ಳುವಂತೆ ಮಾಡಿದರು.
ಅವರ ಈ ಅದ್ಭುತ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಸಚಿನ್ ನಂತರ 2013ರಲ್ಲಿ ನಿವೃತ್ತಿಗೊಳ್ಳುವವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 51 ಶತಕ ಮತ್ತು ಏಕದಿನ ಕ್ರಿಕೆಟ್ನಲ್ಲಿ 49 ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಬಾರಿಸಿದ ಮೊದಲ ಮತ್ತು ಏಕೈಕ ಕ್ರಿಕೆಟಿಗ ಎಂಬ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.