ETV Bharat / sports

IND vs SA 2ನೇ ಟೆಸ್ಟ್​​: ಹರಿಣಗಳ ವಿರುದ್ಧ ಐತಿಹಾಸಿಕ ಸರಣಿ ಗೆಲ್ಲುವತ್ತ ಟೀಮ್ ಇಂಡಿಯಾ ಚಿತ್ತ - ಕೆಎಲ್ ರಾಹುಲ್

ಸೆಂಚುರಿಯನ್​ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯದಲ್ಲಿ ಗೆಲ್ಲುವ ಮೂಲಕ ಹರಿಣಗಳ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದರು. ಇದೀಗ ಹೊಸ ವರ್ಷದಲ್ಲಿ ನಡೆಯುವ ಮೊದಲ ಪಂದ್ಯ ಭಾರತದ ವಿದೇಶಿ ಸರಣಿ ಗೆಲುವಿನ ದಂಡಯಾತ್ರೆಗೆ ಮತ್ತಷ್ಟು ಬಲವನ್ನು ನೀಡಲಿದೆ.

India vs South Africa test series
ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ
author img

By

Published : Jan 2, 2022, 3:46 PM IST

ಜೋಹಾನ್ಸ್​ಬರ್ಗ್​: ಅಸಾಧಾರಣ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸೋಮವಾರದಿಂದ ಜೋಹಾನ್ಸ್​​ಬರ್ಗ್​ನಲ್ಲಿ 2ನೇ ಟೆಸ್ಟ್​ ಪಂದ್ಯವನ್ನಾಡಲಿದ್ದು, ಇದರಲ್ಲಿ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆಲ್ಲುವುದಕ್ಕೆ ಎದುರು ನೋಡುತ್ತಿದೆ.

ಸೆಂಚುರಿಯನ್​ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯದಲ್ಲಿ ಗೆಲ್ಲುವ ಮೂಲಕ ಹರಿಣಗಳ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದರು. ಇದೀಗ ಹೊಸ ವರ್ಷದಲ್ಲಿ ನಡೆಯುವ ಮೊದಲ ಪಂದ್ಯ ಭಾರತದ ವಿದೇಶಿ ಸರಣಿ ಗೆಲುವಿನ ದಂಡಯಾತ್ರೆಗೆ ಮತ್ತಷ್ಟು ಬಲವನ್ನು ನೀಡಲಿದೆ.

ಈಗಾಗಲೇ ಈ ಹಿಂದಿನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಗೆದ್ದು ಬೀಗಿರುವ ಭಾರತ, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಈ ಸರಣಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಲ್ಲದೆ ಭಾರತ ಇಂದು ವಿಶ್ವದ ಅತ್ಯಂತ ಶ್ರೇಷ್ಠ ತಂಡವಾಗಿ ರೂಪುಗೊಳ್ಳಲು ಅಡಿಗಲ್ಲು ಹಾಕಿದ್ದು ಕೂಡ ಇದೇ ಹರಿಣಗಳ ನಾಡಿನಲ್ಲಿ ಎನ್ನುವುದು ಮತ್ತೊಂದು ವಿಶೇಷ. 2018 ರ ಪ್ರವಾಸದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 1-2ರಲ್ಲಿ ಟೆಸ್ಟ್​ ಸರಣಿ ಸೋತರು 3 ಪಂದ್ಯಗಳಲ್ಲೂ ಎದುರಾಳಿಯ ಎಲ್ಲಾ 60 ವಿಕೆಟ್​ ಉಡಾಯಿಸುವ ಮೂಲಕ ಕ್ರಿಕೆಟ್​ ಜಗತ್ತಿಗೆ ಭಾರತದ ಬೌಲಿಂಗ್ ಶಕ್ತಿಯನ್ನು ಪರಿಚಯಿಸಿದ್ದರು.

ವಿರಾಟ್ ಹೆಸರಿಗೆ ದಾಖಲೆ

ವಾಂಡರರ್ಸ್‌ನಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಗೆದ್ದಿದ್ದೇ ಆದರೆ ನ್ಯೂಜಿಲೆಂಡ್ ಹೊರತುಪಡಿಸಿ SENA ರಾಷ್ಟ್ರಗಳಲ್ಲಿ ಟೆಸ್ಟ್​ ಸರಣಿ ಗೆದ್ದ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ನಾಯಕ ಎಂಬ ವಿಶೇಷ ದಾಖಲೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಈಗಾಗಲೇ ಕೊಹ್ಲಿ ವಿದೇಶದಲ್ಲಿ ಹೆಚ್ಚು ಟೆಸ್ಟ್​ ಗೆದ್ದ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.

ಗ್ರೇಮ್​​ ಸ್ಮಿತ್​ ಅವರಂತಹ ವಿಶ್ವಾಸ, ಹಾಸಿಮ್ ಆಮ್ಲಾರ ಕ್ಲಾಸ್​, ಜಾಕ್​ ಕಾಲೀಸ್​ ಅವರ ಸ್ಥಿರತೆ ಮತ್ತು ಡೇಲ್​ ಸ್ಟೇನ್ ಹಾಗೂ ಮಾರ್ನ್​ ಮಾರ್ಕೆಲ್​ ಅವರಂತಹ ವೇಗದ ಬೌಲರ್​ಗಳ ಸೇವೆಯನ್ನು ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದು ಟೆಸ್ಟ್​ ಸರಣಿಯನ್ನು ಗೆಲ್ಲುವುದಕ್ಕೆ ಕೊಹ್ಲಿ ಪಡೆಗೆ ಇದು ಒಳ್ಳೆಯ ಸಮಯ ಎಂದರೆ ಅತಿಶಯೋಕ್ತಿಯಲ್ಲ.

ಭಾರತ ತಂಡದ ಬ್ಯಾಟಿಂಗ್ ಲೈನ್​ ಅಪ್​ಗೆ ಹೋಲಿಸದರೆ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ತುಂಬಾ ಸಾಧಾರಣವಾಗಿದೆ. ಅದರಲ್ಲೂ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿರುವುದರಿಂದ ಅತಿಥೇಯ ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಗಲಿದೆ. ಡಿಕಾಕ್​ ಬದಲಿ 25 ವರ್ಷದ ರಿಯಾನ್ ರಿಕ್ಲೆಟನ್ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರು ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲಿ ರನ್​ಗಳಿಸಿದ್ದರೂ ಬುಮ್ರಾ, ಶಮಿ ಅಂತಹ ವಿಶ್ವಶ್ರೇಷ್ಠ ವೇಗಿಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ.

ದಕ್ಷಿಣ ಆಫ್ರಿಕಾದಲ್ಲಿ ಆರಂಭಿಕರ ವೈಫಲ್ಯವೂ ದೊಡ್ಡ ತಲೆನೋವಾಗಿದೆ. ನಾಯಕ ಡೀನ್ ಎಲ್ಗರ್​ ಮತ್ತು ಉಪನಾಯಕ ಬವುಮಾ ಬಿಟ್ಟರೆ ತಂಡದಲ್ಲಿ ಯಾರೊಬ್ಬರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರದಿರುವುದು ತಂಡವನ್ನು ಸಂಕಷ್ಟಕ್ಕೀಡು ಮಾಡಿದೆ.

ಆದರೆ ರಬಾಡ, ಲುಂಗಿ ಎಂಗಿಡಿ ಮತ್ತು ಮಾರ್ಕೊ ಜಾನ್ಸನ್ ಮೊದಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಆದರೆ ವಿಫಲರಾಗಿರುವ ವಿಯಾನ್ ಮಲ್ಡರ್ 2ನೇ ಟೆಸ್ಟ್​ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆಯಿದ್ದು, ಭಾರತಕ್ಕೆ ತಕ್ಕ ಮಟ್ಟಿನ ಪೈಪೋಟಿ ನೀಡುವುದಕ್ಕೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ.

ಕೊಹ್ಲಿ-ಪೂಜಾರ ವೈಫಲ್ಯ:

ಇತ್ತ ಭಾರತ ತಂಡದಲ್ಲಿ ಬೌಲಿಂಗ್ ಸಮಸ್ಯೆ ಇಲ್ಲದಿದ್ದರೂ, ಬ್ಯಾಟಿಂಗ್​ನಲ್ಲಿ ಮಾತ್ರ ನಾಯಕ ವಿರಾಟ್​ ಕೊಹ್ಲಿ ಮತ್ತು ಪೂಜಾರ ವೈಫಲ್ಯ ತಂಡದ ದೌರ್ಬಲ್ಯವಾಗಿದೆ. ಆದರೆ ರಾಹುಲ್​ ಮತ್ತು ಮಯಾಂಕ್​ ಅವರ ಬಲ ಭಾರತದ ಬ್ಯಾಟಿಂಗ್ ವೈಫಲ್ಯವನ್ನ ಮರೆಸಿದೆಯಾದರೂ 2ನೇ ಪಂದ್ಯದಲ್ಲಿ ಇವರಿಬ್ಬರು ತಮ್ಮ ನೈಜ ಆಟವನ್ನು ಆಡಬೇಕಿದೆ. ಕಳೆದ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸದಿದ್ದರೂ ರಹಾನೆ ಬ್ಯಾಟಿಂಗ್ ಮಾಡಿದ ರೀತಿ ಸಮಾಧಾನಕರವಾಗಿದ್ದು, ಈ ಪಂದ್ಯದಲ್ಲಿ ಕಳೆದ ಪಂದ್ಯಕ್ಕಿಂತ ದೊಡ್ಡ ಮೊತ್ತ ಗಳಿಸುವ ಅಗತ್ಯವಿದೆ.

ಉಮೇಶ್​ ಅಥವಾ ಇಶಾಂತ್​ಗೆ ಅವಕಾಶ:

ಇನ್ನು ಭಾರತ ತಂಡ 2ನೇ ಟೆಸ್ಟ್​ ಪಂದ್ಯದಲ್ಲಿ ಹೆಚ್ಚೇನು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಆದರೆ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಶಾರ್ದೂಲ್ ಠಾಕೂರ್ ಬದಲಿಗೆ ಅನುಭವಿಗಳಾದ ಇಶಾಂತ್ ಅಥವಾ ಉಮೇಶ್ ಯಾದವ್​ ಕಣಕ್ಕಿಳಿಯುವ ಸಾಧ್ಯತೆಯಿದೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೀ), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ (ವಿಕೀ), ಜಯಂತ್ ಯಾದವ್, ಪ್ರಿಯಾಂಕ್ ಪಾಂಚಾಲ್, ಉಮೇಶ್ ಯಾದವ್, ಹನುಮ ವಿಹಾರಿ, ಇಶಾಂತ್ ಶರ್ಮಾ.

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಟೆಂಬಾ ಬವುಮಾ (ಉಪನಾಯಕ), ಕಗಿಸೊ ರಬಾಡ, ಸರೆಲ್ ಎರ್ವೀ, ಬ್ಯೂರಾನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಐಡೆನ್ ಮಾರ್ಕ್ರಮ್, ವಿಯಾನ್ ಮಲ್ಡರ್, ಕೀಗನ್ ಪೀಟರ್‌ಸೆನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರಿನ್ನೆ, ಮಾರ್ಕೊ ಜಾನ್ಸೆನ್, ಗ್ಲೆಂಟನ್ ಸ್ಟೌರ್‌ಮನ್, ಪ್ರೆನೆಲನ್ ಸುಬ್ರಾಯೆನ್, ಸಿಸಾಂಡಾ ಮಗಾಲಾ, ರಯಾನ್ ರಿಕೆಲ್ಟನ್, ಡುವಾನ್ನೆ ಒಲಿವಿಯರ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.