ಬುಲವಾಯೊ (ಜಿಂಬಾಬ್ವೆ): ಧನಂಜಯ ಡಿಸಿಲ್ವಾ ಅವರ ನಿರ್ಣಾಯಕ 93 ರನ್ ಮತ್ತು ಮಹೇಶ್ ತೀಕ್ಷ್ಣ ಅವರ ಮೂರು ವಿಕೆಟ್ಗಳ ನೆರವಿನಿಂದ ಶ್ರೀಲಂಕಾ ತಂಡ ವಿಶ್ವಕಪ್ ಕ್ವಾಲಿಫೈಯರ್ ಸೂಪರ್ ಸಿಕ್ಸ್ನ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ನ ವಿರುದ್ಧ 21 ರನ್‌ಗಳಿಂದ ಗೆಲುವು ಸಾಧಿಸಿತು. ಸೋಲಿನ ಅಂಚಿನಲ್ಲಿದ್ದ ಲಂಕಾ ಕಷ್ಟಪಟ್ಟು ಗೆಲುವು ದಾಖಲಿಸಿ ಅಂಕಪಟ್ಟಿಯ ಅಗ್ರಸ್ಥಾನ ಗಳಿಸಿತು.
ನೆದರ್ಲೆಂಡ್ಸ್‌ನ ಬೌಲರ್‌ಗಳು ಶಿಸ್ತು ಮತ್ತು ನಿಖರತೆಯಿಂದ ಬೌಲಿಂಗ್ ಮಾಡಿ ಶ್ರೀಲಂಕಾವನ್ನು 25.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 96 ರನ್‌ಗಳಿಗೆ ಕಲೆಹಾಕಿದ್ದರು. ಆದರೆ ಧನಂಜಯ ಅವರು 111 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿಂದ 93 ರನ್ಗಳ ಸಮಯೋಚಿನ ಇನ್ನಿಂಗ್ಸ್ ಲಂಕಾಗೆ ಆಸರೆ ಆಯಿತು. ಇದರಿಂದ 200 ಗಡಿ ದಾಟಿ ಗುರಿ ನೀಡಲು ಸಾಧ್ಯವಾಯಿತು. ಅವರು ತೀಕ್ಷಣ ಮತ್ತು ವನಿಂದು ಹಸರಂಗ ಅವರೊಂದಿಗೆ ನಿರ್ಣಾಯಕ ಜೊತೆಯಾಟ ಸೇರಿಸಿದರು.
ಶ್ರೀಲಂಕಾದ 47.4 ಓವರ್‌ಗೆ 213ಕ್ಕೆ ಗಳಿಸಿ ಸರ್ವಪತನ ಕಂಡಿತು. ನೆದರ್ಲ್ಯಾಂಡ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಒತ್ತಡದ ನಡುವೆ ಅಜೇಯ 67 ರನ್ ಗಳಿಸಿದ ಹೊರತಾಗಿಯೂ ನೆದರ್ಲ್ಯಾಂಡ್ಸ್ 40 ಓವರ್‌ಗಳಲ್ಲಿ 192 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಶ್ರೀಲಂಕಾ ಪ್ರಯಾಸದ ಗೆಲುವು ದಾಖಲಿಸಿತು.
-
Back on 🔝
— ICC (@ICC) June 30, 2023 " class="align-text-top noRightClick twitterSection" data="
Sri Lanka reclaim the No.1 spot in the Super Six Standings and are on the verge of booking their #CWC23 berth 🤩 pic.twitter.com/xguonyspVO
">Back on 🔝
— ICC (@ICC) June 30, 2023
Sri Lanka reclaim the No.1 spot in the Super Six Standings and are on the verge of booking their #CWC23 berth 🤩 pic.twitter.com/xguonyspVOBack on 🔝
— ICC (@ICC) June 30, 2023
Sri Lanka reclaim the No.1 spot in the Super Six Standings and are on the verge of booking their #CWC23 berth 🤩 pic.twitter.com/xguonyspVO
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಮೊದಲ ಎಸೆತದಲ್ಲಿಯೇ ಪಾಥುಮ್ ನಿಸ್ಸಾಂಕಾ ಅವರನ್ನು ಕಳೆದುಕೊಂಡಿತು. ರಿಯಾನ್ ಕ್ಲೈನ್ 10 ರನ್‌ಗಳಿಗೆ ಕುಸಾಲ್ ಮೆಂಡಿಸ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ವ್ಯಾನ್ ಬೀಕ್ ಸದೀರ ಸಮರವಿಕ್ರಮ ಮತ್ತು ಚರಿತ್ ಅಸಲಂಕಾ ಅವರ ವಿಕೆಟ್ ಉರುಳಿಸಿದರು. ಇದರಿಂದ ಪವರ್ ಪ್ಲೇ ಮುಕ್ತಾಯಕ್ಕೂ ಮುನ್ನ ಲಂಕಾ ಮೇಲಿನ ಕ್ರಮಾಂಕದ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು.
ದಿಮುತ್ ಕರುಣಾರತ್ನೆ ಅವರು ಧನಂಜಯ ಡಿ ಸಿಲ್ವಾ ಅವರೊಂದಿಗೆ ಐದನೇ ವಿಕೆಟ್ಗೆ 33 ರನ್‌ನ ಜೊತೆಯಾಟದ ಮಾಡಿದರು. ಇದು ಸತತ ವಿಕೆಟ್ ಕಳೆದುಕೊಂಡಿದ್ದ ಲಂಕಾಗೆ ಚೇತರಿಕೆಯಂತೆ ಕಂಡಿತು. ಆದರೆ 18 ನೇ ಓವರ್‌ನಲ್ಲಿ ದಿಮುತ್ ಕರುಣಾರತ್ನೆ ವಿಕೆಟ್ ಪತನವಾಯಿತು. ಇದರಿಂದ ಶ್ರೀಲಂಕಾ 67 ರನ್‌ಗಳಿಗೆ ಅರ್ಧದಷ್ಟು ವಿಕೆಟ್ ನಷ್ಟ ಅನುಭವಿಸಿತ್ತು.
ನಾಯಕ ದಸುನ್ ಶನಕ ಕೇವಲ 5 ರನ್ಗೆ ವಿಕೆಟ್ ಕೊಟ್ಟಿದ್ದು ಶ್ರೀಲಂಕಾ ಇನ್ನಷ್ಟು ಸಂಕಷ್ಟಕ್ಕೊಳಗಾಯಿತು. ಸಿಂಹಳೀಯರ ಪರ ಡಿ ಸಿಲ್ವಾ ಏಕಾಂಗಿ ಆಟ ಆಡಿದರು. 93 ರನ್ ಗಳಿಸಿ ಸಿಲ್ವಾ ಕೂಡಾ ವಿಕೆಟ್ ಕೊಟ್ಟರು. 7 ರನ್ನಿಂದ ಅವರ ಚೊಚ್ಚಲ ಶತಕ ಕೈತಪ್ಪಿತು. 10ನೇ ಅರ್ಧಶತಕ ಅವರ ಅಂಕಿಅಂಶಕ್ಕೆ ಸೇರಿಕೊಂಡಿತು. ಸಿಲ್ವಾಗೆ ಕೊನೆಯಲ್ಲಿ ಹಸರಂಗ ಮತ್ತು ತೀಕ್ಷಣ ಸಾಥ್ ಕೊಟ್ಟಿದ್ದರಿಂದ 213 ರನ್ ಗುರಿ ನೀಡಲು ಸಾಧ್ಯವಾಯಿತು.
ಈ ಗುರಿಯನ್ನು ಬೆನ್ನತ್ತಿದ ನೆದರ್ಲ್ಯಾಂಡ್ ತಂಡಕ್ಕೆ ಕೇವಲ ಮೂವರು ಆಟಗಾರರು ಮಾತ್ರ ಆಸರೆಯಾದರು. ವೆಸ್ಲಿ ಬ್ಯಾರೆಸಿ 52 ರನ್ ಗಳಿಸಿ ತಮ್ಮ ಅಂತಾರಾಷ್ಟ್ರೀಯ ಏಕದಿನದ 7ನೇ ಅರ್ಧಶತಕವನ್ನು ಗಳಿಸಿದರು. ಬಾಸ್ ಡಿ ಲೀಡೆ 41 ರನ್ ಗಳಿಸಿದರು. ಈ ಜೋಡಿ ಮಧ್ಯಮ ಕ್ರಮಾಂಕದಲ್ಲಿ 77 ರನ್ ಜೊತೆಯಾಟ ಮಾಡಿತು. ಇದರಿಂದ ಲಂಕಾಗೆ ಗೆಲುವು ದೂರ ಎಂಬಂತಾಗಿತ್ತು. ಅಲ್ಲದೇ ನಾಯಕ ಸ್ಕಾಟ್ ಎಡ್ವರ್ಡ್ಸ್ ತಮ್ಮ 13ನೇ ಅರ್ಧಶತಕವನ್ನು (67) ವನ್ನು ದಾಖಲಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಗೆಲುವಿಗಾಗಿ ಏಕಾಂಕಿ ಹೋರಾಟ ನಡೆಸಿದರು. ಆದರೆ ಇನ್ನೊಂದು ಬದಿಯ ವಿಕೆಟ್ ಪತನವಾದ್ದರಿಂದ ನಾಯಕ ಅಜೇಯರಾಗಿ ಉಳಿದರೂ ಗೆಲುವು ಸಾಧ್ಯವಾಗಲಿಲ್ಲ. ನೆದರ್ಲ್ಯಾಂಡ್ 192ಕ್ಕೆ ಆಲ್ಔಟ್ ಆಯಿತು. ಲಂಕಾ ಪರ ತೀಕ್ಷಣ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ತೀಕ್ಷಣ ಮೂರು ವಿಕೆಟ್ ಕಬಳಿಸಿದರೆ, ಹಸರಂಗ ಎರಡು ವಿಕೆಟ್ ಗಳಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್‌ಗಳು: ಶ್ರೀಲಂಕಾ 47.4 ಓವರ್‌ಗಳಲ್ಲಿ 213 (ಧನಂಜಯ ಡಿ ಸಿಲ್ವಾ 93, ಕರುಣಾರತ್ನೆ 33; ಲೋಗನ್ ವ್ಯಾನ್ ಬೀಕ್ 3/26, ಬಾಸ್ ಡಿ ಲೀಡ್ 3/42) ನೆದರ್ಲ್ಯಾಂಡ್ 40 ಓವರ್‌ಗಳಲ್ಲಿ 192 (ಸ್ಕಾಟ್ ಎಡ್ವರ್ಡ್ಸ್ 67 ಔಟಾಗದೆ ; ಮಹೇಶ್ ತೀಕ್ಷಣ 3/31, ವನಿಂದು ಹಸರಂಗ 2/53) 21 ರನ್‌ಗಳಿಂದ ಲಂಕಾಗೆ ಗೆಲುವು.
ಇದನ್ನೂ ಓದಿ: World Cup Qualifiers: ನಿಧಾನಗತಿ ಬೌಲಿಂಗ್- ಪಂದ್ಯ ಸೋತು ಶೇ 40 ದಂಡವನ್ನೂ ಹಾಕಿಸಿಕೊಂಡ ಒಮನ್