ಸೌತಾಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಜೂನ್ 18ರಂದು ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೆಣಸಾಡಲಿವೆ. ಇಂಗ್ಲೆಂಡ್ ವಾತಾವರಣ ನ್ಯೂಜಿಲ್ಯಾಂಡ್ಗೆ ಹೆಚ್ಚು ಹೊಂದಿಕೊಳ್ಳವುದರಿಂದ ಕಿವೀಸ್ ಮೇಲುಗೈ ಸಾಧಿಸಲಿದೆ ಎಂದು ಹಲವಾರು ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ. ಆದರೆ, ಐಸಿಸಿ ಟೂರ್ನಮೆಂಟ್ಗಳ ದಾಖಲೆಗಳು ಕೂಡ ನ್ಯೂಜಿಲ್ಯಾಂಡ್ ಪರವಾಗಿದೆ.
ನ್ಯೂಜಿಲ್ಯಾಂಡ್ ಮತ್ತು ಭಾರತ ತಂಡಗಳು ಐಸಿಸಿ ಟೂರ್ನಮೆಂಟ್ನಲ್ಲಿ(ಏಕದಿನ, ಟಿ-20 ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿ) ಒಟ್ಟು11 ಬಾರಿ ಮುಖಾಮುಖಿಯಾಗಿವೆ. ನ್ಯೂಜಿಲ್ಯಾಂಡ್ 7 ಬಾರಿ ಜಯ ಸಾಧಿಸಿದ್ದರೆ, ಭಾರತ ತಂಡ ಕೇವಲ 3 ಬಾರಿ ಜಯ ಸಾಧಿಸಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಮುಖಾಮುಖಿ
- 1975 ಏಕದಿನ ವಿಶ್ವಕಪ್ : ನ್ಯೂಜಿಲ್ಯಾಂಡ್ಗೆ 4 ವಿಕೆಟ್ಗಳ ಗೆಲುವು
- 1979 ಏಕದಿನ ವಿಶ್ವಕಪ್: ನ್ಯೂಜಿಲ್ಯಾಂಡ್ಗೆ 8 ವಿಕೆಟ್ಗಳ ಗೆಲುವು
- 1987 ಏಕದಿನ ವಿಶ್ವಕಪ್: ಭಾರತಕ್ಕೆ 9 ವಿಕೆಟ್ಗಳ ಗೆಲುವು
- 1987 ಏಕದಿನ ವಿಶ್ವಕಪ್: ಭಾರತಕ್ಕೆ 16 ರನ್ಗಳ ಜಯ
- 1992ರ ಏಕದಿನ ವಿಶ್ವಕಪ್: ನ್ಯೂಜಿಲ್ಯಾಂಡ್ಗೆ 4 ವಿಕೆಟ್ಗಳ ಜಯ
- 1999ರ ಏಕದಿನ ವಿಶ್ವಕಪ್: ನ್ಯೂಜಿಲ್ಯಾಂಡ್ಗೆ 5 ವಿಕೆಟ್ಗಳ ಜಯ
- 2003ರ ಏಕದಿನ ವಿಶ್ವಕಪ್: ಭಾರತಕ್ಕೆ 7 ವಿಕೆಟ್ಗಳ ಜಯ
- 2000 ಐಸಿಸಿ ನಾಕೌಟ್ ಟ್ರೋಫಿ: ನ್ಯೂಜಿಲ್ಯಾಂಡ್ಗೆ 4 ವಿಕೆಟ್ಗಳ ಜಯ
- 2007 ಟಿ20 ವಿಶ್ವಕಪ್ : ನ್ಯೂಜಿಲ್ಯಾಂಡ್ಗೆ 10 ರನ್ಗಳ ಜಯ
- 2016 ಟಿ20 ವಿಶ್ವಕಪ್: ನ್ಯೂಜಿಲ್ಯಾಂಡ್ಗೆ 47 ರನ್ಗಳ ಜಯ
ಇದನ್ನು ಓದಿ:ಭಾರತಕ್ಕಾಗಿ ವಿರಾಟ್ ಕೊಹ್ಲಿ WTC ಟ್ರೋಫಿ ಗೆಲ್ಲುವ ಅಗತ್ಯವಿದೆ: ಇಯಾನ್ ಬಿಷಪ್