ETV Bharat / sports

ಐಪಿಎಲ್ ಹರಾಜಿನಲ್ಲಿ 10.75 ಕೋಟಿ ರೂ ಪಡೆದ ಪೂರನ್​ರಿಂದ ಸಹ ಆಟಗಾರರಿಗೆ​ 15 ಸಾವಿರ ರೂ.ಗಳ ಪಿಜ್ಜಾ ಪಾರ್ಟಿ!! - IPL 2022 mega auction

ಹೋಟೆಲ್​ ಒಳಗೆ ಹೊರಗಡೆಯ ಅಹಾರವನ್ನು ಸ್ವೀಕರಿಸುವುದಕ್ಕೆ ಅನುಮತಿಯಿಲ್ಲದಿರುವುದರಿಂದ ಪೂರನ್​ ಹೋಟೆಲ್​ ಚೆಫ್​ಗೆ 15 ಪಿಜ್ಜಾ ಆರ್ಡರ್ ಮಾಡಿದ್ದರು ಎಂದು ಸ್ಥಳೀಯ ಟೀಮ್ ಮ್ಯಾನೇಜರ್​ ಹೇಳಿದ್ದಾರೆ.

Nicholas Pooran gives Rs 15,000 pizza treat after his IPL payday
ನಿಕೋಲಸ್​ ಪೂರನ್​
author img

By

Published : Feb 15, 2022, 10:02 PM IST

ಕೋಲ್ಕತ್ತಾ: ಐಪಿಎಲ್ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ ಪಡೆದಿದ್ದ ವೆಸ್ಟ್​ ಇಂಡೀಸ್​ ತಂಡದ ಬ್ಯಾಟರ್​ ನಿಕೋಲಸ್​ ಪೂರನ್​ ಬಯೋಬಬಲ್​ ಒಳಗೆ ತಮ್ಮ ತಂಡದ ಸಹಾ ಆಟಗಾರರಿಗೆ 15,000 ರೂ ಮೌಲ್ಯದ ಪಿಜ್ಜಾ ಪಾರ್ಟಿ ನೀಡಿದ್ದಾರೆ.

ಪೂರನ್​ 2021ರ ಹರಾಜಿನಲ್ಲಿ 7.72 ರ ಸರಾಸರಿಯಲ್ಲಿ ಕೇವಲ 85 ರನ್​ಗಳಿಸಿದ್ದರು. ಆದರೂ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ. ನೀಡಿ ಸನ್​ರೈಸರ್ಸ್ ಹೈದರಾಬಾದ್​ ವಿಂಡೀಸ್​ ಎಡಗೈ ಬ್ಯಾಟರ್​ನನ್ನು ಖರೀದಿಸಿತು. ಈ ಸಂಭ್ರಮದಲ್ಲಿ ಕೆರಿಬಿಯನ್​ ಸ್ಟಾರ್​ ಹೊರಗಡೆ ಪಾರ್ಟಿ ಮಾಡಲು ಸಾಧ್ಯವಾಗದಿರುವುದರಿಂದ ಹೋಟೆಲ್​ನಲ್ಲೇ ಸಿಗುವ 1000 ರೂ ಮೌಲ್ಯದ 15 ಪಿಜ್ಜಾಗಳನ್ನು ತಂಡದ ಆಟಗಾರರಿಗೆ ಕೊಡಿಸಿದ್ದಾರೆ.

ಹೋಟೆಲ್​ ಒಳಗೆ ಹೊರಗಡೆಯ ಅಹಾರವನ್ನು ಸ್ವೀಕರಿಸುವುದಕ್ಕೆ ಅನುಮತಿಯಿಲ್ಲದಿರುವುದರಿಂದ ಪೂರನ್​ ಹೋಟೆಲ್​ ಚೆಫ್​ಗೆ 15 ಪಿಜ್ಜಾಗೆ ಆರ್ಡರ್ ಮಾಡಿದ್ದರು ಎಂದು ಸ್ಥಳೀಯ ಟೀಮ್ ಮ್ಯಾನೇಜರ್​ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಪಂದ್ಯವಾಗಿರುವುದರಿಂದ ಎರಡೂ ತಂಡಗಳು ಗ್ರೇಡ್​ 1 ಬಯೋಬಬಲ್​​​ನಲ್ಲಿವೆ. ಪ್ರತಿಯೊಂದು ವಸ್ತುಗಳನ್ನು ಸ್ಯಾನಿಟೈಜ್​ ಮಾಡಲಾಗುತ್ತದೆ. ಇಂದು ಆಟಗಾರರಿಗೆ ತಲುಪಿಸಿದ ಪಿಜ್ಜಾ ಬಾಕ್ಸ್​ಗಳನ್ನು ಆಟಗಾರರಿಗೆ ನೀಡುವ ಮುನ್ನ ಸ್ಯಾನಿಟೈಸರ್​​ ನೀಡಲಾಗಿತ್ತು. ಇನ್ನು ಭಾರತ ಪ್ರವಾಸದಲ್ಲಿರುವ ವಿಂಡೀಸ್​ 3 ಪಂದ್ಯಗಳ ಏಕದಿನ ಸರಣಿಯನ್ನು 0-3ರಲ್ಲಿ ಕಳೆದುಕೊಂಡಿದೆ. ಇದೀಗ ಟಿ-20 ಯಲ್ಲಿ ತಿರುಗೇಟು ನೀಡುವ ಆಲೋಚನೆಯಲ್ಲಿದೆ.

ಇದನ್ನೂ ಓದಿ:ಮಹಿಳಾ ಏಕದಿನ ವಿಶ್ವಕಪ್: ಸತತ 2ನೇ ಬಾರಿ ಬಹುಮಾನ ಮೊತ್ತ ದ್ವಿಗುಣಗೊಳಿಸಿದ ಐಸಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.