ETV Bharat / sports

ಭಾರತ- ಕಿವೀಸ್​ ಟೆಸ್ಟ್​... ಸಂಕಷ್ಟದಲ್ಲಿ ಕೊಹ್ಲಿ ಪಡೆ, 79ಕ್ಕೆ 3 ವಿಕೆಟ್​ ಪತನ

ಭಾರತ, ನ್ಯೂಜಿಲ್ಯಾಂಡ್​ ನಡುವಿನ ಎರಡು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲನೇ ಪಂದ್ಯ ಇಂದು ಆರಂಭವಾಗಿದ್ದು, ಟಾಸ್​ ಗೆದ್ದ ಕಿವೀಸ್​​ ತಂಡ ಬೌಲಿಂಗ್​ ಆಯ್ದುಕೊಂಡಿದೆ.

author img

By

Published : Feb 21, 2020, 6:09 AM IST

IND vs Kivis Test Match.. Kivis Won Toss And Choose To Bowl First
ಭಾರತ-ಕಿವೀಸ್​ ಮೊದಲ ಟೆಸ್ಟ್

ವೆಲ್ಲಿಂಗ್ಟನ್​ : ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಎರಡು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲನೇ ಪಂದ್ಯ ಇಂದು ಆರಂಭವಾಗಿದ್ದು, ಟಾಸ್​ ಗೆದ್ದ ಕಿವೀಸ್​​ ತಂಡ ಬೌಲಿಂಗ್​ ಆಯ್ದುಕೊಂಡಿದೆ.

ಆರಂಭಿಕ ಆಟಗಾರರಾದ ಪೃಥ್ವಿ ಶಾ (16), ಚೇತೇಶ್ವರ್​ ಪೂಜಾರಾ (11) ಹಾಗೂ ನಾಯಕ ವಿರಾಟ್​ ಕೊಹ್ಲಿ (2) ವಿಕೆಟ್​ ಒಪ್ಪಿಸಿದ್ದಾರೆ. ಭಾರತ 79 ರನ್​ಗಳಿಗೆ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದೆ.

ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿರುವ ಭಾರತ ತಂಡ ಐದು ಪಂದ್ಯಗಳ ಟಿ-20 ಸರಣಿಯನ್ನು ಕ್ಲೀನ್ ಸ್ವೀಪ್​ ಮಾಡಿತ್ತು, ಇದಕ್ಕೆ ಪ್ರತಿಯಾಗಿ ನಂತರ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡುವ ಕಿವೀಸ್​ ತಂಡ ಸೇಡು ತೀರಿಸಿಕೊಂಡಿತ್ತು. ಇದೀಗ ಟೆಸ್ಟ್​ ಸರಣಿಯನ್ನು ಯಾರು ಗೆಲ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ಅಂತಾರಾಷ್ಟ್ರೀಯ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದರೆ, ನ್ಯೂಜಿಲ್ಯಾಂಡ್ ಆರನೇ ಸ್ಥಾನದಲ್ಲಿದೆ. ಚಾಂಪಿಯನ್​ಶಿಪ್​ ದೃಷ್ಟಿಯಿಂದ ಉಭಯ ತಂಡಗಳಿಗೆ ಈ ಸರಣಿ ಮಹತ್ವದ್ದಾಗಿದೆ.

ತಂಡ ಇಂತಿದೆ :

ಟೀಂ ಇಂಡಿಯಾ: ಪೃಥ್ವಿ ಶಾ, ಮಯಾಂಕ್​ ಅಗರವಾಲ್​, ವಿರಾಟ್​ ಕೊಹ್ಲಿ (ಕ್ಯಾಪ್ಟನ್​), ಅಜಿಂಕ್ಯಾ ರಹಾನೆ, ಚೇತೇಶ್ವರ್​ ಪೂಜಾರಾ​, ರಿಷಬ್​ ಪಂತ್​ ​(ಕೀಪರ್), ಹನುಮ ವಿಹಾರಿ​, ರವಿಚಂದ್ರನ್​ ಅಶ್ವಿನ್​, ಇಶಾಂತ್​ ಶರ್ಮಾ​,ಮೊಮ್ಮದ್ ಶಮಿ, ಜಸ್ಪ್ರಿತ್​ ಬುಮ್ರಾ.

ನ್ಯೂಜಿಲ್ಯಾಂಡ್: ​ಟಾಮ್​ ಬ್ಲಂಡೆಲ್​​​, ಟಾಮ್​ ಲಾಥಮ್​, ಹೆನ್ರಿ ನಿಕೂಲಸ್​, ಕೇನ್​ ವಿಲಿಯಮ್ಸನ್​ (ಕ್ಯಾಪ್ಟನ್​) ಬಿ.ಜೆ ವ್ಯಾಟ್ಲಿಂಗ್​ (ವಿ.ಕೀ​), ರಾಸ್​ ಟೇಲರ್​, ಕಾಲಿನ್​ ಗ್ರಾಂಡೋಮ್​​, ಅಜಾಜ್​ ಪಟೇಲ್​​, ತಿಮ್​​ ಸೌಥಿ, ಕೈಲ್​ ಜೆಮಿಸ್ಸೋನ್​​, ಟ್ರೆಂಟ್​ ಬೋಲ್ಟ್​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.