ಕ್ರೈಸ್ಟ್‌ಚರ್ಚ್ (ನ್ಯೂಜಿಲ್ಯಾಂಡ್ ): ಭಾರತ-ಆಸಿಸ್ ನಡುವೆ ಕೊನೆಯ ಟೆಸ್ಟ್ ಅಹಮದಾಬಾದ್ನಲ್ಲಿ ನಡೆಯುತ್ತಿದೆ, ಇದರಲ್ಲಿ ಗೆದ್ದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುವುದು ಪಕ್ಕಾ ಆಗಲಿದೆ. ಭಾರತ ಸೋತಲ್ಲಿ ಶ್ರೀಲಂಕಾಗೆ ಫೈನಲ್ ಪ್ರವೇಶಕ್ಕೆ ಅವಕಾಶ ತೆರೆದುಕೊಳ್ಳಲಿದೆ. ಇದಕ್ಕಾಗಿ ನ್ಯೂಜಿಲ್ಯಾಂಡ್ನಲ್ಲೇ ಸಿಂಹಳೀಯರು ಕಿವೀಸ್ನ್ನು ಕ್ಲೀನ್ ಸ್ಪೀಪ್ ಮಾಡಬೇಕಿದೆ.
ನ್ಯೂಜಿಲ್ಯಾಂಡ್ ನಲ್ಲಿ ಶ್ರೀಲಂಕಾದ ಆಟಗಾರು ಮೊದಲೆರಡು ದಿನ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ. ಟಾಸ್ ಗೆದ್ದು ಕಿವೀಸ್ ನಾಯಕ ಟೀಮ್ ಸೌಥಿ ಕ್ಷೇತ್ರ ರಕ್ಷಣೆ ಆಯ್ದುಕೊಂಡರು. ಲಂಕಾ ಬ್ಯಾಟರ್ಗಳು ಸೌಥಿ ಪಡೆಯ ಬೌಲಿಂಗ್ಗೆ ತಕ್ಕ ಉತ್ತರವನ್ನು ನೀಡಿ ಮೊದಲ ಇನ್ನಿಂಗ್ಸ್ಗೆ 355 ರನ್ ಗಳಿಸಿದರು. ಮೊದಲ ದಿನ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 305 ಗಳಿಸಿತ್ತು. ಇಂದು 17.4 ಓವರ್ ಆಡಿದ ಲಂಕಾ ನಿನ್ನೆಯ ಸ್ಕೋರ್ಗೆ 50 ಸೇರಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು.
-
Sri Lanka are on top in the first Test against New Zealand as they look to press their claims for a #WTC23 Final berth 🔥
— ICC (@ICC) March 10, 2023 " class="align-text-top noRightClick twitterSection" data="
📝 https://t.co/sRBwLQxfUB | 📺 https://t.co/CPDKNxoJ9v (in select regions) pic.twitter.com/EJXNyZd5uF
">Sri Lanka are on top in the first Test against New Zealand as they look to press their claims for a #WTC23 Final berth 🔥
— ICC (@ICC) March 10, 2023
📝 https://t.co/sRBwLQxfUB | 📺 https://t.co/CPDKNxoJ9v (in select regions) pic.twitter.com/EJXNyZd5uFSri Lanka are on top in the first Test against New Zealand as they look to press their claims for a #WTC23 Final berth 🔥
— ICC (@ICC) March 10, 2023
📝 https://t.co/sRBwLQxfUB | 📺 https://t.co/CPDKNxoJ9v (in select regions) pic.twitter.com/EJXNyZd5uF
ಆರಂಭಿಕ ಓಶಾದ ಫೆರ್ನಾಂಡೊ 13ಕ್ಕೆ ಔಟ್ ಆದರು. ನಂತರ ನಾಯಕ ದಿಮುತ್ ಕರುಣಾರತ್ನೆ ಮತ್ತು ಕುಸಾಲ್ ಮೆಂಡಿಸ್ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ನಾಯಕ ಜೊತೆ ಸೇರಿದ ಕುಸಾಲ್ ಮೆಂಡಿಸ್ ಬಿರುಸಿನ ಆಟ ಆಡಿ ಅರ್ಧಶತಕ ಗಳಿಸಿದರು. 83 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿಯಿಂದ 87 ರನ್ ಗಳಿಸಿ ನಾಯಕ ಸೌಥಿಗೆ ವಿಕೆಟ್ ಒಪ್ಪಿಸಿರು. ಇವರ ಬೆನ್ನಲ್ಲೇ 50 ರನ್ ಗಳಿಸಿ ಆಡುತ್ತಿದ್ದ ಲಂಕಾ ಸಾರಥಿ ಕರುಣಾರತ್ನೆ ಮ್ಯಾಟ್ ಹೆನ್ರಿಗೆ ಔಟ್ ಆದರು.
ಏಂಜೆಲೊ ಮ್ಯಾಥ್ಯೂಸ್ (47), ದಿನೇಶ್ ಚಾಂಡಿಮಲ್ (36) ಮತ್ತು ಧನಂಜಯ ಡಿ ಸಿಲ್ವಾ (46) ರನ್ ಗಳಿಸಿದರು. ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ 7 ರನ್ಗೆ ಔಟ್ ಆದರೆ ನಂತರ ಬಂದ ಕಸುನ್ ರಜಿತಾ (22), ಪ್ರಭಾತ್ ಜಯಸೂರ್ಯ (13), ಅಸಿತ ಫೆರ್ನಾಂಡೊ (13) ಮತ್ತು ಲಹಿರು ಕುಮಾರ (10) ಸಾಧಾರಣ ಬ್ಯಾಟ್ ಮಾಡಿ ಕಿವೀಸ್ ವಿರುದ್ಧ 350+ ರನ್ ಗಳಿಸಲು ನೆರವಾದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತವರು ನೆಲದಲ್ಲೇ ಲಂಕಾ ಬೌಲರ್ಗಳ ದಾಳಿಗೆ ನಲುಗಿದೆ. ದಿನದಾಟದ ಅಂತ್ಯದ ವೇಳೆಗೆ 162 ರನ್ಗೆ ನ್ಯೂಜಿಲೆಂಡ್ನ 5 ವಿಕೆಟ್ಗಳ ಪತನವಾಗಿದೆ. ಆರಂಭಿಕ ಆಟಗಾರರಾದ ಟಾಮ್ ಲ್ಯಾಥಮ್ ಮತ್ತು ಡೆವೊನ್ ಕಾನ್ವೇ 50+ ರನ್ನ ಜೊತೆಯಾಟ ಮಾಡಿದ್ದು ಹಾಗೂ ಡೇರಿಲ್ ಮಿಚೆಲ್ ಅವರ 40 ರನ್ ತಂಡಕ್ಕೆ 150+ ರನ್ ಗಳಿಗೆ ಸಹಕಾರವಾಗಿದೆ.
ಲಂಕಾ ಬೌಲರ್ ಅಸಿತ ಫೆರ್ನಾಂಡೊ 30ರನ್ ಗಳಿಸಿ ಆಡುತ್ತಿದ್ದ ಕಾನ್ವೇ ವಿಕೆಟ್ ಪಡೆದರು. ಇವರ ಬೆನ್ನಲ್ಲೆ ಲಹಿರುಗೆ ಕೇನ್ ವಿಲಿಯಮ್ಸನ್ (1) ಮತ್ತು ಹೆನ್ರಿ ನಿಕೋಲ್ಸ್ (2) ವಿಕೆಟ್ ಒಪ್ಪಿಸಿದರು. ಉತ್ತಮ ಲಯದಲ್ಲಿ ಬ್ಯಾಟ್ ಬೀಸುತ್ತಿದ್ದ ಟಾಮ್ ಲ್ಯಾಥಮ್ 67 ರನ್ ಗಳಿಸಿದ್ದಾಗ ಔಟ್ ಆದರು. ಕಸುನ್ ರಜಿತಾ ಅವರು ಟಾಮ್ ಬ್ಲಂಡೆಲ್ (7) ಅವರ ವಿಕೆಟ್ ಪಡೆದು ಕೊಂಡರು. ಸಧ್ಯಕ್ಕೆ ಡೇರಿಲ್ ಮಿಚೆಲ್ (40) ಮತ್ತು ಮೈಕೆಲ್ ಬ್ರೇಸ್‌ವೆಲ್ (9) ಕ್ರೀಸ್ನಲ್ಲಿದ್ದಾರೆ.
ಇದನ್ನೂ ಓದಿ: ಪ್ಯಾಟ್ ಕಮಿನ್ಸ್ಗೆ ಮಾತೃ ವಿಯೋಗ: ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸಿದ ಆಸಿಸ್ ಟೀಂ