ಟಿ-20 ವಿಶ್ವಕಪ್ನ ಸೂಪರ್ 12 ಹಂತ ಭರ್ಜರಿ ಆರಂಭ ಪಡೆದಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಡಾರ್ಕ್ಹಾರ್ಸ್ ಕುಖ್ಯಾತಿಯ ನ್ಯೂಜಿಲ್ಯಾಂಡ್ ನಿಗದಿತ 20 ಓವರ್ಗಳಲ್ಲಿ 200 ರನ್ ಗಳಿಸಿ, ವಿಶ್ವಕಪ್ಗೆ ಕಿಕ್ಸ್ಟಾರ್ಟ್ ನೀಡಿದೆ.
ಬ್ಲ್ಯಾಕ್ ಕ್ಯಾಪ್ಸ್ನ ಡೆವೋನ್ ಕಾನ್ವೇ, ಫಿನ್ ಅಲೆನ್ರ ಸ್ಫೋಟಕ ಆಟದಿಂದ ನ್ಯೂಜಿಲ್ಯಾಂಡ್ ಬೃಹತ್ ಮೊತ್ತ ಸಂಪಾದಿಸಿತು. ಆರಂಭಿಕ ಆಟಗಾರ ಫಿನ್ ಅಲೆನ್ 16 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿಗಳಿಂದ 42 ರನ್ ಗಳಿಸಿದರು. ಮೊದಲ ಸೂಪರ್ 12 ಪಂದ್ಯಕ್ಕೆ ಕಳೆ ನೀಡಿದ್ದು, ಡೆವೋನ್ ಕಾನ್ವೇ ಅವರ ಸಿಡಿಲಿನ ಆಟ. ನ್ಯೂಜಿಲ್ಯಾಂಡ್ನ ಆರಂಭಿಕ ಆಟಗಾರ ಔಟಾಗದೇ 92 ರನ್ ಗಳಿಸಿ 8 ರನ್ಗಳಿಂದ ಶತಕ ತಪ್ಪಿಸಿಕೊಂಡರು.
-
New Zealand end their innings at 200/3 in Sydney!
— ICC (@ICC) October 22, 2022 " class="align-text-top noRightClick twitterSection" data="
Will Australia chase this down❓#T20WorldCup | #AUSvNZ | 📝 Scorecard: https://t.co/ouB6f5vSvG pic.twitter.com/QbbCOcdEUf
">New Zealand end their innings at 200/3 in Sydney!
— ICC (@ICC) October 22, 2022
Will Australia chase this down❓#T20WorldCup | #AUSvNZ | 📝 Scorecard: https://t.co/ouB6f5vSvG pic.twitter.com/QbbCOcdEUfNew Zealand end their innings at 200/3 in Sydney!
— ICC (@ICC) October 22, 2022
Will Australia chase this down❓#T20WorldCup | #AUSvNZ | 📝 Scorecard: https://t.co/ouB6f5vSvG pic.twitter.com/QbbCOcdEUf
ನಾಯಕ ಕೇನ್ಸ್ ವಿಲಿಯಮ್ಸನ್ 23, ಗ್ಲೆನ್ ಫಿಲಿಪ್ಸ್ 12, ಜಿಮ್ಮಿ ನೀಶಂ 26 ರನ್ ಗಳಿಸಿದರು. ಈ ಮೂಲಕ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 200 ರನ್ ಗಳಿಸಿತು. ಆಸೀಸ್ ಪರವಾಗಿ ಜೋಸ್ ಹೇಜಲ್ವುಡ್ 2, ಆ್ಯಡಂ ಜಂಪಾ 1 ವಿಕೆಟ್ ಪಡೆದರು.
ಬೃಹತ್ ಮೊತ್ತ ಬೆನ್ನಟ್ಟಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದ್ದು, ಕುಸಿತದ ಭೀತಿಯಲ್ಲಿದೆ. ತಂಡದ ಭರವಸೆಯ ಆಟಗಾರ ಡೇವಿಡ್ ವಾರ್ನರ್ 5 ರನ್ಗೆ ಔಟ್ ಆಗಿ ನಿರಾಸೆ ಮೂಡಿಸಿದರು.
ನಾಯಕ ಆ್ಯರೋನ್ ಫಿಂಚ್ 13, ಮಿಚೆಲ್ ಮಾರ್ಷ್ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋಯಿನಿಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಟಿಮ್ ಸೌಥಿ 2 ವಿಕೆಟ್ ಕಿತ್ತಿದ್ದಾರೆ.
ಓದಿ: ಟಿ20 ವಿಶ್ವಕಪ್ : ನ್ಯೂಜಿಲ್ಯಾಂಡ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ಗಿಳಿದ ಹಾಲಿ ಚಾಂಪಿಯನ್ಸ್