ಮುಂಬೈ : ಊಟೋಪಚಾರದಲ್ಲಿ ಅಭಿಮಾನಿಗಳಲ್ಲಿದ್ದ ಅನುಮಾನಗಳಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ತಮ್ಮ ಊಟದ ಪದ್ಧತಿ ಬಗ್ಗೆ ಕೇಳಲಾದ ಹತ್ತು ಹಲವು ತರಹೇವಾರಿ ಪ್ರಶ್ನೆಗಳಿಗೆ ರನ್ ಮಿಷನ್ ಕೂಲ್ ಆಗಿಯೇ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಇನ್ಸ್ಟಾಗ್ರಾಮ್ ಮೂಲಕ ಆಸ್ಕ್ ಮಿ ಎನಿಥಿಂಗ್ ಎಂಬ ಕಾರ್ಯಕ್ರಮ ನಡೆಸಲಾಗಿತ್ತು. ಈ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅಭಿಮಾನಿಗಳು ಅವರ ಪತ್ನಿ ಅನುಷ್ಕಾ ಶರ್ಮಾ ಅವರಿಂದ ಹಿಡಿದು ಮಗಳು ವಮಿಕಾಳ ಮುಂದಿನ ಗುರಿ ಏನು ಅನ್ನೋದು ಸೇರಿ ಅವರಿಗೆ ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದರು.
ಇದರಲ್ಲಿ ವಿರಾಟ್ ಕೊಹ್ಲಿ ಅವರ ಊಟೋಪಚಾರದ ಬಗ್ಗೆಯೂ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ವಿರಾಟ್ ಕೊಹ್ಲಿ ಕೂಲ್ ಆಗಿಯೇ ಉತ್ತರ ನೀಡುವ ಮೂಲಕ ಅವರಲ್ಲಿದ್ದ ಅನುಮಾನಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ತಾವು ಸಸ್ಯಹಾರಿ ಎಂದು ಹೇಳಿ ಮೊಟ್ಟೆ ತಿನ್ನುತ್ತಿದ್ದೀರಾ? ಎಂದು ಡಯಟ್ ಫುಡ್ ಬಗ್ಗೆ ಪ್ರಶ್ನೆಯೊಂದನ್ನು ವಿರಾಟ್ ಮುಂದೆ ಇಡಲಾಗಿತ್ತು. ಈ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಂತೆ ವಿರಾಟ್ 'ನಾನು ವೆಗನ್ ಎಂದು ಎಲ್ಲೂ ಹೇಳಿಲ್ಲ. ಆದರೆ, ನಾನೊಬ್ಬ ಸಸ್ಯಹಾರಿ ಅಷ್ಟೇ ಎಂದು ಹೇಳುವ ಮೂಲಕ ಟ್ರೋಲ್ಗೆ ತಿರುಗೇಟು ನೀಡಿದ್ದಾರೆ.
-
I never claimed to be vegan. Always maintained I'm vegetarian. Take a deep breath and eat your Veggies (if you want 😉)💪😂✌️
— Virat Kohli (@imVkohli) June 1, 2021 " class="align-text-top noRightClick twitterSection" data="
">I never claimed to be vegan. Always maintained I'm vegetarian. Take a deep breath and eat your Veggies (if you want 😉)💪😂✌️
— Virat Kohli (@imVkohli) June 1, 2021I never claimed to be vegan. Always maintained I'm vegetarian. Take a deep breath and eat your Veggies (if you want 😉)💪😂✌️
— Virat Kohli (@imVkohli) June 1, 2021
ತಮ್ಮ ನಿತ್ಯದ ಊಟದಲ್ಲಿ ಸಾಕಷ್ಟು ತರಕಾರಿಯ ಜೊತೆಗೆ, ಎರಡು ಮೊಟ್ಟೆ, ಎರಡು ಕಪ್ ಕಾಫಿ, ನವಣೆ ಅಕ್ಕಿ, ಸಾಕಷ್ಟು ಪಾಲಕ್ ಸೊಪ್ಪಿರುತ್ತದೆ. ದೋಸೆ ಎಂದರೆ ತಮಗೆ ಅತ್ಯಂತ ಇಷ್ಟವಾದ ತಿನಿಸು. ಆದರೆ, ನಿಯಮಿತವಾಗಿ ತಿನ್ನುತ್ತೇನೆ ಎಂದು ಹೇಳುವ ಮೂಲಕ ತಮ್ಮ ಊಟದ ಪದ್ಧತಿ ಬಗ್ಗೆ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸದ ಒತ್ತಡದಲ್ಲಿದ್ದ ವಿರಾಟ್ಗೆ ಸಿಹಿ ಸುದ್ದಿ ಕೊಟ್ಟ ಯುಕೆ ಸರ್ಕಾರ!
2018ರಲ್ಲಿ ತಾವು ಮಾಂಸಹಾರ ತ್ಯಜಿಸಿರುವ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದರು. ಈ ಹಿನ್ನೆಲೆ ತಟ್ಟೆಯಲ್ಲಿ ಮೊಟ್ಟೆ ಇರುವುದನ್ನು ಕಂಡು ಅನೇಕ ಮಂದಿ ಇದೇ ವೇಳೆ ಟ್ರೋಲ್ ಮಾಡಿದ್ದರು. ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ವಿರಾಟ್, ನಾನು ಸಸ್ಯಹಾರಿ ಎಂದಿದ್ದೇನೆ ಹೊರತು ವೆಗಾನ್ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.