ಹೈದರಾಬಾದ್: ಐಸಿಸಿ ಟಿ-20 ವಿಶ್ವಕಪ್ನಲ್ಲಿ ಬಾಬರ್ ಆಜಂ ನೇತೃತ್ವದ ಪಾಕ್ ತಂಡ ಭಾರತದ ವಿರುದ್ಧ ಗೆಲುವು ದಾಖಲು ಮಾಡಿದ್ರೆ ಪಾಕ್ ಕ್ರಿಕೆಟ್ ಮಂಡಳಿಗೆ ಬ್ಲಾಂಕ್ ಚೆಕ್(Blank cheque) ಸಿಗಲಿದೆ ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಹೇಳಿಕೆ ನೀಡಿದ್ದರು. ಇದೀಗ ಪಾಕ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಅನೇಕ ನೆಟ್ಟಿಗರು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಕಾಲೆಳೆಯುವ ಕೆಲಸ ಮಾಡಿದ್ದಾರೆ.
ವಿಶ್ವಕಪ್ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗುವುದಕ್ಕೂ ಮುಂಚಿತವಾಗಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ್ದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ, ಭಾರತ ತಂಡವನ್ನು ಪಾಕಿಸ್ತಾನೀಯರು ಸೋಲಿಸಿದರೆ ಬ್ಲಾಂಕ್ ಚೆಕ್ ಬರೆದುಕೊಡುವುದಾಗಿ ಹೂಡಿಕೆದಾರರು ಹೇಳಿದ್ದಾರೆ ಎಂದಿದ್ದರು.
-
PCB about to go millionaire?
— Arfa Feroz Zake (@ArfaSays_) October 24, 2021 " class="align-text-top noRightClick twitterSection" data="
Hello Mr Chairman Ramiz Raja! A reminder to you! Please call that businessman who offered a blank cheque for Pakistan Cricket with a condition if Pakistan defeats India in #T20WorldCup!😏#INDvPAK
">PCB about to go millionaire?
— Arfa Feroz Zake (@ArfaSays_) October 24, 2021
Hello Mr Chairman Ramiz Raja! A reminder to you! Please call that businessman who offered a blank cheque for Pakistan Cricket with a condition if Pakistan defeats India in #T20WorldCup!😏#INDvPAKPCB about to go millionaire?
— Arfa Feroz Zake (@ArfaSays_) October 24, 2021
Hello Mr Chairman Ramiz Raja! A reminder to you! Please call that businessman who offered a blank cheque for Pakistan Cricket with a condition if Pakistan defeats India in #T20WorldCup!😏#INDvPAK
ಇದನ್ನೂ ಓದಿರಿ: ಟಿ-20 ವಿಶ್ವಕಪ್ನಲ್ಲಿ ಭಾರತ ಸೋಲಿಸಿದ್ರೆ ಪಿಸಿಬಿಗೆ ಸಿಗಲಿದೆಯಂತೆ ಬ್ಲಾಂಕ್ ಚೆಕ್ !
ರಮೀಜ್ ರಾಜಾ ಕಾಲೆಳೆದ ನೆಟ್ಟಿಗರು!
ಬಾಬರ್ ಆಜಂ ನೇತೃತ್ವದ ಪಾಕ್ ತಂಡ ಭಾರತದ ವಿರುದ್ಧ 10 ವಿಕೆಟ್ಗಳ ಗೆಲುವು ದಾಖಲು ಮಾಡ್ತಿದ್ದಂತೆ ಅನೇಕರು ರಮೀಜ್ ರಾಜಾ ಹಿಂದೆ ಬಿದ್ದಿದ್ದು, ಎಲ್ಲಿ ಬ್ಲಾಂಕ್ ಚೆಕ್? ಎಂದು ಪ್ರಶ್ನೆ ಮಾಡ್ತಿದ್ದಾರೆ.
ಐಸಿಸಿಯ ವಿವಿಧ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ 13 ಬಾರಿ ಗೆಲುವು ಸಾಧಿಸಿತ್ತು. ಆದರೆ, ಪಾಕಿಸ್ತಾನಕ್ಕೆ ಒಂದೂ ಜಯ ದಕ್ಕಿರಲಿಲ್ಲ. 50 ಓವರ್ಗಳ ವಿಶ್ವಕಪ್ಗಳಲ್ಲಿ ಭಾರತ ಏಳು ಬಾರಿ ಹಾಗೂ ಟಿ-20 ವಿಶ್ವಕಪ್ಗಳಲ್ಲಿ ಪಾಕ್ ವಿರುದ್ಧ ಆಡಿರುವ ಎಲ್ಲ ಐದು ಪಂದ್ಯಗಳನ್ನೂ ಭಾರತವೇ ಜಯಿಸಿತ್ತು. ಆದರೆ ಈ ಸಲ ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ.