ETV Bharat / sports

ವಿಶ್ವಕಪ್​ ಫೈನಲ್​ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ: ಅದ್ಧೂರಿ ಕಾರ್ಯಕ್ರಮದ ಮೂಲಕ ಟೂರ್ನಿಗೆ ತೆರೆ - ETV Bharath Karnataka

PM Narendra Modi watch the World Cup final: ವಿಶ್ವಕಪ್​ ಫೈನಲ್​ ಪಂದ್ಯವನ್ನು ನೋಡಲು ಪ್ರಧಾನಿ ಮೋದಿ ಬರುತ್ತಾರೆ ಎಂಬುದನ್ನು ರಾಜ್ಯ ಗೃಹ ಇಲಾಖೆಯ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.

PM Narendra Modi
PM Narendra Modi
author img

By ETV Bharat Karnataka Team

Published : Nov 17, 2023, 6:39 PM IST

ಹೈದರಾಬಾದ್​: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023ರ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುತ್ತಾರೆ. ನವೆಂಬರ್​ 19ರಂದು ಅಹಮದಾಬಾದ್​ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಬಗ್ಗೆ ರಾಜ್ಯ ಗೃಹ ಇಲಾಖೆಯ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸುವುದರ ಜೊತೆಗೆ, ಭಾರತದ ಮಾಜಿ ಕ್ರಿಕೆಟ್​ ಆಟಗಾರರು ಈ ವೇಳೆ ಉಪಸ್ಥಿತರಿರುತ್ತಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸಹ ಇರಲಿದ್ದಾರೆ ಎಂದು ಹೇಳಲಾಗಿದೆ. ಇನ್ನು 1983ರ ವಿಶ್ವಕಪ್​ ನಾಯಕ ಕಪಿಲ್​ ದೇವ್​, 2011ರ ನಾಯಕ ಎಂಎಸ್ ಧೋನಿ ಪಂದ್ಯವನ್ನು ಕ್ರೀಡಾಂಗಣದಲ್ಲೇ ವೀಕ್ಷಿಸಲಿದ್ದಾರೆ. ಸಚಿನ್ ತೆಂಡೂಲ್ಕರ್ ವಿಶ್ವಕಪ್​ನ ರಾಯಬಾರಿ ಆಗಿರುವುದರಿಂದ ಅವರ ಉಪಸ್ಥಿತಿ ಇರಲಿದೆ. ಇವರುಗಳಲ್ಲದೇ ಭಾರತಕ್ಕೆ ಆಡಿದ ಮಾಜಿ ಆಟಗಾರರು ಪಂದ್ಯವನ್ನು ಮೈದಾನದಲ್ಲೇ ಕಣ್ತುಂಬಿಕೊಳ್ಳಲಿದ್ದಾರೆ.

ಮನರಂಜನಾ ಕಾರ್ಯಕ್ರಮದ ಮೂಲಕ ತೆರೆ: ಒಂದೂವರೆ ತಿಂಗಳ ಕಾಲ ನಡೆದ ವಿಶ್ವಮಟ್ಟದ ದೊಡ್ಡ ಈವೆಂಟ್​ಗೆ ನವೆಂಬರ್​ 19 ರಂದು ವಿಜೃಂಭಣೆಯಿಂದಲೇ ತೆರಬೀಳಲಿದೆ. ಹಾಲಿವುಡ್ ಪಾಪ್ ಐಕಾನ್ ದುವಾ ಲಿಪಾ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಪ್ರೀತಮ್ ಚಕ್ರವರ್ತಿ ಮತ್ತು ಆದಿತ್ಯ ಗಾಧ್ವಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿದೆ.

ಸೂರ್ಯ ಕಿರಣ್ ಏರ್ ಶೋ: ಫೈನಲ್ ಪಂದ್ಯ ಪ್ರಾರಂಭವಾಗುವ 10 ನಿಮಿಷಕ್ಕೂ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಏರ್ ಶೋ ಮೂಲಕ ಜನರನ್ನು ಪುಳಕಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ (ಶುಕ್ರವಾರ, ಶನಿವಾರ) ವೈಮಾನಿಕ ಪ್ರದರ್ಶನದ ತಾಲೀಮು ನಡೆಸಲಾಗುತ್ತಿದೆ. ಆಗಸದಲ್ಲಿ 9 ಜೆಟ್ ವಿಮಾನಗಳು ಇಂದು ಮುಂಜಾನೆಯಿಂದಲೇ ತಾಲೀಮು ನಡೆಸುತ್ತಿವೆ.

2003ರ ಸೇಡು ತೀರಿಸಿಕೊಳ್ಳಲು ತಂಡ ರೆಡಿ: 2003 ವಿಶ್ವಕಪ್​ ಫೈನಲ್​ನಲ್ಲಿ ಟೀಮ್​ ಇಂಡಿಯಾ 125 ರನ್‌ಗಳಿಂದ ಸೋಲನುಭವಿಸಿ, ಟ್ರೋಫಿ ಗೆಲ್ಲುವ ಕನಸನ್ನು ಕೈಚೆಲ್ಲಿತ್ತು. 20 ವರ್ಷದ ನಂತರ ಭಾರತ ಮತ್ತು ಆಸ್ಟ್ರೇಲಿಯಾ ಅದೇ ಹಂತದಲ್ಲಿ ಮುಖಾಮುಖಿ ಆಗುತ್ತಿದ್ದು, ಆ ಸೇಡನ್ನು ಭಾರತ ತೀರಿಸಿಕೊಳ್ಳಬೇಕಿದೆ. ಅಲ್ಲದೇ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿರುವ ತಂಡ ತವರಿನಲ್ಲಿ ಈ ಕೊರತೆಯನ್ನು ನೀಗಿಸಿಕೊಳ್ಳಲು ಚಿಂತಿಸುತ್ತಿದೆ.

2023ರ ವಿಶ್ವಕಪ್​ ಫೈನಲ್​: ರೋಹಿತ್​ ಶರ್ಮಾ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಏಷ್ಯಾಕಪ್​ ಗೆದ್ದ ವಿಶ್ವಾಸದಲ್ಲಿ ವಿಶ್ವಕಪ್​ ಫೈಟ್​ಗೆ ಇಳಿದಿತ್ತು. ಅದೇ ಆತ್ಮವಿಶ್ವಾಸದಲ್ಲಿ ತಂಡ ಲೀಗ್​ ಹಂತದ ಎಲ್ಲ ಪಂದ್ಯಗಳಲ್ಲಿ ಗೆದ್ದದ್ದಲ್ಲದೇ ಸೆಮೀಸ್​ನಲ್ಲಿ ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಫೈನಲ್​ ಪ್ರವೇಶಿಸಿದೆ. ಆಸ್ಟ್ರೇಲಿಯಾ ಮೊದಲೆರಡು ಪಂದ್ಯದಲ್ಲಿ ಸೋಲು ಕಂಡ ನಂತರ ಪುಟಿದೆದ್ದು, ಸತತ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಲ್ಲದೇ ಸೆಮಿಫೈನಲ್​ನ​ಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಅಂತಿಮ ಹಂತ ತಲುಪಿದೆ.

ಇದನ್ನೂ ಓದಿ: ಭಾರತ vs ಆಸ್ಟ್ರೇಲಿಯಾ ಮುಖಾಮುಖಿಯಲ್ಲಿ ಯಾರು ಪ್ರಬಲರು? ಇಲ್ಲಿದೆ ಅಂಕಿ - ಅಂಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.