ETV Bharat / sports

ಮಹಾರಾಜ ಟ್ರೋಫಿ ಕ್ರಿಕೆಟ್ 2022, ವಿದ್ಯಾಧರ ಮಾರಕ ಬೌಲಿಂಗ್‌, ಮೈಸೂರು ವಾರಿಯರ್ಸ್​ಗೆ ರೋಚಕ ಜಯ

ಮಹಾರಾಜ ಟ್ರೋಫಿ ಕ್ರಿಕೆಟ್ 2022ರಲ್ಲಿ ಆಟಗಾರರು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ವಿದ್ಯಾಧರ ಮಾರಕ ಬೌಲಿಂಗ್​ಗೆ ಮಂಕಾದ ಹುಬ್ಬಳ್ಳಿ ಟೈಗರ್ಸ್​ ತಂಡದ ವಿರುದ್ಧ ಮೈಸೂರು ವಾರಿಯರ್ಸ್​ಗೆ ರೋಚಕ ಜಯ ಒಲಿದಿದೆ.

Mysore warriors won against Hubli Tigers  Maharaja Trophy Cricket 2022  Maharaja cup t20 cricket  Mysore warriors beat Hubli Tigers  ಮಹಾರಾಜ ಟ್ರೋಫಿ ಕ್ರಿಕೆಟ್ 2022  ವಿದ್ಯಾಧರ ಮಾರಕ ಬೌಲಿಂಗ್‌  ಮೈಸೂರು ವಾರಿಯರ್ಸ್​ಗೆ ರೋಚಕ ಜಯ  ಮೈಸೂರಿಗೆ ಆಸರೆಯಾದ ದೇಶಪಾಂಡೆ  ಮಹಾರಾಜ ಕಪ್​ ಟಿ20 ಕ್ರಿಕೆಟ್​ ಹುಬ್ಬಳ್ಳಿ ಟೈಗರ್ಸ್​ ವಿರುದ್ಧ ಮೈಸೂರು ವಾರಿಯರ್ಸ್​ಗೆ ಭರ್ಜರಿ ಗೆಲುವು
ಮಹಾರಾಜ ಟ್ರೋಫಿ ಕ್ರಿಕೆಟ್ 2022
author img

By

Published : Aug 19, 2022, 7:02 AM IST

ಮಹಾರಾಜ ಟ್ರೋಫಿ ಕ್ರಿಕೆಟ್ 2022, ಬೆಂಗಳೂರು: ಪವನ್ ದೇಶಪಾಂಡೆ ಸಮಯೋಚಿತ ಬ್ಯಾಟಿಂಗ್‌ (57) ಹಾಗೂ ವಿದ್ಯಾಧರ ಮಾರಕ ಬೌಲಿಂಗ್​ (24ಕ್ಕೆ 4) ನೆರವಿನಿಂದ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಮೈಸೂರು ವಾರಿಯರ್ಸ್‌ ತಂಡ 2 ರನ್‌ಗಳ ರೋಚಕ ಜಯ ದಾಖಲಿಸಿದೆ.

Mysore warriors won against Hubli Tigers  Maharaja Trophy Cricket 2022  Maharaja cup t20 cricket  Mysore warriors beat Hubli Tigers  ಮಹಾರಾಜ ಟ್ರೋಫಿ ಕ್ರಿಕೆಟ್ 2022  ವಿದ್ಯಾಧರ ಮಾರಕ ಬೌಲಿಂಗ್‌  ಮೈಸೂರು ವಾರಿಯರ್ಸ್​ಗೆ ರೋಚಕ ಜಯ  ಮೈಸೂರಿಗೆ ಆಸರೆಯಾದ ದೇಶಪಾಂಡೆ  ಮಹಾರಾಜ ಕಪ್​ ಟಿ20 ಕ್ರಿಕೆಟ್​ ಹುಬ್ಬಳ್ಳಿ ಟೈಗರ್ಸ್​ ವಿರುದ್ಧ ಮೈಸೂರು ವಾರಿಯರ್ಸ್​ಗೆ ಭರ್ಜರಿ ಗೆಲುವು
ಮಹಾರಾಜ ಟ್ರೋಫಿ ಕ್ರಿಕೆಟ್ 2022

146 ರನ್‌ ಜಯದ ಗುರಿ ಹೊತ್ತ ಹುಬ್ಬಳ್ಳಿ ಟೈಗರ್ಸ್‌ ಮೈಸೂರು ವಾರಿಯರ್ಸ್‌ ಬೌಲಿಂಗ್‌ ದಾಳಿಗೆ ಸಿಲುಕಿ 9 ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಿ ಸೋಲು ಅನುಭವಿಸಿತು. ನಾಯಕ ಅಭಿಮನ್ಯು ಮಿಥುನ್‌ (27), ಶರಣ್‌ ಗೌಡ (31) ಹಾಗೂ ಆನಂದ್‌ ದೊಡ್ಡಮನಿ (10*) ಉತ್ತಮ ರೀತಿಯಲ್ಲಿ ಹೋರಾಟ ನೀಡಿದರೂ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮೈಸೂರು ವಾರಿಯರ್ಸ್‌ ಪರ ವಿದ್ಯಾಧರ ಪಾಟೀಲ್‌ 4, ಶ್ರೇಯಸ್‌ ಗೋಪಾಲ್‌ ಹಾಗೂ ಆದಿತ್ಯ ಗೋಯಲ್‌ ತಲಾ 2 ವಿಕೆಟ್‌ ಪಡೆದು ಹುಬ್ಬಳ್ಳಿ ಟೈಗರ್ಸ್‌ ಪಡೆಯನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಮೈಸೂರಿಗೆ ಆಸರೆಯಾದ ದೇಶಪಾಂಡೆ: ಕುಸಿದ ಮೈಸೂರಿಗೆ ಪವನ್‌ ದೇಶಪಾಂಡೆ ಆಸರೆಯಾದರು. ವಾಸುಕಿ ಕೌಶಿಕ್‌ ದಾಳಿಗೆ ತತ್ತರಿಸಿದ ಮೈಸೂರು ವಾರಿಯರ್ಸ್‌ 7 ವಿಕೆಟ್‌ ನಷ್ಟಕ್ಕೆ ಕೇವಲ 145 ರನ್‌ ಗಳಿಸಿತು. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್‌ ಅದ್ಭುತ ಯಶಸ್ಸು ಕಂಡಿತು. ನಾಯಕ ಕರುಣ್‌ ನಾಯರ್‌ ಹಾಗೂ ನಿತಿನ್‌ ಬಿಲ್ಲೆ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದ್ದು, ಮೈಸೂರಿನ ರನ್‌ ಗಳಿಕೆಯ ಮೇಲೆ ತೀವ್ರ ಹೊಡೆತ ಬಿದ್ದಿತು. ನಿಹಾಲ್‌ ಉಳ್ಳಾಲ್‌ ಕೇವಲ 2 ರನ್‌ ಗಳಿಸಿ ಔಟಾದರು. ಆಗ ತಂಡಕ್ಕೆ ಆಶ್ರಯ ನೀಡಿದ್ದು ಪವನ್‌ ದೇಶಪಾಂಡೆ.

51 ಎಸೆತಗಳನ್ನೆದುರಿಸಿದ ದೇಶಪಾಂಡೆ 8 ಬೌಂಡರಿ ನೆರವಿನಿಂದ 57 ರನ್‌ ಗಳಿಸಿದರು. ಮಹಾರಾಜ ಟ್ರೋಫಿ ಕ್ರಿಕೆಟ್ 2022 ಪಂದ್ಯಾವಳಿಯಲ್ಲಿ ಸತತ ನಾಲ್ಕು ಅರ್ಧ ಶತಕ ಸಿಡಿಸಿದ ಕೀರ್ತಿ ಪವನ್‌ ದೇಶಪಾಂಡೆಗೆ ಸಲ್ಲುತ್ತದೆ. ಒಟ್ಟು ಈ ಟ್ರೋಫಿಯಲ್ಲಿ 327 ರನ್‌ ಗಳಿಸಿದ ಪವನ್‌ ದೇಶಪಾಂಡೆ ಈಗ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. ಶುಭಾಂಗ್‌ ಹೆಗ್ಡೆ (22) ಮತ್ತು ಶಿವರಾಜ್‌ (26) ಕೆಲ ಹೊತ್ತು ದೇಶಪಾಂಡೆಗೆ ಸಾಥ್‌ ನೀಡಿದರು. ಕೊನೆಯ ಕ್ಷಣದಲ್ಲಿ ಭರತ್‌ ಧುರಿ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 1 ಬೌಂಡರಿ ನೆರವಿನಿಂದ ಮಿಂಚಿನ ವೇಗದಲ್ಲಿ 18 ರನ್‌ ಗಳಿಸಿ ತಂಡಕ್ಕೆ ನೆರವಾದರು.

ಹುಬ್ಬಳ್ಳಿ ಟೈಗರ್ಸ್‌ ಬೌಲರ್‌ಗಳಿಂದ ಉತ್ತಮ ಪ್ರದರ್ಶನ: ಹುಬ್ಬಳ್ಳಿ ಟೈಗರ್ಸ್‌ನ ಬೌಲರ್‌ಗಳು ಉತ್ತಮ ರೀತಿಯಲ್ಲಿ ಬೌಲಿಂಗ್‌ ಪ್ರದರ್ಶಿಸಿದರು. ಪ್ರತಿಯೊಬ್ಬ ಬೌಲರ್‌ಗಳು ಯಶಸ್ಸು ಕಾಣುವಲ್ಲಿ ಸಫಲರಾದರು. ವಾಸುಕಿ ಕೌಶಿಕ್‌ ಕೇವಲ 19 ರನ್‌ ನೀಡಿ ಮೈಸೂರಿನ ಅಮೂಲ್ಯ 3 ವಿಕೆಟ್​ಗಳನ್ನು ಪಡೆದರು. ಈ ಮೂಲಕ ಮೈಸೂರು ತಂಡದ ರನ್‌ ಗಳಿಕೆಗೆ ಆರಂಭದಲ್ಲೇ ಕಡಿವಾಣ ಹಾಕಿದರು.

ಮೈಸೂರಿನ ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ ಶೂನ್ಯ ಗಳಿಕೆಯೊಂದಿಗೆ ಪೆವಿಲಿಯನ್‌ ಸೇರಿದ್ದು ತಂಡದ ಕಡಿಮೆ ಮೊತ್ತಕ್ಕೆ ಮತ್ತೊಂದು ಕಾರಣವಾಯಿತು. ರೋಹನ್‌ ನವೀನ್‌ 37ರನ್‌ ನೀಡಿ 2 ವಿಕೆಟ್‌ ಪಡೆದರು. ಶರಣ್‌ ಗೌಡ್‌, ಗ್ನೇಶ್ವರ್‌ ನವೀನ್‌ ಮತ್ತು ಸ್ವಪ್ನಿಲ್‌ ಯಲವೆ ತಲಾ 1 ವಿಕೆಟ್‌ ಪಡೆದು ಮೈಸೂರು ಆಟಗಾರರನ್ನು ಕಟ್ಟಿ ಹಾಕಿದರು.

ಸಂಕ್ಷಿಪ್ತ ಸ್ಕೋರ್‌: ಮೈಸೂರು ವಾರಿಯರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 145 ರನ್‌ (ಪವನ್‌ ದೇಶಪಾಂಡೆ 57, ಶುಭಾಂಗ್‌ ಹೆಗ್ಡೆ 22, ಶಿವರಾಜ್‌ 26, ವಾಸುಕಿ ಕೌಶಿಕ್‌ 19ಕ್ಕೆ 3, ರೋಹನ್‌ ನವೀನ್‌ 37ಕ್ಕೆ 2).

ಹುಬ್ಬಳ್ಳಿ ಟೈಗರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 143 (ಲವ್‌ನೀತ್‌ ಸಿಸೋಡಿಯಾ 22, ಶ್ರೀನಿವಾಸ್‌ ಶರತ್‌ 21, ಅಭಿಮನ್ಯು ಮಿಥುನ್‌ 27, ಶರಣ್‌ ಗೌಡ್‌ 31, ಆನಂದ ದೊಡ್ಡ ಮನಿ 10*, ವಿದ್ಯಾಧರ ಪಾಟೀಲ್‌ 24ಕ್ಕೆ 4, ಅದಿತ್ಯ ಗೋಯಲ್‌ 26ಕ್ಕೆ 2, ಶ್ರೇಯಸ್‌ ಗೋಪಾಲ್‌ 27ಕ್ಕೆ 2).

ಓದಿ: ವದಂತಿ ನಂಬಬೇಡಿ.. ದಾಂಪತ್ಯ ಜೀವನದಲ್ಲಿ ಬಿರುಕು ವಿಚಾರಕ್ಕೆ ಚಹಲ್ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.