ETV Bharat / sports

ನಾನು ಇನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ಆಡುವುದಿಲ್ಲ: ಕ್ರಿಸ್ ಮೋರಿಸ್​ - ಕ್ರಿಸ್ ಮೋರಿಸ್ ನಿವೃತ್ತಿ

ದಕ್ಷಿಣ ಆಫ್ರಿಕ ತಂಡಕ್ಕಾಗಿ ನನ್ನ ಆಡುವ ದಿನಗಳು ಮುಗಿದಿವೆ. ಇದರ ಬಗ್ಗೆ ಕ್ರಿಕೆಟ್​ ದಕ್ಷಿಣ ಆಫ್ರಿಕಾಗೆ ಕೂಡ ಅರಿವಿದೆ. ನಾನು ಅಧಿಕೃತವಾಗಿ ನಿವೃತ್ತಿ ಹೇಳಿಲ್ಲವಾದರೂ ಅವರಿಗೆ ನಾನು ಈಗ ಯಾವ ಹಂತದಲ್ಲಿದ್ದೇನೆ ಎನ್ನುವುದು ತಿಳಿದಿದೆ. ನಾನು ಎಲ್ಲಿದ್ದೇನೆ ಎನ್ನುವುದು ನನಗೂ ತಿಳಿದಿದೆ. ಆದರೆ ಸಿಎಸ್​ಎಗೆ ಆಡುವ ನನ್ನ ದಿನಗಳು ಮುಗಿದಿವೆ ಎಂದು ಮೋರಿಸ್ ಸ್ಪೋರ್ಟ್ಸ್​ಕೀಡಾಗೆ ತಿಳಿಸಿದ್ದಾರೆ.

My playing days for South Africa are done :Chris Morris
ಕ್ರಿಸ್ ಮೋರಿಸ್
author img

By

Published : Oct 28, 2021, 10:26 PM IST

ಜೋಹಾನ್ಸ್​ಬರ್ಗ್​: ಟಿ20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ತಂಡದಿಂದ ಅವಕಾಶ ವಂಚಿತನಾಗಿರುವ ಆಲ್​ರೌಂಡರ್ ಕ್ರಿಸ್ ಮೋರಿಸ್​ ತಾವೂ ಭವಿಷ್ಯದಲ್ಲಿ ತಮ್ಮ ದೇಶದ ಪರ ಆಡುವುದು ಅಸಾಧ್ಯ ಎಂದು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕ ತಂಡಕ್ಕಾಗಿ ನನ್ನ ಆಡುವ ದಿನಗಳು ಮುಗಿದಿವೆ. ಇದರ ಬಗ್ಗೆ ಕ್ರಿಕೆಟ್​ ದಕ್ಷಿಣ ಆಫ್ರಿಕಾಗೆ ಕೂಡ ಅರಿವಿದೆ. ನಾನು ಅಧಿಕೃತವಾಗಿ ನಿವೃತ್ತಿ ಹೇಳಿಲ್ಲವಾದರೂ ಅವರಿಗೆ ನಾನು ಈಗ ಯಾವ ಹಂತದಲ್ಲಿದ್ದೇನೆ ಎನ್ನುವುದು ತಿಳಿದಿದೆ. ನಾನು ಎಲ್ಲಿದ್ದೇನೆ ಎನ್ನುವುದು ನನಗೂ ಗೊತ್ತು . ಆದರೆ, ದಕ್ಷಿಣ ಆಫ್ರಿಕಾ ತಂಡಕ್ಕೆ ಆಡುವ ನನ್ನ ದಿನಗಳು ಮುಗಿದಿವೆ ಎಂದು ಮೋರಿಸ್ ಸ್ಪೋರ್ಟ್ಸ್​ಕೀಡಾಗೆ ತಿಳಿಸಿದ್ದಾರೆ.

34 ವರ್ಷದ ಆಟಗಾರನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಯಾವಾಗ ಎಂದು ಕೇಳಿದ್ದಕ್ಕೆ, ತಮಗೆ ನಿವೃತ್ತಿ ಹೇಳುವುದಕ್ಕೆ ಇಷ್ಟವಿಲ್ಲ, ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ ತಮ್ಮ ಪಾಲಿಗೆ ಮುಗಿದ ಅಧ್ಯಾಯ, ತಮ್ಮ ಗಮನ ಏನಿದ್ದರೂ ಡೊಮೆಸ್ಟಿಕ್ ಕ್ರಿಕೆಟ್ ಮತ್ತು ಟಿ-20 ಲೀಗ್​ಗಳ ಕಡೆಗೆ ಎಂದು ಮೋರಿಸ್​ ಹೇಳಿದ್ದಾರೆ.

ಮೂರು ಮಾದರಿಗಳಲ್ಲೂ ದಕ್ಷಿಣ ಆಫ್ರಿಕಾ ಪ್ರತಿನಿಧಿಸಿರುವುದಕ್ಕೆ ಅದೃಷ್ಟಶಾಲಿ. ನನ್ನಿಂದ ಸಾಧ್ಯವಾದಷ್ಟು ತಂಡಕ್ಕೆ ಹಿಂತಿರುಗಿಸಿದ್ದೇನೆ. ನನಗೆ ನನ್ನ ವೃತ್ತಿಜೀವನದ ಬಗ್ಗೆ ತೃಪ್ತಿ ಹೊಂದಿದ್ದೇನೆ " ಎಂದು ಆಲ್ ರೌಂಡರ್ ಉಲ್ಲೇಖಿಸಿದ್ದಾರೆ.

2012ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪದಾರ್ಪಣೆ ಮಾಡಿದ ಮೋರಿಸ್​ 42 ಏಕದಿನ​, 23 ಟಿ-20 ಮತ್ತು 4 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. 2019ರ ಏಕದಿನ ವಿಶ್ವಕಪ್​ನಲ್ಲಿ ಕೊನೆಯ ಬಾರಿ ದಕ್ಷಿಣ ಆಫ್ರಿಕಾ ಪರ ಆಡಿದ್ದರು.

ಇದನ್ನು ಓದಿ:ಪಾಂಡ್ಯ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ: ಮುಂಬೈ ಲಿಸ್ಟ್​ನಲ್ಲಿದ್ದಾರೆ ಈ 3 ಆಟಗಾರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.