ETV Bharat / sports

ದ್ರಾವಿಡ್​ ಕೋಚ್​ ಆಗಿರುವುದು ನಮ್ಮ ಅದೃಷ್ಟ.. ಅವರ ಅಡಿಯಲ್ಲಿ ಕೆಲಸ ಮಾಡಲು ಇಷ್ಟ ಎಂದ ಭುವಿ! - ಉಪನಾಯಕ ಭುವನೇಶ್ವರ್ ಕುಮಾರ್​

ಅವರೊಂದಿಗೆ ಹೆಚ್ಚಿನ ಒಡನಾಟ ಏನು ಇಲ್ಲ. ಆದರೆ, ರಾಷ್ಟ್ರೀಯ ಕ್ರಿಕೆಟ್​ ಅಕ್ಯಾಡೆಮಿಯಲ್ಲಿ ಕೆಲವೊಂದು ಸಲ ಮುಖಾಮುಖಿಯಾಗಿದ್ದೇನೆ. ಆದರೆ, ಸದ್ಯ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ತರಬೇತಿ ನಿಜಕ್ಕೂ ಅದ್ಭುತವಾಗಿದೆ..

Bhuvneshwar
Bhuvneshwar
author img

By

Published : Jul 6, 2021, 6:03 PM IST

ಕೊಲಂಬೊ(ಶ್ರೀಲಂಕಾ): ಜುಲೈ 13ರಿಂದ ಆತಿಥೇಯ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಲಿದೆ. ತಂಡಕ್ಕೆ ನಾಯಕನಾಗಿ ಶಿಖರ್​ ಧವನ್​ ಹಾಗೂ ಉಪನಾಯಕನಾಗಿ ಭುವನೇಶ್ವರ್ ಕುಮಾರ್​ ಆಯ್ಕೆಯಾಗಿದ್ದು, ಕೋಚ್​ ಜವಾಬ್ದಾರಿ ರಾಹುಲ್​ ದ್ರಾವಿಡ್​ಗೆ ನೀಡಲಾಗಿದೆ.

ಇದೇ ಮೊದಲ ಸಲ ರಾಹುಲ್​ ದ್ರಾವಿಡ್​ ಸೀನಿಯರ್​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಆಟಗಾರರಿಂದಲೂ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅವರ ಬಗ್ಗೆ ಇದೀಗ ಭುವನೇಶ್ವರ್​ ಕುಮಾರ್ ಮಾತನಾಡಿದ್ದು, ತಂಡದ ಕೋಚ್​​ ಆಗಿ ನೇಮಕಗೊಂಡಿರುವುದು ನಮ್ಮ ಅದೃಷ್ಟವಾಗಿದೆ. ದ್ರಾವಿಡ್​ ಅವರ ತರಬೇತಿಯಡಿ ಆಟವಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ.

ತಂಡದ ಉಪನಾಯಕನಾಗಿ ಆಯ್ಕೆಯಾಗಿರುವುದಕ್ಕೆ ಸಂತಸವಿದೆ. ರಾಹುಲ್​ ದ್ರಾವಿಡ್ ಎಲ್ಲ ರೀತಿಯ ಒತ್ತಡ​ವನ್ನ ಸುಲಭವಾಗಿ ನಿರ್ವಹಿಸುತ್ತಾರೆ. ಅವರು(ರಾಹುಲ್​ ದ್ರಾವಿಡ್​) ಆರ್​ಸಿಬಿ ತಂಡದಲ್ಲಿದ್ದ ಸಂದರ್ಭದಲ್ಲಿ ನಾನು ಎದುರಾಳಿ ತಂಡದ ಆಟಗಾರನಾಗಿ ಆಡಿದ್ದೇನೆ. ಅವರೊಂದಿಗೆ ಹೆಚ್ಚಿನ ಒಡನಾಟ ಏನು ಇಲ್ಲ. ಆದರೆ, ರಾಷ್ಟ್ರೀಯ ಕ್ರಿಕೆಟ್​ ಅಕ್ಯಾಡೆಮಿಯಲ್ಲಿ ಕೆಲವೊಂದು ಸಲ ಮುಖಾಮುಖಿಯಾಗಿದ್ದೇನೆ. ಆದರೆ, ಸದ್ಯ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ತರಬೇತಿ ನಿಜಕ್ಕೂ ಅದ್ಭುತವಾಗಿದೆ ಎಂದು ಭುವಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ಗುರು​ ರಾಹುಲ್‌ ದ್ರಾವಿಡ್‌​ ಬಗ್ಗೆ ಪೃಥ್ವಿ ಶಾ ಗುಣಗಾನ ಹೀಗಿತ್ತು..

ರಾಹುಲ್​ ದ್ರಾವಿಡ್​ ಕೋಚ್​ ಆಗಿರುವುದು ನಮ್ಮ ಅದೃಷ್ಟ. ಅವರೊಂದಿಗೆ ಕೆಲಸ ಮಾಡಲು ನಾನು ಬಯಸಿದ್ದೆ ಎಂದಿರುವ ಭುವಿ,ತಂಡದಲ್ಲಿರುವ ಅನೇಕ ಯುವ ಆಟಗಾರರು ಅವರ ತರಬೇತಿ ಪಡೆದುಕೊಂಡಿದ್ದು, ಇಂಡಿಯಾ ಎ ತಂಡದ ಕೋಚ್​ ಆಗಿದ್ದ ಸಂದರ್ಭದಲ್ಲಿ ಸಲಹೆ-ಸೂಚನೆ ಪಡೆದುಕೊಂಡಿದ್ದಾರೆ ಎಂದರು.

ಕಳೆದ ಕೆಲ ದಿನಗಳ ಹಿಂದೆ ಕೋಚ್​​ ದ್ರಾವಿಡ್​​ ಬಗ್ಗೆ ಮಾತನಾಡಿದ್ದ ಪೃಥ್ವಿ ಶಾ, ​ಅವರ ಕೋಚಿಂಗ್​ ಅದ್ಭುತವಾಗಿರುತ್ತದೆ. ಕ್ರಿಕೆಟ್​ ಬಗ್ಗೆ ಅಪಾರ ಜ್ಞಾನವಿದ್ದು, ಅದನ್ನ ಹಂಚಿಕೊಳ್ಳುವ ರೀತಿ ಕೂಡ ಅತ್ಯುತ್ತಮವಾಗಿದೆ. ರಾಹುಲ್​ ಸರ್​ ಅಡಿಯಲ್ಲಿ ಕ್ರಿಕೆಟ್​​ ಆಡುವುದು ನಿಜಕ್ಕೂ ವಿಭಿನ್ನವಾದ ಖುಷಿ ನೀಡುತ್ತದೆ ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.