ETV Bharat / sports

ಇಂದು ಕೌರ್​ vs ಮಂಧಾನ: ನಾಯಕಿ, ಉಪ ನಾಯಕಿ ನಡುವಣ ಕದನಕ್ಕೆ ಬ್ರಬೋರ್ನ್ ಸ್ಟೇಡಿಯಂ ಸಜ್ಜು - ETV Bharath Kannada news

ಇಂದಿನ ವನಿತೆಯರ ಕ್ರಿಕೆಟ್‌ ಪ್ರೀಮಿಯರ್​ ಲೀಗ್​ನಲ್ಲಿ ಭಾರತ ತಂಡದ ನಾಯಕಿ ಮತ್ತು ಉಪ ನಾಯಕಿಯರ ತಂಡ ಮುಖಾಮುಖಿ ನಡೆಯಲಿದೆ.

Mumbai Indians Women vs Royal Challengers Bangalore Women
ಕೌರ್​ VS ಮಂಧಾನ
author img

By

Published : Mar 6, 2023, 2:26 PM IST

ಮುಂಬೈ: ಇಂದು ಸಂಜೆ 7:30ಕ್ಕೆ ಹರ್ಮನ್​ಪ್ರೀತ್​ ಕೌರ್​ ಮತ್ತು ಸ್ಮೃತಿ ಮಂಧಾನ ನಡುವೆ ಹಣಾಹಣಿ ನಡೆಯಲಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ವುಮೆನ್ಸ್​ ಪ್ರೀಮಿಯರ್​ ಲೀಗ್​ನ 4ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಾಗಲಿವೆ.

ಬೃಹತ್​ ರನ್​ ಚೇಸ್​ ಮಾಡುವಲ್ಲಿ ಸೋತ ಮಂಧಾನ ತಂಡ ಮೊದಲ ಗೆಲುವಿಗೆ ಹಾತೊರೆಯುತ್ತಿದ್ದರೆ, ಉದ್ಘಾಟನಾ ಪಂದ್ಯದಲ್ಲಿ ಗುಜರಾತ್​ ಮಣಿಸಿ ಗೆದ್ದ ಹುರುಪಿನಲ್ಲಿ ಮತ್ತೆ ಕೌರ್​ ಪಡೆ ಕಣಕ್ಕಿಳಿಯುತ್ತಿದೆ. ಪಂದ್ಯದ ಸೋಲಿಗೆ ಬೌಲಿಂಗ್​ನಲ್ಲಿ 20 ರನ್​ ಹೆಚ್ಚು ನೀಡಿದ್ದೇ ಕಾರಣ ಎಂದಿರುವ ಮಂಧಾನ ಇಂದು ಬೌಲಿಂಗ್​ನಲ್ಲಿ ನಿಯಂತ್ರಣ ಸಾಧಿಸಿ ಮುಂಬೈ ತಂಡವನ್ನು ಕಟ್ಟಿ ಹಾಕುತ್ತಾರಾ ಕಾದುನೋಡಬೇಕಿದೆ.

ನಿನ್ನೆಯ ಡೆಲ್ಲಿ ಎದುರಿನ ಪಂದ್ಯದಲ್ಲಿ ಏಳು ಬೌಲರ್​ಗಳನ್ನು ಕಣಕ್ಕಿಳಿಸಿ ಹೊಸ ಪ್ರಯೋಗ ಮಾಡಿದರೂ ಕ್ಯಾಪಿಟಲ್ಸ್​ ರನ್​ ಹೊಳೆ ಹರಿಸುವುದನ್ನು ನಿಲ್ಲಿಸಲಿಲ್ಲ. ಏಳು ಬೌಲರ್​ಗಳು ಬೌಲಿಂಗ್​ ಮಾಡಿದರೂ ವಿಕೆಟ್​ ಪಡೆದದ್ದು ಹೀದರ್ ನೈಟ್ ಮಾತ್ರ. ಅವರು ಎರಡು ವಿಕೆಟ್ ಉರುಳಿಸಿದ್ದರು. ಮಿಕ್ಕೆಲ್ಲ ಬೌಲರ್​ಗಳನ್ನು ಲೀಲಾಜಾಲವಾಗಿ ಡೆಲ್ಲಿ ಬ್ಯಾಟರ್​ಗಳು ದಂಡಿಸಿದ್ದರು.

ಮೊದಲ ಪಂದ್ಯದಲ್ಲೇ ಬೃಹತ್​ ರನ್​ ಗುರಿ: ಉದ್ಘಾಟನಾ ಪಂದ್ಯದಲ್ಲಿ ಎಂಐ 207 ರನ್​ಗಳಿಸುವ ಮೂಲಕ ಬೃಹತ್​ ರನ್ ಕಲೆಹಾಕಿತ್ತು. ನಾಯಕಿ ಕೌರ್​ ಅದ್ಭುತ ಬ್ಯಾಟಿಂಗ್​ ಮಾಡಿ ಚೊಚ್ಚಲ ಡಬ್ಲ್ಯೂಪಿಎಲ್​ ಅರ್ಧಶತಕ ದಾಖಲಿಸಿದ್ದರು. ಹೀಲಿ ಮ್ಯಾಥ್ಯೂಸ್ (47) ಮತ್ತು ಅಮೆಲಿಯಾ ಕೆರ್ (47) ಬ್ಯಾಟಿಂಗ್​ನಲ್ಲಿ ನಾಯಕಿಗೆ ಸಾಥ್ ನೀಡಿದ್ದರು. ​ಆರ್​ಸಿಬಿಗೆ ಈ ಬ್ಯಾಟಿಂಗ್​ ಬಲ ಮುರಿಯುವ ಜವಾಬ್ದಾರಿ ಇದೆ. ಈ ಮೂವರನ್ನು ಕಟ್ಟಿ ಹಾಕಿದಲ್ಲಿ ಮೊತ್ತವನ್ನು ನಿಯಂತ್ರಕ್ಕೆ ತರಬಹುದು.

ಸಣ್ಣ ಪಿಚ್​ ಬ್ಯಾಟರ್‌ಗಳಿಗೆ ಲಾಭ: ಪಿಚ್​ನ ಬೌಂಡರಿ ಚಿಕ್ಕದಾಗಿದ್ದು ಬ್ಯಾಟರ್​ ಇದರ ಲಾಭ ಪಡೆಯುತ್ತಿದ್ದಾರೆ. 55 ಮೀಟರ್​ಗೆ ಬೌಂಡರಿ ಗೆರೆ ಇರುವುದು ಬೃಹತ್​ ರನ್​ ಗಳಿಕೆಗೆ ಕಾರಣವಾಗುತ್ತಿದೆ. ಈ ಲಾಭವನ್ನು ಆರ್​ಸಿಬಿ ಮಹಿಳೆಯರೂ ಬಳಸಿಕೊಳ್ಳಬೇಕಿದ್ದು, ಸಿಕ್ಸ್ ಮತ್ತು ಬೌಂಡರಿಗಳಿಂದ ಹೆಚ್ಚು ರನ್​ ಕದಿಯಬೇಕಿದೆ.

ಸೋತ ಪಿಚ್​ನಲ್ಲೇ ಆರ್​ಸಿಬಿ ಕಣಕ್ಕೆ: ಡೆಲ್ಲಿಯ ರನ್​ ಹೊಳೆಯಲ್ಲಿ ಕೊಚ್ಚಿ ಹೋದ ಸ್ಟೇಡಿಯಂನಲ್ಲೇ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಐ ಅನ್ನು ಎದುರಿಸುತ್ತಿದೆ. ಇಂದೂ ಕೂಡ ಟಾಸ್​ ನಿರ್ಣಾಯಕ ಆಗಲಿದೆ. ಉಭಯ ತಂಡಗಳೂ 200+ ರನ್​ ಬಿಟ್ಟುಕೊಟ್ಟರೆ ಚೇಸಿಂಗ್​ನಲ್ಲಿ ಒತ್ತಡ ಹೆಚ್ಚಾಗಲಿದೆ. ಡಬ್ಲ್ಯೂಪಿಎಲ್​ನ ಎರಡೂ ಪಿಚ್​ಗಳು ಬ್ಯಾಟಿಂಗ್​ ಸ್ನೇಹಿಯಾಗಿದ್ದು, ಮೂರು ಪಂದ್ಯದಲ್ಲಿ ಒಂದು ಇನ್ನಿಂಗ್ಸ್​ ಮಾತ್ರ ಲೋ ಸ್ಕೋರ್​ ಆಗಿದೆ. ಎರಡೂ ತಂಡಗಳು ಅದೇ ಆಟಗಾರರೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಸಂಭವನೀಯ ಮುಂಬೈ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್ ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸಾಬೆಲ್ ವಾಂಗ್, ಅಮನ್‌ಜೋತ್ ಕೌರ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಬಾಲಾ, ಪ್ರಿಯಾನ್ ಕಾಜಿ, ಸೋನಮ್ ಯಾದವ್, ನೀಲಂ ಬಿಷ್ಟ್ ಮತ್ತು ಜಿಂತಿಮಣಿ ಕಲಿತಾ.

ರಾಯಲ್ ಚಾಲೆಂಜರ್ಸ್: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ಸೋಫಿ ಡಿವೈನ್, ಹೀದರ್ ನೈಟ್, ಮೇಗನ್ ಶುಟ್, ಕನಿಕಾ ಅಹುಜಾ, ಡಾನ್ ವ್ಯಾನ್ ನೀಕರ್ಕ್, ಎರಿನ್ ಬರ್ನ್ಸ್, ಪ್ರೀತಿ ಬೋಸ್, ಕೋಮಲ್ ಜಂಜಾದ್, ದಿಶಾ ಶೋಭಾನಾ, ಇಂದ್ರಾಣಿ ರಾಯ್, ಪೂನಂ ಖೇಮ್ನಾರ್, ಸಹನಾ ಪವಾರ್, ಶ್ರೇಯಾಂಕಾ ಪಾಟೀಲ್.

ಇದನ್ನೂ ಓದಿ: ಯುಪಿಗೆ ಜಯ ತಂದಿಟ್ಟ ಗ್ರೇಸ್ ಹ್ಯಾರಿಸ್‌ ಅದ್ಭುತ ಆಟ; ಗುಜರಾತ್‌ಗೆ 2ನೇ ಸೋಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.