ಚೆನ್ನೈ(ತಮಿಳುನಾಡು): ಭಾರತ ಕ್ರಿಕೆಟ್ನಲ್ಲಿ ಮಹೇಂದ್ರ ಸಿಂಗ್ ಧೋನಿ ಹೆಸರು ಮೊದಲ ಪಂಕ್ತಿಯಲ್ಲಿ ಕಾಣುತ್ತದೆ. ನಾಯಕನಾಗಿ ಧೋನಿ ಮಾಡಿದ ಸಾಧನೆ ಈವರೆಗಿನ ಯಾವೊಬ್ಬ ನಾಯಕನೂ ಸರಿಗಟ್ಟಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೇ, ಐಪಿಎಲ್ನಲ್ಲೂ ತಮ್ಮ ಛಾಪು ಮೂಡಿಸಿರುವ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ. ಐಪಿಎಲ್ನಿಂದಲೂ ನಿವೃತ್ತಿ ಅಂಚಿನಲ್ಲಿರುವ ಆಟಗಾರನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ನಿನ್ನೆ ಚೆಪಾಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಘಾರವೇ ಕಾರಣ.
ಇನ್ನು 4 ದಿನದಲ್ಲಿ ಐಪಿಎಲ್ ಮಹಾಸಂಗ್ರಾಮ ಆರಂಭವಾಗಲಿದ್ದು, ಇದಕ್ಕೂ ಮೊದಲು ಎಲ್ಲ ತಂಡಗಳು ತಮ್ಮ ತವರು ಮೈದಾನದಲ್ಲಿ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿವೆ. ಚೆನ್ನೈ ತಂಡವೂ ಕೂಡ ಧೋನಿ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ತಂಡ ತಾಲೀಮು ನಡೆಸುತ್ತಿದೆ. ಸೋಮವಾರ ಅಭ್ಯಾಸಕ್ಕೆಂದು ಮೈದಾನಕ್ಕಿಳಿದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಕ್ರೀಡಾಂಗಣ ತುಂಬೆಲ್ಲಾ ಕಿವಿಗಡಚಿಕ್ಕುವಂತೆ ಧೋನಿ ಧೋನಿ ಎಂದು ಕೂಗಿದರು.
-
Nayagan meendum varaar… 💛🥳#WhistlePodu #Anbuden 🦁 pic.twitter.com/3wQb1Zxppe
— Chennai Super Kings (@ChennaiIPL) March 27, 2023 " class="align-text-top noRightClick twitterSection" data="
">Nayagan meendum varaar… 💛🥳#WhistlePodu #Anbuden 🦁 pic.twitter.com/3wQb1Zxppe
— Chennai Super Kings (@ChennaiIPL) March 27, 2023Nayagan meendum varaar… 💛🥳#WhistlePodu #Anbuden 🦁 pic.twitter.com/3wQb1Zxppe
— Chennai Super Kings (@ChennaiIPL) March 27, 2023
ವಿಡಿಯೋ ಭರ್ಜರಿ ವೈರಲ್: ಇದರ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ದೊಡ್ಡ ಕರತಾಡನ, ಹರ್ಷೋದ್ಘಾರ ಅಭಿಮಾನಿಗಳ ತಲೈವಾಗೆ ಸಿಕ್ಕಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ. ಕಳೆದ ಋತುವಿನ ಐಪಿಎಲ್ನಲ್ಲಿ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಪ್ರದರ್ಶನ ನೀಡದೇ ಒಂಬತ್ತನೇ ಸ್ಥಾನ ಗಳಿಸಿತ್ತು.
ಪಂದ್ಯಾವಳಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. 10 ಸೋಲುಗಳನ್ನು ಕಾಣುವ ಮೂಲಕ ತಂಡ ಕಳಪೆ ಆಟವಾಡಿತ್ತು. ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೆ ತಂಡದ ನಾಯಕತ್ವವನ್ನು ವಹಿಸಲಾಗಿತ್ತು. ಜಡೇಜಾ ನಾಯಕನಲ್ಲದೇ, ವೈಯಕ್ತಿಕ ಪ್ರದರ್ಶನದಲ್ಲೂ ಯಶ ಕಾಣದ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಹುದ್ದೆಯನ್ನು ಟೂರ್ನಿಯ ಅರ್ಧದಲ್ಲೇ ತೊರೆದಿದ್ದರು. ಬಳಿಕ ಧೋನಿ ಅವರನ್ನೇ ನಾಯಕರನ್ನಾಗಿ ಮರುನೇಮಕ ಮಾಡಲಾಗಿತ್ತು.
ಗುಜರಾತ್ ಎದುರು ಮೊದಲ ಸೆಣಸು: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 31 ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಧೋನಿ ಸಾರಥ್ಯದ ಚೆನ್ನೈ ತಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಪಾಂಡ್ಯ ಭಾರತ ಕ್ರಿಕೆಟ್ನ ಟಿ20 ತಂಡದ ನಾಯಕರಾಗಿದ್ದು, ಮಾಜಿ ನಾಯಕನ ಸವಾಲನ್ನು ಎದುರಿಸಲಿದ್ದಾರೆ.
ಈ ಋತುವಿನಲ್ಲಿ ಸಿಎಸ್ಕೆ ಇಂಗ್ಲೆಂಡ್ನ ಆಲ್ರೌಂಡರ್ ಬೆನ್ಸ್ಟೋಕ್ಸ್ ಅವರನ್ನು 16.25 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ನಾಲ್ಕು ಬಾರಿಯ ಚಾಂಪಿಯನ್ ತಂಡ ಈ ಬಾರಿ ಧೋನಿ, ರವೀಂದ್ರ ಜಡೇಜಾ, ಕೈಲ್ ಜೇಮಿಸನ್, ಮಹೇಶ್ ತೀಕ್ಷಣ, ಋತುರಾಜ್ ಗಾಯಕ್ವಾಡ್ ಸೇರಿದಂತೆ ಪ್ರಮುಖ ಆಟಗಾರರನ್ನು ಹೊಂದಿದೆ.
ಓದಿ: IPL 2023: ಧೋನಿಯೇ ಮಾಡಿರುವ ನಿವೃತ್ತಿ ಪ್ಲಾನ್ ಇದು, ಚೆಪಾಕ್ ಸ್ಟೇಡಿಯಂನಲ್ಲಿ ತಯಾರಿ ಹೇಗಿದೆ ಗೊತ್ತಾ?