ನವದೆಹಲಿ : ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶಕನಾಗಿ ಆಯ್ಕೆಯಾಗಿದ್ದಾರೆ. ಆದರೆ, ಈ ಹುದ್ದೆಗೆ ಅವರು ಯಾವುದೇ ರೀತಿಯ ಗೌರವ ಧನ ತೆಗೆದುಕೊಳ್ಳುತ್ತಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಒಮಾನ್ ಮತ್ತು ಯುಎಇಯಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಭಾರತ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.
-
"MS Dhoni is not charging any honorarium for his services as the mentor of Indian team for the T20 World Cup," BCCI Secretary Jay Shah to ANI
— ANI (@ANI) October 12, 2021 " class="align-text-top noRightClick twitterSection" data="
(file photo) pic.twitter.com/DQD5KaYo7v
">"MS Dhoni is not charging any honorarium for his services as the mentor of Indian team for the T20 World Cup," BCCI Secretary Jay Shah to ANI
— ANI (@ANI) October 12, 2021
(file photo) pic.twitter.com/DQD5KaYo7v"MS Dhoni is not charging any honorarium for his services as the mentor of Indian team for the T20 World Cup," BCCI Secretary Jay Shah to ANI
— ANI (@ANI) October 12, 2021
(file photo) pic.twitter.com/DQD5KaYo7v
2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆಲುವು ಸಾಧಿಸಿದ ಬಳಿಕ ಭಾರತ ತಂಡ ಮತ್ತೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ, ಈ ಬಾರಿ ಶತಾಯಗತಾಯವಾಗಿ ಗೆಲ್ಲಲೇಬೇಕೆಂದು ನಿರ್ಧರಿಸಿದೆ ಭಾರತ ತಂಡ.
2007ರಲ್ಲಿ ಭಾರತ ತಂಡದ ನಾಯಕರಾಗಿದ್ದ ಎಂಎಸ್ ಧೋನಿ ಅವರನ್ನು ಪ್ರಸ್ತುತ ವಿಶ್ವಕಪ್ ತಂಡಕ್ಕೆ ಮಾರ್ಗದರ್ಶಕರಾಗಿ ನೇಮಕ ಮಾಡಿದೆ. ಆದರೆ, ಈ ಹುದ್ದೆಗೆ ಧೋನಿ ಯಾವುದೇ ರೀತಿಯ ಗೌರವ ಧನವನ್ನು ಪಡೆಯುತ್ತಿಲ್ಲ ಎನ್ನುವುದನ್ನು ಜಯ್ ಶಾ ಬಹಿರಂಗ ಪಡಿಸಿದ್ದಾರೆ.
ಎಂಎಸ್ ಧೋನಿ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಯಾವುದೇ ರೀತಿಯ ಗೌರವಧನ ಪಡೆಯುತ್ತಿಲ್ಲ ಎಂದು ಶಾ ಎಎನ್ಐಗೆ ತಿಳಿಸಿದ್ದಾರೆ.
ಇದನ್ನು ಓದಿ: ಕೋಚ್ ರಾಹುಲ್, ಮೆಂಟರ್ ಧೋನಿ: ಈ ತಂತ್ರ ವರ್ಕೌಟ್ ಆಗಲಿದೆ ಎಂದ ಎಂಎಸ್ಕೆ ಪ್ರಸಾದ್