ETV Bharat / sports

ಕೃಷಿಯಲ್ಲಿ ಖುಷಿ ಕಾಣುತ್ತಿರುವ ಧೋನಿ.. ಟ್ರ್ಯಾಕ್ಟರ್​ ಏರಿ ಗದ್ದೆಯಲ್ಲಿ ಉಳುಮೆ - ವಿಡಿಯೋ ಪೋಸ್ಟ್​

ಎಂಎಸ್​ ಧೋನಿ ಎರಡು ವರ್ಷಗಳ ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, ತಮ್ಮ ಫಾರ್ಮ್ ಹೌಸ್‌ನಲ್ಲಿ ಟ್ರ್ಯಾಕ್ಟರ್​ ಏರಿ ಉಳುಮೆ ಮಾಡುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ms-dhoni-driving-tractor-in-field-share-video-on-instagram
ಕೃಷಿಯಲ್ಲಿ ಖುಷಿ ಕಾಣುತ್ತಿರುವ ಧೋನಿ: ಟ್ರ್ಯಾಕ್ಟರ್​ ಏರಿ ಗದ್ದೆಯಲ್ಲಿ ಉಳುಮೆ
author img

By

Published : Feb 9, 2023, 3:04 PM IST

ನವದೆಹಲಿ: ಟೀಂ ಇಂಡಿಯಾದ ಕೂಲ್​ ಕ್ಯಾಪ್ಟನ್​ ಎಂದೇ ಖ್ಯಾತಿ ಪಡೆದಿದ್ದ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದು, ಸದ್ಯ ಕುಟುಂಬದೊಂದಿಗೆ ಕಾಲ ಕಳೆಯುತ್ತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೇಷ್ಠ ಅನುಭವಿ ಬ್ಯಾಟ್ಸ್‌ಮನ್​ ಆಗಿರುವ ಎಂಎಸ್​ ತಮ್ಮ ವಿಭಿನ್ನ ಶೈಲಿಯ ಕಾರಣದಿಂದ ಯಾವಾಗಲೂ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಧೋನಿ ಟ್ರ್ಯಾಕ್ಟರ್​ ಏರಿ ಗದ್ದೆಯಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಹೌದು, ಕ್ರಿಕೆಟ್​ ಮೈದಾನದಿಂದ ಬಹುತೇಕ ದೂರ ಸರಿದಿರುವ ಎಂ ಎಸ್​ ಧೋನಿ ಈಗ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂದರೆ ಸ್ವತಃ ಅವರೇ ಹಂಚಿಕೊಂಡಿರುವ ವಿಡಿಯೋ ಗದ್ದೆಯಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋ ತುಣುಕು. ತಮ್ಮ ಗದ್ದೆಯಲ್ಲಿ ಟ್ರ್ಯಾಕ್ಟರ್​ ಚಲಾಯಿಸುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಧೋನಿ ಪೋಸ್ಟ್​ ಮಾಡಿದ್ದಾರೆ. ಟ್ರ್ಯಾಕ್ಟರ್​ ಏರಿ ಗದ್ದೆಯಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್​ನಲ್ಲಿ ಪೋಸ್ಟ್​ ಮಾಡಿರುವ ಧೋನಿ ಅದರೊಂದಿಗೆ ತಮ್ಮ ಅನುಭವವನ್ನು ಪದಗಳ ರೂಪದಲ್ಲಿ ವಿವರಿಸಿದ್ದಾರೆ.

ಹೊಸತು ಕಲಿಯಲು ಸಂತೋಷ - ಧೋನಿ: ತಮ್ಮ ಫಾರ್ಮ್​ ಹೌಸ್​ನಲ್ಲಿ ಟ್ರ್ಯಾಕ್ಟರ್​ ಚಲಾಯಿಸುತ್ತಿರುವ ವಿಡಿಯೋ ಪೋಸ್ಟ್​ ಮಾಡಿ, 'ಹೊಸತು ಕಲಿಯಲು ಸಂತೋಷವಾಗಿದೆ. ಆದರೆ, ಕೆಲಸ ಮುಗಿಸಲು ತುಂಬಾ ಸಮಯ ತೆಗೆದುಕೊಂಡಿತು' ಎಂದು ಎಂಎಸ್​ ಧೋನಿ ಬರೆದುಕೊಂಡಿದ್ದಾರೆ. ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ಧೋನಿ ಉಳುಮೆ ಮಾಡುತ್ತಿದ್ದರೆ, ಅವರೊಂದಿಗೆ ಟ್ರ್ಯಾಕ್ಟರ್​ನಲ್ಲಿ ಮತ್ತೊಬ್ಬ ವ್ಯಕ್ತಿ ಸಹ ಕುಳಿತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.

2 ವರ್ಷದ ಬಳಿಕ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್​: ರಾಂಚಿಯಲ್ಲಿ ಕ್ರಿಕೆಟರ್​ ಧೋನಿ ತಮ್ಮ ಫಾರ್ಮ್​ ಹೌಸ್ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಫಾರ್ಮ್ ಹೌಸ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಧೋನಿ, ತಮ್ಮ ಗದ್ದೆಯಲ್ಲಿ ಹಣ್ಣು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಈ ಹಿಂದೆ ಸ್ಟ್ರಾಬೆರಿ ಸವಿಯುತ್ತಾ, ಈ ಹಣ್ಣು ಮಾರುಕಟ್ಟೆ ಹೋಗಲು ಸಿದ್ಧವಾಗಿದೆ ಎಂದು ಧೋನಿ ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದರು. ಇದಾದ ಎರಡು ವರ್ಷಗಳ ನಂತರ ಮತ್ತೆ ಫಾರ್ಮ್ ಹೌಸ್‌ನಲ್ಲಿ ಶ್ರಮಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಲಕ್ಷಾಮತರ ಜನರು ಲೈಕ್, ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಇನ್ನು, 2020ರ ಆಗಸ್ಟ್ 15ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ತಮ್ಮ ಅಂತಾರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 538 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 44.96ರ ಸರಾಸರಿಯಲ್ಲಿ 21,834 ರನ್​ಗಳನ್ನು ಗಳಿಸಿದ್ದಾರೆ. ಜೊತೆಗೆ 16 ಶತಕಗಳು ಮತ್ತು 108 ಅರ್ಧ ಶತಕಗಳು ಸೇರಿವೆ. ಮತ್ತೊಂದೆಡೆ, ಐಪಿಎಲ್​ನಲ್ಲಿ ಮುಂದುವರೆದಿರುವ ಧೋನಿ ಸದ್ಯ 2023ನೇ ಆವೃತ್ತಿಗೆ ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಧೋನಿ ಫಾರ್ಮ್​ ಹೌಸ್​ ಡೈರಿಯಲ್ಲಿ ಪ್ರತಿ ದಿನ 500 ಲೀಟರ್​ ಹಾಲು.. ಲೀಟರ್​ಗೆ 55-130 ರೂ.ಗೆ ಮಾರಾಟ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.