ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಒಂದಿಲ್ಲೊಂದು ವಿಷಯಕ್ಕೆ ಟ್ರೆಂಡ್‌ನಲ್ಲಿರುತ್ತಾರೆ. ಇದೀಗ ಏನು ಹೊಸ ಸುದ್ದಿ ಅಂತ ಕೇಳಿದ್ರಾ? ಈ ಫೋಟೋ ನೋಡಿ..
ಧೋನಿ ಹೊಸ ಬಗೆಯಲ್ಲಿ ಹೇರ್ ಕಟಿಂಗ್ ಮಾಡಿಸಿಕೊಂಡಿದ್ದು, ಅಭಿಮಾನಿಗಳು ಮನಸೋತಿದ್ದಾರೆ. ತನ್ನ ಹೊಸ ಕೇಶ ವಿನ್ಯಾಸದ ಫೋಟೋಗಳನ್ನು ಸೆಲೆಬ್ರಿಟಿಗಳ ಕೇಶ ವಿನ್ಯಾಸ ಮಾಡುವ ಆಲಿಮ್ ಹಕೀಮ್ ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಜಾಹೀರಾತಿಗೋಸ್ಕರ ಧೋನಿ ಟೀಂ ಇಂಡಿಯಾ ಜರ್ಸಿ ತೊಟ್ಟಿದ್ದರು.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಧೋನಿ ಐಪಿಎಲ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿವೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ.