ETV Bharat / sports

ನಿವೃತ್ತಿ ನಂತರವೂ ವಿಶ್ವದ 2ನೇ ಶ್ರೀಮಂತ ಕ್ರಿಕೆಟಿಗನ ಸ್ಥಾನ ಉಳಿಸಿಕೊಂಡ ಎಂ.ಎಸ್.ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ಮುನ್ನಡೆಸುತ್ತಿರುವ ಧೋನಿ, ಜಾಹೀರಾತುಗಳು ಮತ್ತು ಪ್ರೋಮೋಗಳನ್ನು ಒಳಗೊಂಡ ಲೀಗ್‌ನ ಮುಖ್ಯ ವ್ಯಕ್ತಿ ಆಗಿದ್ದಾರೆ. ಇನ್ನು ವಿಶ್ವದಾದ್ಯಂತ ಲೀಗ್‌ನ ಬೆಳವಣಿಗೆ ಮತ್ತು ಜನಪ್ರಿಯತೆಗೆ ಸಹಾಯ ಮಾಡುವ ಭಾರತೀಯ ಕ್ರಿಕೆಟ್‌ನ ಪ್ರಮುಖ ಮುಖಗಳಲ್ಲಿ ಇವರೂ ಒಬ್ಬರು.

MS Dhoni 2nd richest cricketer in the world
ಎಂಎಸ್ ಧೋನಿ
author img

By

Published : Aug 29, 2021, 7:19 PM IST

ನವದೆಹಲಿ: ಭಾರತಕ್ಕೆ 2 ವಿಶ್ವಕಪ್​ ಸೇರಿದಂತೆ 3 ಐಸಿಸಿ ಟ್ರೋಫಿ ತಂದುಕೊಟ್ಟಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಜಗತ್ತಿನ 2ನೇ ಶ್ರೀಮಂತ ಕ್ರಿಕೆಟಿಗನಾಗಿ ಮುಂದುವರಿದಿದ್ದಾರೆ.

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಧೋನಿ, ಜಾಹೀರಾತು ಪ್ರಪಂಚದಲ್ಲಿ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ನಂತರ ವಿಶ್ವದಲ್ಲಿ ಹೆಚ್ಚು ಬ್ರ್ಯಾಂಡ್​ಗಳಿಗೆ ರಾಯಾಭಾರಿಯಾಗಿ ಮಿಂಚಿದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರೂ ಅವರ ಬ್ರ್ಯಾಂಡ್​ ಮೌಲ್ಯ ಮಾತ್ರ ಇಂದಿಗೂ ಕುಸಿದಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ಮುನ್ನಡೆಸುತ್ತಿರುವ ಧೋನಿ, ಜಾಹೀರಾತುಗಳು ಮತ್ತು ಪ್ರೋಮೋಗಳನ್ನು ಒಳಗೊಂಡ ಲೀಗ್‌ನ ಮುಖ್ಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ವಿಶ್ವದಾದ್ಯಂತ ಲೀಗ್‌ನ ಬೆಳವಣಿಗೆ ಮತ್ತು ಜನಪ್ರಿಯತೆಗೆ ಸಹಾಯ ಮಾಡುವ ಭಾರತೀಯ ಕ್ರಿಕೆಟ್‌ನ ಪ್ರಮುಖ ಮುಖಗಳಲ್ಲಿ ಇವರೂ ಒಬ್ಬರು.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರೂ ವರ್ಷಕ್ಕೆ ಸುಮಾರು 74 ಕೋಟಿ ರೂ ಆದಾಯ ಗಳಿಸುತ್ತಿದ್ದಾರೆ. ಅವರು ಐಪಿಎಲ್ ಮೂಲಕವೇ 15 ಕೋಟಿ ರೂ ಪಡೆಯುತ್ತಿದ್ದಾರೆ. ಡ್ರೀಮ್​ ಇಲೆವೆನ್, ಕಾರ್ಸ್​ 23, ಇಂಡಿಯನ್​ ಟೆರೈನ್, ರೆಡ್​ ಬಸ್​, ಕೋಲ್ಗೇಡ್​, ಪೆನೆರಾಯ್, ಲೈವ್​ಫಾಸ್ಟ್​, ಇಂಡಿಗೋ ಪೇಯಿಂಟ್ಸ್​, ಗೋಡ್ಯಾಡಿ, ಭಾರತ್ ಮ್ಯಾಟ್ರಿಮೋನಿ, ಮಾಸ್ಟರ್​ಕಾರ್ಡ್​ ಇಂಡಿಯಾ, ಸುಮಧುರ, ಸ್ನಿಕರ್ಸ್​ ಇಂಡಿಯಾ, ಓರಿಯಂಟ್​, ನೆಟ್​ಮೆಡ್ಸ್​ ಡಾಟ್​ಕಾಂ​, ಸೌಂಡ್​ ಲಾಜಿಕ್​, ವಾರ್ಡ್​ವಿಜ್​, ಎಸ್​ಆರ್​ಎಂಬಿ ಸ್ಟೀಲ್​, ಲಾವಾ, ಒರಿಯೋ, ಸವೆನ್​, ಜೆಡ್​ಬ್ಲಾಕ್​ ಅಗರ್​ಬತ್ತೀಸ್​, ಗಲ್ಫ್​ ಆಯಿಲ್ ಇಂಡಿಯಾ ಸೇರಿದಂತೆ ಇನ್ನೂ ಕೆಲವು ಬ್ರ್ಯಾಂಡ್​ಗಳಿಗೆ ಧೋನಿ ರಾಯಭಾರಿ.

ಧೋನಿ ಜಾಹೀರಾತುಗಳ ಆಧಾರದ ಮೇಲೆ ದಿನವೊಂದಕ್ಕೆ 4 ರಿಂದ 6 ಕೋಟಿ ರೂ ಚಾರ್ಜ್​ ಮಾಡುತ್ತಾರೆ. ಈ ಮೂಲಕ ಟೀಮ್ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹೊರತುಪಡಿಸಿದರೆ ಧೋನಿ ಎರಡನೇ ಗರಿಷ್ಠ ಬ್ರ್ಯಾಂಡ್​ ಮೌಲ್ಯ ಹೊಂದಿರುವ ಕ್ರಿಕೆಟಿಗನಾಗಿದ್ದಾರೆ.

sportingfree.com ಮಾಹಿತಿಯ ಪ್ರಕಾರ, ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಭಾರತದ ಸಚಿನ್​ 1,090 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ. 2ನೇ ಸ್ಥಾನದಲ್ಲಿರುವ ಎಂ.ಎಸ್.ಧೋನಿ ಸುಮಾರು 767 ಕೋಟಿಯೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ನಾಯಕ 638 ಕೋಟಿಯೊಡನೆ 3ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ರೊನಾಲ್ಡೊಗೆ ವಾರಕ್ಕೆ ₹4.85 ಕೋಟಿ ವೇತನ: ಗಳಿಕೆಯಲ್ಲಿ ಮೆಸ್ಸಿಗೆ ಅಗ್ರಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.