ETV Bharat / sports

ICC Ranking: ಏಷ್ಯಾಕಪ್​ ಫೈನಲ್​ನಲ್ಲಿ ಸಿರಾಜ್​ ಕಾಮಾಲ್​ ಬೌಲಿಂಗ್​.. ಎಂಟು ತಿಂಗಳ ನಂತರ ಮತ್ತೆ ಅಗ್ರ ಸ್ಥಾನ

ICC ODI bowling ranking: ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ 6 ವಿಕೆಟ್​ ಕಬಳಿಸಿ ಪಂದ್ಯ ಶ್ರೇಷ್ಠ ಪ್ರದರ್ಶನ ನೀಡಿದ ಸಿರಾಜ್​ ಐಸಿಸಿ ಶ್ರೇಯಾಂಕದಲ್ಲಿ 8 ತಿಂಗಳ ನಂತರ ಮತ್ತೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

Mohammed Siraj
Mohammed Siraj
author img

By ETV Bharat Karnataka Team

Published : Sep 20, 2023, 6:39 PM IST

ದುಬೈ: ಒಂದು ಅದ್ಭುತ ಆಟ ಎಲ್ಲವನ್ನೂ ಬದಲಾಯಿಸುತ್ತದೆ ಎಂಬುದಕ್ಕೆ ಮೊಹಮ್ಮದ್​ ಸಿರಾಜ್​ ಸಾಕ್ಷಿಯಾಗಿದ್ದಾರೆ. ಏಷ್ಯಾಕಪ್​ ಫೈನಲ್​ ಪ್ರದರ್ಶನದ ನಂತರ ಕ್ರಿಕೆಟ್​ ಹೊರತಾಗಿಯೂ ಸಿರಾಜ್​ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಫೈನಲ್​ ಪಂದ್ಯದ ಪ್ರದರ್ಶನ ಕಾರಣ ಐಸಿಸಿ ಶ್ರೇಯಾಂಕದಲ್ಲೂ ಸಿರಾಜ್​ ಅದ್ಭುತ ಏರಿಕೆ ಕಂಡಿದ್ದಾರೆ. ಬರೋಬ್ಬರಿ ಎಂಟು ಸ್ಥಾನಗಳನ್ನು ಜಿಗಿದಿರುವ ಸಿರಾಜ್​ ವಿಶ್ವದ ಏಕದಿನ ನಂ.1 ಬೌಲರ್​ ಆಗಿದ್ದಾರೆ.

ಏಷ್ಯಾಕಪ್​ ಫೈನಲ್​ ಪಂದ್ಯವನ್ನು ಯಾರೂ ಮರೆತಿರಲು ಸಾಧ್ಯವಿಲ್ಲ. ಈ ಪಂದ್ಯ ನಡೆದು ಇಂದು 3ನೇ ದಿನ ಆಗಿದೆ ಅಷ್ಟೇ. ಟಾಸ್​ ಗೆದ್ದು ಬ್ಯಾಟಿಂಗ್​ಗೆ ಮೈದಾನಕ್ಕೆ ಬಂದಿದ್ದ ಲಂಕಾಗೆ ಮೊದಲ ಓವರ್​ನಲ್ಲಿ ಬುಮ್ರಾ ಒಂದು ವಿಕೆಟ್​ ಪಡೆದು ಶಾಕ್​ ಕೊಟ್ಟರೆ, ಸಿರಾಜ್​ ಪಂದ್ಯದ ನಾಲ್ಕನೇ ಓವರ್​ನಲ್ಲಿ 4 ವಿಕೆಟ್​ ಕಿತ್ತು ಲಂಕಾದ ಬಲವನ್ನೇ ಮುರಿದಿದ್ದರು. ಮತ್ತೆ ಪಂದ್ಯದ 6ನೇ ಮತ್ತು 12ನೇ ಓವರ್​ನಲ್ಲಿ ಒಂದೊಂದು ವಿಕೆಟ್​ ಪಡೆದಿದ್ದರು. ಪಂದ್ಯದಲ್ಲಿ 7 ಓವರ್​ ಮಾಡಿದ್ದ ಸಿರಾಜ್​ 21 ರನ್​ ಕೊಟ್ಟು 6 ವಿಕೆಟ್​ ಉರುಳಿಸಿದ್ದರು.

  • Top of the world 🔝

    India's ace pacer reigns supreme atop the @MRFWorldwide ICC Men's ODI Bowler Rankings 😲

    — ICC (@ICC) September 20, 2023 " class="align-text-top noRightClick twitterSection" data=" ">

ಈ ಬೌಲಿಂಗ್​ ಪ್ರದರ್ಶನದಿಂದ ಮೊಹಮ್ಮದ್ ಸಿರಾಜ್ ಒಟ್ಟಾರೆ ಏಷ್ಯಾಕಪ್​ನಲ್ಲಿ 12.2 ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ಉರುಳಿಸಿದರು. ಇದರಿಂದ ಅವರು ಹ್ಯಾಜಲ್‌ವುಡ್, ಟ್ರೆಂಟ್ ಬೌಲ್ಟ್, ರಶೀದ್ ಖಾನ್ ಮತ್ತು ಮಿಚೆಲ್ ಸ್ಟಾರ್ಕ್‌ರನ್ನು ಹಿಂದಿಕ್ಕಿ ರ್‍ಯಾಂಕಿಂಗ್​ನಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಏಕದಿನ ಸರಣಿಯಲ್ಲಿ ಕೇಶವ್​ ಮಹಾರಾಜ್​ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿ ಉತ್ತಮ ಪ್ರದರ್ಶನ ನೀಡಿದ್ದರು. ಇದರಿಂದ 9 ಸ್ಥಾನಗಳ ಏರಿಕೆ ಕಂಡಿದ್ದು, 15ನೇ ಶ್ರೆಯಾಂಕವನ್ನು ಅಲಂಕರಿಸಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ ಜೋಡಿ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಅವರ ಶ್ರೇಯಾಂಕಗಳನ್ನು ಕ್ರಮವಾಗಿ ನಂ. 4 ಮತ್ತು 5 ನೇ ಸ್ಥಾನಕ್ಕೆ ಸುಧಾರಿಸಿದ್ದಾರೆ.

ಬ್ಯಾಟಿಂಗ್​ ಶ್ರೇಯಾಂಕ: ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 182 ರನ್​ನ ಅದ್ಭುತ ಬ್ಯಾಟಿಂಗ್​ ಪ್ರದರ್ಶನದಿಂದ ಗಮನಾರ್ಹ 20 ಸ್ಥಾನಗಳ ಏರಿಕೆ ಕಂಡಿದ್ದು, 9ನೇ ಶ್ರೇಯಾಂಕ ಅಲಂಕರಿಸಿದ್ದಾರೆ. 9ನೇ ಸ್ಥಾನದಲ್ಲಿದ್ದ ರೋಹಿತ್​ ಶರ್ಮಾ 10ಕ್ಕೆ ಕುಸಿತ ಕಂಡಿದ್ದಾರೆ.

ವಿಶ್ವಕಪ್​ ಹಿನ್ನೆಲೆಯಲ್ಲಿ ಏಕದಿನ ನಿವೃತ್ತಿಯನ್ನು ಹಿಂಪಡೆದು ಮತ್ತೆ ತಂಡಕ್ಕಾಗಿ ಆಡುತ್ತಿರು ಆಲ್​ರೌಂಡರ್​ ಬೆನ್​ಸ್ಟೊಕ್ಸ್​​ ಶ್ರೇಯಾಂಕದಲ್ಲೂ ಏರಿಕೆ ಕಂಡಿದೆ. ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್​ ಪರ ಏಕದಿನದಲ್ಲಿ ಅತಿ ಹೆಚ್ಚು ರನ್​ (182) ಕಲೆ ಹಾಕಿದ ದಾಖಲೆ ಮಾಡಿದ್ದರು. ಈ ಬ್ಯಾಟಿಂಗ್​​ನಿಂದಾಗಿ ಸ್ಟೋಕ್ಸ್​ ರ್‍ಯಾಂಕಿಂಗ್​ನಲ್ಲೂ ಏರಿಕೆ ಕಂಡಿದ್ದು 36ನೇ ಸ್ಥಾನವನ್ನು ತಲುಪಿದ್ದಾರೆ.

ಇದನ್ನೂ ಓದಿ: ICC trophy: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023.. ರಾಮೋಜಿ ಫಿಲ್ಮ್ ಸಿಟಿ ಅಂಗಳದಲ್ಲಿ ವಿಶ್ವಕಪ್ ಟ್ರೋಫಿ​​ ಪ್ರದರ್ಶನಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.