ETV Bharat / sports

ಲಾರ್ಡ್ಸ್​ನಲ್ಲಿ ಸಿರಾಜ್​ರಿಂದ ಸರ್ವಶ್ರೇಷ್ಠ ಪ್ರದರ್ಶನ.. ಕಪಿಲ್ ದೇವ್ ದಾಖಲೆ ಪುಡಿ ಪುಡಿ.. - ಮೊಹಮ್ಮದ್ ಸಿರಾಜ್ ದಾಖಲೆ

ಈ ಪಂದ್ಯದಲ್ಲಿ ಸಿರಾಜ್​ 126 ರನ್​ ನೀಡಿ 8 ವಿಕೆಟ್​ ಪಡೆಯುವ ಮೂಲಕ 1982ರಲ್ಲಿ ಮಾಜಿ ನಾಯಕ ಕಪಿಲ್​ ದೇವ್​ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಕಪಿಲ್ ದೇವ್​ 168 ರನ್​ ನೀಡಿ 8 ವಿಕೆಟ್​ ಪಡೆದಿದ್ದು, ಲಾರ್ಡ್ಸ್​ನಲ್ಲಿ ಭಾರತೀಯ ಬೌಲರ್​ನ ಈವರೆಗಿನ ದಾಖಲೆಯಾಗಿತ್ತು..

Mohammed Siraj achieve best bowling figures
ಮೊಹಮ್ಮದ್ ಸಿರಾಜ್ ದಾಖಲೆ
author img

By

Published : Aug 17, 2021, 4:54 PM IST

ಲಂಡನ್ : ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ವೇಗಿ ಮೊಹಮ್ಮದ್​ ಸಿರಾಜ್​ 8 ವಿಕೆಟ್ ಪಡೆಯುವ ಮೂಲಕ, ಲಾರ್ಡ್ಸ್​ ಮೈದಾನದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ ಭಾರತೀಯ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಭಾರತ ತಂಡದಲ್ಲಿ ಉದಯೋನ್ಮುಖ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್, ದಿನದಿಂದ ದಿನಕ್ಕೆ ತಮ್ಮ ಬೌಲಿಂಗ್ ಪ್ರದರ್ಶನವನ್ನು ಉತ್ತಮಗೊಳಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 94 ರನ್​ಗಳಿಗೆ 4 ವಿಕೆಟ್​ ಪಡೆದಿದ್ದ ಸಿರಾಜ್, 2ನೇ ಇನ್ನಿಂಗ್ಸ್​ನಲ್ಲಿ ನಿರ್ಣಾಯಕ ಪರಿಸ್ಥಿತಿಯಲ್ಲಿ 4 ವಿಕೆಟ್​ ಪಡೆದು ಭಾರತದ ಐತಿಹಾಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಒಟ್ಟು ಈ ಪಂದ್ಯದಲ್ಲಿ ಸಿರಾಜ್​ 126 ರನ್​ ನೀಡಿ 8 ವಿಕೆಟ್​ ಪಡೆಯುವ ಮೂಲಕ 1982ರಲ್ಲಿ ಮಾಜಿ ನಾಯಕ ಕಪಿಲ್​ ದೇವ್​ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಕಪಿಲ್ ದೇವ್​ 168 ರನ್​ ನೀಡಿ 8 ವಿಕೆಟ್​ ಪಡೆದಿದ್ದು, ಲಾರ್ಡ್ಸ್​ನಲ್ಲಿ ಭಾರತೀಯ ಬೌಲರ್​ನ ಈವರೆಗಿನ ದಾಖಲೆಯಾಗಿತ್ತು.

ಲಾರ್ಡ್ಸ್​ನಲ್ಲಿ ಟಾಪ್ 5 ಬೆಸ್ಟ್​ ಬೌಲಿಂಗ್​​

  • ಮೊಹಮ್ಮದ್ ಸಿರಾಜ್-8/126 (2021)
  • ಕಪಿಲ್ ದೇವ್-8/168 (1982)
  • ಆರ್‌ಪಿ ಸಿಂಗ್-7/117 (2007)
  • ವೆಂಕಟೇಶ್ ಪ್ರಸಾದ್-7/130 (1996)
  • ಇಶಾಂತ್ ಶರ್ಮಾ-7/135(2014)
  • ಅಮರ್ ಸಿಂಗ್-6/71 (1936)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.