ಆಕ್ಲೆಂಡ್ : ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಅತಿ ಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ಗಳಿಸಿದ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
ನ್ಯೂಜಿಲ್ಯಾಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ತಮ್ಮ 12ನೇ ಹಾಗೂ ವೃತ್ತಿ ಜೀವನದ 63ನೇ ಶತಕ ದಾಖಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನ್ಯೂಜಿಲ್ಯಾಂಡ್ನ ಬ್ಯಾಟರ್ ಡೆಬೀ ಹಾಕ್ಲೇ ಅವರ ಗರಿಷ್ಠ ಅರ್ಧಶತಗಳ ವಿಶ್ವದಾಖಲೆಯನ್ನು ಸರಿಗಟ್ಟಿದರು. ಈ ಇಬ್ಬರು ಬ್ಯಾಟರ್ಗಳು 12 ಬಾರಿ 50ರ ಗಡಿ ದಾಟಿದ್ದಾರೆ.
ಮಿಥಾಲಿ ರಾಜ್ ಈ ಪಂದ್ಯದಲ್ಲಿ ಭಾರತ 28ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ ಯಸ್ತಿಕಾ ಭಾಟಿಯಾ ಜೊತೆಗೂಡಿ 130 ರನ್ ಸೇರಿಸಿದ್ದರು. ಅವರು 96 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 68 ರನ್ಗಳಿಸಿದ್ದರು. ಭಾಟಿಯಾ 59 ಮತ್ತು ಹರ್ಮನ್ಪ್ರೀತ್ ಕೌರ್ ಅವರ 57 ರನ್ಗಳ ನೆರವಿನಿಂದ ಭಾರತ 277 ರನ್ಗಳಸಿತ್ತು.
ಇದನ್ನೂ ಓದಿ:ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ 200ರನ್ ಸಿಡಿಸಿದ - ನೀಡಿದ ತಂಡಗಳ ವಿವರ ಇಲ್ಲಿದೆ