ಮ್ಯಾಂಚೆಸ್ಟರ್(ಇಂಗ್ಲೆಂಡ್): ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಸಿಕ್ಕ ಹೊಡಿಬಡಿ ಆಟಗಾರನೆಂದರೆ ಅದು ವಿಕೆಟ್ ಕೀಪರ್ ರಿಷಬ್ ಪಂತ್. ಮೈದಾನದಲ್ಲಿ ತಾನು ಇದ್ದಷ್ಟು ಹೊತ್ತು ಚೆಂಡನ್ನು ಬೌಂಡರಿ ಗೆರೆಯಾಚೆ ದಾಟಿಸುವುದೇ ಈತನ ಗುರಿ. ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಪಂತ್ ಆಟ ಕಂಡು ಭಾರತ ಮಾತ್ರವಲ್ಲ ಇಂಗ್ಲೆಂಡ್ನ ಹಾಲಿ, ಮಾಜಿ ಆಟಗಾರರೇ ಅವಕ್ಕಾಗಿದ್ದಾರೆ.
-
What a cricketer @RishabhPant17 is .. Incredibly entertaining but also very smart .. #ENGvIND
— Michael Vaughan (@MichaelVaughan) July 17, 2022 " class="align-text-top noRightClick twitterSection" data="
">What a cricketer @RishabhPant17 is .. Incredibly entertaining but also very smart .. #ENGvIND
— Michael Vaughan (@MichaelVaughan) July 17, 2022What a cricketer @RishabhPant17 is .. Incredibly entertaining but also very smart .. #ENGvIND
— Michael Vaughan (@MichaelVaughan) July 17, 2022
"ಭಾರತ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಒಬ್ಬ ಅದ್ಭುತ ಮನರಂಜನೆಕಾರ ಮತ್ತು ಅಷ್ಟೇ ಸ್ಮಾರ್ಟ್ ಕ್ರಿಕೆಟರ್" ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 5 ವಿಕೆಟ್ಗಳಿಂದ ಗೆದ್ದು ಸರಣಿ ಜಯ ಸಾಧಿಸಿತು.
ಇದಕ್ಕೆ ಕಾರಣ ರಿಷಬ್ ಪಂತ್ರ ಭರ್ಜರಿ ಶತಕ. ಪಂತ್ 113 ಎಸೆತಗಳಲ್ಲಿ ಅಜೇಯ 125 ರನ್ ಗಳಿಸಿದರು. 16 ಭರ್ಜರಿ ಬೌಂಡರಿ ಮತ್ತು 2 ಸಿಕ್ಸರ್ಗಳು ಇನಿಂಗ್ಸ್ನಲ್ಲಿದ್ದವು. ಎಂ.ಎಸ್.ಧೋನಿ, ರಾಹುಲ್ ದ್ರಾವಿಡ್ ಮತ್ತು ಕೆ.ಎಲ್.ರಾಹುಲ್ ನಂತರ ಶತಕ ಗಳಿಸಿದ ನಾಲ್ಕನೇ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಪಾಂಡ್ಯಾ ದಾಖಲೆ: ಪಂದ್ಯದ ಇನ್ನೊಂದು ತುದಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 4 ವಿಕೆಟ್ ಕಬಳಿಸಿದ್ದಲ್ಲದೇ ಬ್ಯಾಟಿಂಗ್ನಲ್ಲೂ ಮಿಂಚಿದ್ದು 55 ಎಸೆತಗಳಲ್ಲಿ 71 ರನ್ ಗಳಿಸಿದರು. ಈ ಮೂಲಕ ಪಾಂಡ್ಯಾ 4 ವಿಕೆಟ್ ಮತ್ತು 50ಕ್ಕೂ ಅಧಿಕ ರನ್ ಬಾರಿಸಿದ 5ನೇ ಭಾರತದ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಈ ಮೊದಲು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್ ಮತ್ತು ಕೆ. ಶ್ರೀಕಾಂತ್ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ: ಹಾರ್ದಿಕ್ ಮಿಂಚು, ಪಂತ್ ಭರ್ಜರಿ ಶತಕ : ಸರಣಿ ಗೆದ್ದ ಭಾರತ