ETV Bharat / sports

WTC ಫೈನಲ್​ನಲ್ಲಿ ಭಾರತದ ಒಬ್ಬ ಸೇರಿ ಈ 3 ಆಟಗಾರರು ಮಿಂಚಬಹುದು : ಮೈಕಲ್ ವಾನ್ - ಇಂಡಿಯಾ vs ನ್ಯೂಜಿಲ್ಯಾಂಡ್

ಜೆಮೀಸನ್ ಕಿವೀಸ್​ನ ಕೀ ಬೌಲರ್ ಆಗಿದ್ದಾರೆ. ಅವರು​ ಆಡಿರುವ 6 ಪಂದ್ಯಗಳಲ್ಲಿ 36 ವಿಕೆಟ್ ಪಡೆದಿದ್ದಾರೆ. ಇನ್ನು ರಿಷಭ್ ಪಂತ್ ಭಾರತ ತಂಡದ ಬಹುದೊಡ್ಡ ಮ್ಯಾಚ್ ವಿನ್ನರ್​ ಆಗಿದ್ದಾರೆ..

ಮೈಕಲ್ ವಾನ್
ಮೈಕಲ್ ವಾನ್
author img

By

Published : May 29, 2021, 9:37 PM IST

Updated : Jun 10, 2021, 4:18 PM IST

ನವದೆಹಲಿ : ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್, ನ್ಯೂಜಿಲ್ಯಾಂಡ್​ನ ಕೈಲ್ ಜೆಮೀಸನ್ ಮತ್ತು ಬಿಜೆ ವಾಟ್ಲಿಂಗ್ ಅವರ ಆಟವನ್ನು WTC ಫೈನಲ್​ನಲ್ಲಿ ಎದುರುನೋಡಬಹುದು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ತಿಳಿಸಿದ್ದಾರೆ.

ಜೂನ್​ 18ರಿಂದ ಸೌತಾಂಪ್ಟನ್​ನ ಏಜಿಯಸ್ ಬೌಲ್​ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಚೊಚ್ಚಲ ಆವೃತ್ತಿಯ ಫೈನಲ್​ ಪಂದ್ಯ ನಡೆಯಲಿದೆ.

ಟೆಸ್ಟ್​ ವೃತ್ತಿ ಜೀವನವನ್ನು ಅದ್ಭುತವಾಗಿ ಆರಂಭಿಸಿದ ಕೈಲ್ ಜೆಮೀಸನ್​ ಅವರ ಆಟವನ್ನು ಮೊದಲು ನೋಡಲು ಬಯಸುತ್ತೇನೆ. ನಂತರ ರಿಷಭ್ ಪಂತ್​.

ಏಕೆಂದರೆ, ಅವರು ವಿಶ್ವ ಕ್ರಿಕೆಟ್​ನಲ್ಲಿ ಸ್ಟಾರ್​ ಆಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಅವರ ನಂಬಲಸಾಧ್ಯವಾಗಿದ್ದಾರೆ. ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ವಿರುದ್ಧ ಅವರ ಆಟ ಅದ್ಭುತವಾಗಿತ್ತು.

ನಂತರ ನಾನು ಬಿಜೆ ವಾಟ್ಲಿಂಗ್ ಅವರನ್ನ ಆಯ್ಕೆ ಮಾಡುತ್ತೇನೆ, ಅವರು ನ್ಯೂಜಿಲ್ಯಾಂಡ್​ ಕ್ರಿಕೆಟ್​ನ ಅದ್ಭುತ ಸೇವಕನಾಗಿದ್ದಾರೆ ಎಂದು ವಾನ್​ ಹೇಳಿದ್ದಾರೆ.

ರಿಷಭ್ ಪಂತ್
ರಿಷಭ್ ಪಂತ್

ಜೆಮೀಸನ್ ಕಿವೀಸ್​ನ ಕೀ ಬೌಲರ್ ಆಗಿದ್ದಾರೆ. ಅವರು​ ಆಡಿರುವ 6 ಪಂದ್ಯಗಳಲ್ಲಿ 36 ವಿಕೆಟ್ ಪಡೆದಿದ್ದಾರೆ. ಇನ್ನು ರಿಷಭ್ ಪಂತ್ ಭಾರತ ತಂಡದ ಬಹುದೊಡ್ಡ ಮ್ಯಾಚ್ ವಿನ್ನರ್​ ಆಗಿದ್ದಾರೆ.

ಅವರು ಕಳೆದ ಆಸ್ಟ್ರೇಲಿಯಾ ಪ್ರವಾಸದಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಅಮೋಘ ಫಾರ್ಮ್​ನಲ್ಲಿದ್ದಾರೆ. ಅವರ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್​ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧ 3-1ರಲ್ಲಿ ಟೆಸ್ಟ್​ ಸರಣಿ ಗೆದ್ದು ಬೀಗಿತ್ತು.

ಇನ್ನು ವಾಟ್ಲಿಂಗ್ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಮುಗಿಯುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿದ್ದಾರೆ.

ಇದನ್ನು ಓದಿ:ವಮಿಕಾ ಹೆಸರಿನ ಅರ್ಥ,ಮಗಳ ಫೋಟೋ ಶೇರ್ ಮಾಡದಿರಲು ಕಾರಣ ತಿಳಿಸಿದ ಕೊಹ್ಲಿ

Last Updated : Jun 10, 2021, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.