ETV Bharat / sports

ಡೆಲ್ಲಿ ಬೌಲರ್ಸ್​ ದಾಳಿಗೆ ಮಕಾಡೆ ಮಲಗಿದ ಮುಂಬೈ: ಪಂತ್​ ಪಡೆಗೆ 130 ರನ್​ಗಳ ಸಾಧಾರಣ ಗುರಿ - ಐಪಿಎಲ್ ನಾಕೌಟ್

ಪ್ಲೇ ಆಫ್​ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ ತಂಡ ಕೇವಲ 129 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

Delhi vs Mumbai
ಡೆಲ್ಲಿ vs ಮುಂಬೈ
author img

By

Published : Oct 2, 2021, 5:23 PM IST

Updated : Oct 2, 2021, 5:35 PM IST

ಶಾರ್ಜಾ: ಪ್ಲೇ ಆಫ್​ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಸ್​ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ ತಂಡ ಕೇವಲ 129 ರನ್​ಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿದೆ.

ಟಾಸ್​ ಸೋತು ಶಾರ್ಜಾ ಮೈದಾನದಲ್ಲಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ 2ನೇ ಓವರ್​ನಲ್ಲೇ ನಾಯಕ ರೋಹಿತ್ ಶರ್ಮಾ(7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆವೇಶ್ ಖಾನ್ ಓವರ್​​ನಲ್ಲಿ ರಬಾಡಗೆ ಕ್ಯಾಚ್​ ನೀಡಿ ರೋಹಿತ್ ನಿರ್ಗಮಿಸಿದರು.

ಆದರೆ 2ನೇ ವಿಕೆಟ್​ಗೆ ಜೊತೆಯಾದ ಡಿಕಾಕ್ ಮತ್ತು ಸೂರ್ಯಕುಮಾರ್​ ಯಾದವ್​ ನಿಧಾನ ಗತಿಯ ಆಟಕ್ಕೆ ಮುಂದಾದರು. ಆದರೂ 18 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿದ್ದ ಡಿಕಾಕ್​ ಅಕ್ಷರ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದರು. ಈ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದ್ದ ಸೂರ್ಯಕುಮಾರ್ ಯಾದವ್​ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 33ರನ್​ಗಳಿಸಿ ಅಕ್ಷರ್​ಗೆ ಎರಡನೇ ಬಲಿಯಾದರು. ​

ಯಾದವ್​ ವಿಕೆಟ್ ಬೀಳುತ್ತಿದ್ದಂತೆ ಮುಂಬೈ ಪತನ ಆರಂಭವಾಯಿತು. ಕಳೆದ ಪಂದ್ಯದ ಹೀರೋ ಸೌರಭ್ ತಿವಾರಿ 15, ಕೀರನ್ ಪೊಲಾರ್ಡ್​(6), ಹಾರ್ದಿಕ್ ಪಾಂಡ್ಯ(17) ಕೃನಾಲ್ ಪಾಂಡ್ಯ(13) ಕೌಲ್ಟರ್ ನೈಲ್(1), ಜಯಂತ್ ಯಾದವ್​(11) ಡೆಲ್ಲಿ ಬೌಲರ್​ಗಳನ್ನು ಎದುರಿಸುವಲ್ಲಿ ವಿಫಲರಾದರು.

ಅದ್ಭುತ ಬೌಲಿಂಗ್ ನಡೆಸಿದ ಆವೇಶ್ ಖಾನ್​ 15ಕ್ಕೆ 3, ಅಕ್ಷರ್ ಪಟೇಲ್ 21ಕ್ಕೆ 3, ಎನ್ರಿಚ್​ ನಾರ್ಟ್ಜ್​ 19ಕ್ಕೆ1 ಮತ್ತು ಅಶ್ವಿನ್​ 41ಕ್ಕೆ 1 ವಿಕೆಟ್​ ಪಡೆದು ಹಾಲಿ ಚಾಂಪಿಯನ್ನರು ದೊಡ್ಡ ಮೊತ್ತ ಪೇರಿಸದಂತೆ ತಡೆದರು.

Last Updated : Oct 2, 2021, 5:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.