ETV Bharat / sports

ಭಾರತದವನಾಗಿದ್ದರೆ ನನಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತಿರಲಿಲ್ಲವೇನೋ: ಎಬಿ ಡಿ ವಿಲಿಯರ್ಸ್​ - ಆರ್​ಸಿಬಿ ಎಬಿ ಡಿವಿಲಿಯರ್ಸ್

15 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್​ ಲೀಗ್​ ಆಡಿರುವ ಅವರು, ಭಾರತದ ವಿರುದ್ಧ ಭಾರತದ ವಿವಿಧ ಸ್ಟೇಡಿಯಂನಲ್ಲಿ ಆಡುವಾಗ ಸಾವಿರಾರು ಅಭಿಮಾನಿಗಳಿಂದ ಗೌರವ ಗಿಟ್ಟಿಸಿಕೊಂಡಿಸಿದ್ದಾರೆ. ಈ ಬಗ್ಗೆ ಆರ್​ಸಿಬಿಯ ಪೋಡ್​ಕಾಸ್ಟ್​ನಲ್ಲಿ ಮಾತನಾಡುವ ವೇಳೆ "ಇಲ್ಲಿನ ಅಭಿಮಾನಿಗಳ ಪ್ರೀತಿಯನ್ನು ನೋಡಿದಾಗ ನಾನೊಬ್ಬ ಭಾರತೀಯ ಎನ್ನುವ ಭಾವನೆ ಉಂಟಾಗುತ್ತದೆ " ಎಂದಿರುವ ಅವರು, ನಾನೇನಾದರೂ ಇಲ್ಲಿಯ ಕ್ರಿಕೆಟರ್​ ಆಗಿದ್ದರೆ ಭಾರತ ತಂಡದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ತಿಳಿಸಿದ್ದಾರೆ.

AB de Villiers
ಎಬಿ ಡಿ ವಿಲಿಯರ್ಸ್​
author img

By

Published : Feb 9, 2022, 7:55 PM IST

ಹೈದರಾಬಾದ್​(ಡೆಸ್ಕ್​): ಭಾರತೀಯರ ಹೃದಯ ಗೆದ್ದಿರುವ ಕೆಲವೇ ವಿದೇಶಿ ಆಟಗಾರರಲ್ಲಿ ದಕ್ಷಿಣ ಆಫ್ರಿಕಾದ ಲೆಜೆಂಡ್​ ಎಬಿ ಡಿ ವಿಲಿಯರ್ಸ್​ ಅಗ್ರಗಣ್ಯರಾಗಿದ್ದಾರೆ. ಅವರು ಐಪಿಎಲ್​ನಲ್ಲಿ ಬೆಂಗಳೂರು ಫ್ರಾಂಚೈಸಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡಿದರೂ ಅವರನ್ನು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಪ್ರೀತಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

15 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್​ ಲೀಗ್​ ಆಡಿರುವ ಅವರು, ಭಾರತದ ವಿರುದ್ಧ ಭಾರತದ ವಿವಿಧ ಸ್ಟೇಡಿಯಂನಲ್ಲಿ ಆಡುವಾಗ ಸಾವಿರಾರು ಅಭಿಮಾನಿಗಳಿಂದ ಗೌರವ ಗಿಟ್ಟಿಸಿಕೊಂಡಿಸಿದ್ದಾರೆ. ಈ ಬಗ್ಗೆ ಆರ್​ಸಿಬಿಯ ಪೋಡ್​ಕಾಸ್ಟ್​ನಲ್ಲಿ ಮಾತನಾಡುವ ವೇಳೆ "ಇಲ್ಲಿನ ಅಭಿಮಾನಿಗಳ ಪ್ರೀತಿಯನ್ನು ನೋಡಿದಾಗ ನಾನೊಬ್ಬ ಭಾರತೀಯ ಎನ್ನುವ ಭಾವನೆ ಉಂಟಾಗುತ್ತದೆ " ಎಂದಿರುವ ಅವರು, ನಾನೇನಾದರೂ ಇಲ್ಲಿಯ ಕ್ರಿಕೆಟರ್​ ಆಗಿದ್ದರೆ ಭಾರತ ತಂಡದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ತಿಳಿಸಿದ್ದಾರೆ.

" ಕಳೆದ 15 ವರ್ಷಗಳಿಂದ ಭಾರತೀಯ ವಿಧಾನದಲ್ಲಿ ಕೆಲಸ ಮಾಡುತ್ತಾ, ಭಾರತೀಯ ಪ್ರೇಕ್ಷಕರ ಮುಂದೆ ಐಪಿಎಲ್​ನಲ್ಲಿ ಆಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನಿಸ್ಸಂಶಯವಾಗಿ ಭಾರತದಲ್ಲಿ ಬೆಳೆಯುವುದು ಆಸಕ್ತಿದಾಯಕವಾಗಿರುತ್ತಿತ್ತು. ಯಾರಿಗೆ ಗೊತ್ತು? ನಾನು ಇಲ್ಲಿ ಜನಿಸಿದ್ದರೆ ಭಾರತ ತಂಡಕ್ಕಾಗಿ ಆಡುವುದಕ್ಕೆ ಆಗುತ್ತಿರಲಿಲ್ಲವೇನೊ, ಏಕೆಂದರೆ ಭಾರತ ತಂಡದಲ್ಲಿ ಅವಕಾಶ ಪಡೆಯುವುದು ತುಂಬಾ ಕಠಿಣ, ಒಂದು ವೇಳೆ ಸಿಕ್ಕರೆ ಆತ ವಿಶೇಷ ಆಟಗಾರನಾಗಿರಲೇಬೇಕು" ಎಂದು ಎಬಿಡಿ ಹೇಳಿದ್ದಾರೆ.

ದಶಕದ ಕಾಲ ಆರ್​ಸಿಬಿಯಲ್ಲಿ ಆಡಿರುವ ಅವರು, ಫ್ರಾಂಚೈಸಿಯಲ್ಲಿ ಕಳೆದ ಸಮಯ ಅದ್ಭುತವಾಗಿತ್ತು ಎಂದಿದ್ದು, ಇದು ನನ್ನ ಜೀವನವನ್ನು ಬದಲಾಯಿಸಿದ ಪಯಣದ ಎಂದು ಕರೆದಿದ್ದಾರೆ. ಆರ್​ಸಿಬಿ ನನ್ನ ಕುಟುಂಬವಿದ್ದಂತೆ, ನನ್ನ ಪ್ರಕಾರ ಇಲ್ಲಿ ಕಳೆದ 10-11 ವರ್ಷಗಳು ನನ್ನ ಜೀವನವನ್ನು ಬದಲಾಯಿಸಿದ ವರ್ಷಗಳಾಗಿವೆ.

ಅಲ್ಲಿ ಬೇರೆ ಕುಟುಂಬಗಳಂತೆ ಏರಿಳಿತಗಳಿದ್ದವು. ಅಲ್ಲಿ ಸುಂದರ ಮತ್ತು ಅದ್ಭುತ ಪಯಣವಿತ್ತು. ಅಲ್ಲಿ ಉತ್ತಮ ಸಂಬಂಧವಿತ್ತು ಮತ್ತು ಹಾಗೆಯೇ ಕೆಲವು ಬೇಸರದ ಕ್ಷಣಗಳು ಬಂದು ಹೋಗಿವೆ. ಆರ್​ಸಿಬಿಯಲ್ಲಿ ನನ್ನ ವೃತ್ತಿಜೀವನವನ್ನು ಹಿಂತಿರುಗಿ ನೋಡಿದಾಗ, ನನ್ನ ಜೀವನದ ಅತ್ಯಂತ ಅದ್ಭುತ ವರ್ಷಗಳು ಎಂದು ನಾನು ಭಾವಿಸುತ್ತೇನೆ. ಹೀಗೆ ಹೇಳುವುದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಮಿಸ್ಟರ್​ 360 ಹೇಳಿದ್ದಾರೆ.

ಇದನ್ನೂ ಓದಿ:ನಾಯಕತ್ವದಲ್ಲಿ ಧೋನಿ ಮಾರ್ಗ ಅನುಸರಿಸಿ ವಿಫಲರಾದ ರೋಹಿತ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.