ಅಹ್ಮದಾಬಾದ್:ಹಂಗಾಮಿ ನಾಯಕ ಮಯಾಂಕ್ ಅಗರ್ವಾಲ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ಗೆ 167 ರನ್ಗಳ ಟಾರ್ಗೆಟ್ ನೀಡಿದೆ.
ರಾಹುಲ್ ಅನುಪಸ್ಥಿತಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಯುವ ಆರಂಭಿಕ ಬ್ಯಾಟ್ಸ್ಮನ್ ಪ್ರಭಸಿಮ್ರಾನ್ ಸಿಂಗ್ ಕೇವಲ 12 ರನ್ಗಳಿಸಿ ಔಟಾದರು. ಇವರ ಬೆನ್ನಲ್ಲೇ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ 13 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
-
Innings Break: A spectacular knock from @mayankcricket (99 from 58) guides @PunjabKingsIPL to 166/6. #DC had kept it tight until the final over, which fetched 23 runs.https://t.co/Rm0jfZKXXT #PBKSvDC #VIVOIPL #IPL2021 pic.twitter.com/cnCNNn5Vd2
— IndianPremierLeague (@IPL) May 2, 2021 " class="align-text-top noRightClick twitterSection" data="
">Innings Break: A spectacular knock from @mayankcricket (99 from 58) guides @PunjabKingsIPL to 166/6. #DC had kept it tight until the final over, which fetched 23 runs.https://t.co/Rm0jfZKXXT #PBKSvDC #VIVOIPL #IPL2021 pic.twitter.com/cnCNNn5Vd2
— IndianPremierLeague (@IPL) May 2, 2021Innings Break: A spectacular knock from @mayankcricket (99 from 58) guides @PunjabKingsIPL to 166/6. #DC had kept it tight until the final over, which fetched 23 runs.https://t.co/Rm0jfZKXXT #PBKSvDC #VIVOIPL #IPL2021 pic.twitter.com/cnCNNn5Vd2
— IndianPremierLeague (@IPL) May 2, 2021
32ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ಮಯಾಂಕ್ ಮತ್ತು ಡೇವಿಡ್ ಮಲನ್ ಜೊತೆಗೂಡಿ 52 ರನ್ಗಳ ಜೊತೆಯಾಟ ನೀಡಿದರು. ಐಪಿಎಲ್ನಲ್ಲಿ ಇಂದೇ ಮೊದಲ ಪಂದ್ಯವನ್ನಾಡಿದ ಡೇವಿಡ್ ಮಲನ್ 26 ಎಸೆತಗಳಲ್ಲಿ 26 ರನ್ ಸಿಡಿಸಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಇದೇ ಓವರ್ನಲ್ಲಿ ದೀಪಕ್ ಹೂಡ ರನ್ಗಳಿಸುವ ಗೊಂದಲದಲ್ಲಿ ವಿಲಕ್ಷಣ ರೀತಿಯಲ್ಲಿ ರನ್ಔಟ್ ಆಗಿ ಹಿಂತಿರುಗಿದರು.
ನಂತರ ಬಂದ ಶಾರುಖ್ ಖಾನ್ 4 , ಜೋರ್ಡನ್ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಜೊತೆಗಾರರಿಂದ ಬೆಂಬಲ ಸಿಗದಿದ್ದರೂ ಏಕಾಂಗಿಯಾಗಿ ಹೋರಾಡಿದ ಮಯಾಂಕ್ ಅಗರ್ವಾಲ್ 58 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಿತ ಅಜೇಯ 99 ರನ್ಗಳಿಸಿ ಒಂದು ರನ್ನಿಂದ ತಮ್ಮ 2ನೇ ಶತಕ ತಪ್ಪಿಸಿಕೊಂಡರು.
ಒಟ್ಟಾರೆ 20 ಓವರ್ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ 6 ವಿಕೆಟ್ ಕಳೆದುಕೊಂಡು 166 ರನ್ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಕಗಿಸೋ ರಬಾಡ 36ಕ್ಕೆ 3, ಆವೇಶ್ ಖಾನ್ 39ಕ್ಕೆ 1 ಮತ್ತು ಅಕ್ಷರ್ ಪಟೇಲ್ 21ಕ್ಕೆ1 ವಿಕೆಟ್ ಪಡೆರದುಕೊಂಡಿದರು.
ಇದನ್ನು ಓದಿ:ಬಟ್ಲರ್ ಶತಕದ ಬಲ : ಹೈದರಾಬಾದ್ ವಿರುದ್ಧ ರಾಜಸ್ಥಾನ್ ತಂಡಕ್ಕೆ 55 ರನ್ಗಳ ಜಯ