ETV Bharat / sports

ಕೋಚ್​ ರಾಹುಲ್​ ಹೇಳಿದ ಮಾತು ಉಳಿಸಿಕೊಂಡ ಮಯಾಂಕ್​​​.. ಇದಕ್ಕೆ ಕಾರಣವಾಗಿದ್ದು ಸುನಿಲ್​ ಗವಾಸ್ಕರ್​! - ಟೆಸ್ಟ್​​ನಲ್ಲಿ ಮಯಾಂಕ್​ ಶತಕ

ನ್ಯೂಜಿಲ್ಯಾಂಡ್​​ ವಿರುದ್ಧದ 2ನೇ ಟೆಸ್ಟ್​​​ ಪಂದ್ಯದ ಮೊದಲ ಇನ್ನಿಂಗ್ಸ್​​​ನಲ್ಲಿ ಮಯಾಂಕ್​​ ಅಗರವಾಲ್​ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದು, ತಮ್ಮ ಯಶಸ್ಸಿನ ಹಿಂದಿನ ಗುಟ್ಟು ಹೊರಹಾಕಿದ್ದಾರೆ.

Mayank century against New Zealand
Mayank century against New Zealand
author img

By

Published : Dec 3, 2021, 10:46 PM IST

ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್​​ ವಿರುದ್ಧ ಮುಂಬೈನ ವಾಖೆಂಡೆ ಮೈದಾನದಲ್ಲಿ ಎರಡನೇ ಟೆಸ್ಟ್​​ ಪಂದ್ಯ ಇಂದಿನಿಂದ ಆರಂಭಗೊಂಡಿದೆ. ಟೀಂ ಇಂಡಿಯಾದ ಆರಂಭಿಕ, ಕನ್ನಡಿಗ ಮಯಾಂಕ್​​​ ಅಗರವಾಲ್​​ ಭರ್ಜರಿ ಶತಕ ಸಿಡಿಸಿ ಮಿಂಚಿದ್ದು, ನಾಳೆಗೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದ್ದಾರೆ.

Mayank century against New Zealand
ಎರಡು ವರ್ಷಗಳ ನಂತರ ಶತಕ ಸಿಡಿಸಿದ ಮಯಾಂಕ್​​

ಕಳೆದ ಕೆಲ ತಿಂಗಳಿಂದ ಟೀಂ ಇಂಡಿಯಾ ಟೆಸ್ಟ್​ ತಂಡದಿಂದ ಹೊರಗುಳಿದಿದ್ದ ಕನ್ನಡಿಗ ಮಯಾಂಕ್​ ಅಗರವಾಲ್​​ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​​ ಸರಣಿಗೆ ಆಯ್ಕೆಯಾಗಿದ್ದರು. ಮೊದಲ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿದ್ದ ಈ ಪ್ಲೇಯರ್​​ಗೆ ಎರಡನೇ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವ ಖಚಿತತೆ ಇರಲಿಲ್ಲ. ಆದರೆ, ಅದೃಷ್ಟವಶಾತ್​​ ಆಡುವ ಅವಕಾಶ ಪಡೆದುಕೊಂಡ ಮಯಾಂಕ್​ ಇದೀಗ ಭರ್ಜರಿ ಶತಕ ಸಿಡಿಸಿ ಮಿಂಚಿದ್ದು, ಕೋಚ್​ ರಾಹುಲ್​​ ಹೇಳಿದ ಮಾತು ಉಳಿಸಿಕೊಂಡಿದ್ದಾರೆ.

Mayank century against New Zealand
ನ್ಯೂಜಿಲ್ಯಾಂಡ್​ ವಿರುದ್ಧ ಕನ್ನಡಿಗನ ಆರ್ಭಟ

ಕೋಚ್​ ರಾಹುಲ್​ ಹೇಳಿದ್ದೇನು?

ಎರಡನೇ ಟೆಸ್ಟ್​​ ಪಂದ್ಯಕ್ಕಾಗಿ ಆಡುವ 11ರಲ್ಲಿ ಮಯಾಂಕ್​​​ ಚಾನ್ಸ್​ ಪಡೆದುಕೊಳ್ಳುತ್ತಿದ್ದಂತೆ ಕೋಚ್​​​ ರಾಹುಲ್​ ಕೆಲ ನಿಮಿಷಗಳ ಕಾಲ ಚರ್ಚೆ ನಡೆಸಿದ್ದರಂತೆ. ನಿನ್ನ ಕೈಯಲ್ಲಿ ಏನಿದೆ ಎಂಬುದನ್ನ ನಿಯಂತ್ರಣದಲ್ಲಿಟ್ಟುಕೊಂಡು, ಅತ್ಯುತ್ತಮವಾದದ್ದನ್ನು ನೀಡುವಂತೆ ಸಲಹೆ ನೀಡಿದ್ದರು ಎಂದು ಮಯಾಂಕ್​​ ತಿಳಿಸಿದ್ದಾರೆ. ಇದಕ್ಕೂ ಮುಂಚಿತವಾಗಿ ತಾವು ಬ್ಯಾಟಿಂಗ್​​ ದಂತಕಥೆ ಸುನಿಲ್​ ಗವಾಸ್ಕರ್​​ ಅವರ ಬ್ಯಾಟಿಂಗ್​ ವಿಡಿಯೋ ವೀಕ್ಷಣೆ ಮಾಡಿ, ತಮ್ಮ ಶೈಲಿಯಲ್ಲಿ ಸ್ವಲ್ಪ ಮಟ್ಟದ ಬದಲಾವಣೆ ಮಾಡಿಕೊಂಡಿದ್ದರಂತೆ.

ತಂಡಕ್ಕೆ ಖಾಯಂ ಆರಂಭಿಕರಾದ ಕೆಎಲ್​ ರಾಹುಲ್​ ಹಾಗೂ ರೋಹಿತ್​ ಶರ್ಮಾ ಆಗಮಿಸುತ್ತಿದ್ದಂತೆ ತಾವು ಸೈಡ್​ಲೈನ್​ಗೆ ಸೀಮಿತರಾಗಬಹುದು ಎಂಬ ಕಾರಣಕ್ಕಾಗಿ ಬ್ಯಾಟಿಂಗ್​​ನತ್ತ ಗಮಹರಿಸುವಂತೆ ಕೋಚ್​​ ರಾಹುಲ್​ ದ್ರಾವಿಡ್​ ಬುದ್ಧಿ ಮಾತು ಇದೀಗ ಅವರ ಯಶಸ್ಸಿಗೆ ಕಾರಣವಾಗಿದೆ.

ಮೈದಾನದಲ್ಲಿ ಸೆಟ್​​ ಆಗುತ್ತಿದ್ದಂತೆ ದೊಡ್ಡ ಸ್ಕೋರ್ ಮಾಡುವಂತೆ ಅವರು ನನಗೆ ಕಿವಿಮಾತು ಸಹ ಹೇಳಿದ್ದರು. ರಾಹುಲ್​ ಭಾಯ್​​ ಸಂದೇಶ ತುಂಬಾ ಸ್ಪಷ್ಟವಾಗಿತ್ತು ಎಂದು ಮಯಾಂಕ್​ ತಿಳಿಸಿದ್ದಾರೆ.

ಇದನ್ನೂ ಓದಿರಿ: Junior Hockey world Cup: ಸೆಮೀಸ್​​ನಲ್ಲಿ ಜರ್ಮನಿ ವಿರುದ್ಧ ಸೋತು ಹೊರಬಿದ್ದ ಭಾರತ, ಕಂಚಿಗಾಗಿ ಹೋರಾಟ

ಇದೇ ವೇಳೆ, ಇಂಗ್ಲೆಂಡ್​​ನಲ್ಲಿ ನಡೆದ ನೆಟ್​ ಸೆಷನ್​ ವೇಳೆ ತಲೆಗೆ ಪೆಟ್ಟು ಬಿದ್ದ ನಂತರ ಅನೇಕ ಪಂದ್ಯಗಳಿಂದ ಹೊರಗುಳಿಯಬೇಕಾಯಿತು. ಇದು ನನಗೆ ತುಂಬಾ ನಿರಾಸೆ ಮೂಡಿಸಿತ್ತು ಎಂದು ಮಯಾಂಕ್ ಇದೇ ವೇಳೆ ತಿಳಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಆಡದೇ ಇರುವುದು ದುರದೃಷ್ಟಕರ. ಆದರೆ, ಆಟದ ಮೇಲೆ ಕೆಲಸ ಮಾಡಲು ಮುಂದುವರೆಸಿದೆ ಎಂದು ಹೇಳಿಕೊಂಡಿದ್ದಾರೆ. ಆರಂಭದಲ್ಲಿ ನಾವು ಯಾವ ರೀತಿಯಾಗಿ ಬ್ಯಾಟಿಂಗ್ ಮಾಡಲು ಆರಂಭಿಸುತ್ತೇವೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ ಎಂದು ಮಯಾಂಕ್​ ಇದೇ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.